ಹೆಟೆರೊ ಫಾರ್ಮಾ ಗ್ರೂಪ್ಸ್‌ ಮೇಲೆ ಐಟಿ ಇಲಾಖೆ ದಾಳಿ: 550-ಕೋಟಿ ಗುಪ್ತ ಆದಾಯ ಪತ್ತೆ, 142 ಕೋಟಿ ನಗದು ವಶ

ನವದೆಹಲಿ: ಹೈದರಾಬಾದ್‌ ಮೂಲದ ಹೆಟಿರೊ ಫಾರ್ಮಸುಟಿಕಲ್ಸ್‌ ಸಮೂಹ ಸಂಸ್ಥೆಯ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು, ₹550 ಕೋಟಿ ಮೊತ್ತದ ದಾಖಲೆ ರಹಿತ ಆದಾಯವನ್ನು (ಲೆಕ್ಕವಿಲ್ಲದ) ಪತ್ತೆ ಮಾಡಿದ್ದು, ₹142 ಕೋಟಿಗೂ ಅಧಿಕ ನಗದನ್ನು ವಶಪಡಿಸಿಕೊಂಡಿರುವುದಾಗಿ ಅಧಿಕೃತ ಮೂಲಗಳು ಶನಿವಾರ ತಿಳಿಸಿವೆ.
ದಾಳಿಗೆ ಸಂಬಂಧಿಸಿದಂತೆ ಕಂಪನಿಯ ಅಧಿಕಾರಿಗಳು ತಕ್ಷಣಕ್ಕೆ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ. ಅಕ್ಟೋಬರ್ 6ರಂದು ದೇಶದ ವಿವಿದ ರಾಜ್ಯಗಳಲ್ಲಿನ ಸುಮಾರು 50 ಸ್ಥಳಗಳ ಮೇಲೆ ತೆರಿಗೆ ಇಲಾಖೆ ದಾಳಿ ನಡೆಸಿದೆ. ಶೋಧದ ಸಮಯದಲ್ಲಿ, ಹಲವಾರು ಬ್ಯಾಂಕ್ ಲಾಕರ್‌ಗಳು ಪತ್ತೆಯಾಗಿದ್ದವು. ಅದರಲ್ಲಿ 16 ಲಾಕರ್‌ಗಳನ್ನು ಪರಿಶೀಲಿಸಲಾಗಿದೆ. ಈವರೆಗೆ ದಾಳಿಯಲ್ಲಿ ದಾಖಲೆ ರಹಿತವಾಗಿ ಪತ್ತೆಯಾದ ₹ 142.87 ಕೋಟಿ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಹೇಳಿಕೆಯಲ್ಲಿ ತಿಳಿಸಿದೆ.

0 / 5. 0

ಪ್ರಮುಖ ಸುದ್ದಿ :-   ಉತ್ತಮ ಪ್ರತಿಕ್ರಿಯೆ, ಜನರು ದಾಖಲೆ ಸಂಖ್ಯೆಯಲ್ಲಿ ಎನ್‌ಡಿಎಗೆ ಮತ ಹಾಕಿದ್ದಾರೆ : ಲೋಕಸಭೆ ಚುನಾವಣೆ 1ನೇ ಹಂತದ ಮತದಾನದ ಬಗ್ಗೆ ಪ್ರಧಾನಿ ಮೋದಿ

ನಿಮ್ಮ ಕಾಮೆಂಟ್ ಬರೆಯಿರಿ

advertisement