ಅಕ್ಟೋಬರ್‌ 10 ರಿಂದ ಪಿಯುಸಿ ವಿದ್ಯಾರ್ಥಿಗಳಿಗೆ ದಸರಾ ರಜೆ

posted in: ರಾಜ್ಯ | 0

ಬೆಂಗಳೂರು : ರಾಜ್ಯದ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅಕ್ಟೋಬರ್‌ 10 ರಿಂದ 17 ರ ವರೆಗೆ ದಸರಾ ರಜೆ ಘೋಷಣೆ ಮಾಡಿ ಪದವಿ ಪೂರ್ಣ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಪದವಿ ಪೂರ್ವ ತರಗತಿಗಳಿಗೆ ದಸರಾ ರಜೆ ನೀಡುವ ಸಲುವಾಗಿ ಪದವಿ ಪೂರ್ವ ಉಪನ್ಯಾಸಕರ ಸಂಘ ಇಲಾಖೆಗೆ ಮನವಿಯನ್ನು ಮಾಡಿಕೊಂಡಿತ್ತು. ಈ ಹಿಂದೆ ಅಕ್ಟೋಬರ್‌ 13ರಿಂದ ಅಕ್ಟೋಬರ್‌ 20 ರ ವರೆಗೆ ರಜೆಯನ್ನು ಘೋಷಣೆ ಮಾಡಿತ್ತು. ಆದರೆ ಆದೇಶದಲ್ಲಿ ಮಾರ್ಪಾಡು ಮಾಡಿರುವ ಪರಿಷ್ಕೃತ ಆದೇಶ ಹೊರಡಿಸಲಾಗಿದೆ. ಅಕ್ಟೋಬರ್‌ 10 ರಿಂದ 17 ರ ವರೆಗೆ ದಸರಾ ರಜೆ ಘೋಷಣೆ ಮಾಡಲಾಗಿದ್ದು, ಅಕ್ಟೋಬರ್‌ 18 ರಂದು ತರಗತಿಗಳು ಪುನರಾರಂಭವಾಗಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ದಸರಾ ರಜೆ ನೀಡುವ ವಿಚಾರದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಎಡವಟ್ಟು ಮಾಡಿದೆ. ಅಕ್ಟೋಬರ್‌ 18 ರಂದು ಕಾಲೇಜು ಆರಂಭಗೊಳ್ಳಲಿದೆ. ಆದರೆ ಅಕ್ಟೋಬರ್‌ 19 ರಂದು ಈದ್‌ ಮಿಲಾದ್‌, ಅಕ್ಟೋಬರ್‌ 20ರಂದು ವಾಲ್ಮೀಕಿ ಜಯಂತಿಯ ಹಿನ್ನೆಲೆಯಲ್ಲಿ ಸರ್ಕಾರಿ ರಜೆಯಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಅಕ್ಟೋಬರ್‌10 ರಿಂದ ಅಕ್ಟೋಬರ್‌ 20ರ ವರೆಗೆ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಿದೆ.
ಅಲ್ಲದೇ ರಾಜ್ಯದ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಮೇ 1ರಿಂದ ಮೇ 28 ರ ವರೆಗೆ ಬೇಸಿಗೆ ರಜೆಯನ್ನು ಘೋಷಿಸಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ