ತಾಯಿಯ ಕೊಳೆತ ಶವದ ಜೊತೆಯೇ ವಾಸಿಸುತ್ತಿದ್ದ ಪುತ್ರಿಯರು..! ತಮಿಳುನಾಡಿನಲ್ಲಿ ನಡೆದಿದೆ ಈ ವಿಲಕ್ಷಣ ಘಟನೆ

ಇಬ್ಬರು ಮಹಿಳೆಯರು ತಮ್ಮ ಮೃತ ತಾಯಿಯ ಶವವನ್ನು ನಾಲ್ಕು ದಿನಗಳ ಕಾಲ ಮಧ್ಯ ತಮಿಳುನಾಡಿನ ತಿರುಚಿಯ ಮನಪ್ಪರೈನಲ್ಲಿ ತಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದರು, ದೇವರು ಅವಳನ್ನು ಮರಳಿ ತಮ್ಮ ತಾಯಿಯನ್ನು ಜೀವಂತವಾಗಿಸುತ್ತಾನೆ ಎಂಬ ನಂಬಿಕೆಯಿಂದ ಅವರು ಹೀಗೆ ಮಾಡಿದ್ದರು. ಎಂದು ಆಶಿಸಿದರು. ಈ ವಿಲಕ್ಷಣ ಘಟನೆಯಲ್ಲಿ, ಮಹಿಳೆ ತಮ್ಮ ತಾಯಿಯ ಶವವನ್ನು ತೆಗೆದುಕೊಂಡು ಹೋಗಲು ಪೊಲೀಸರು ಮಾಡಿದ ಪ್ರಯತ್ನಗಳನ್ನು ವಿರೋಧಿಸಿದರು ಮತ್ತು ತನ್ನ ತಾಇ ಜೀವಂತವಾಗಿ ಮರಳಿ ಬರುತ್ತಾಎಲೆ ಹೀಗಾಗಿ ಶವ ಮುಟ್ಟಬೇಡಿ ಎಂದು ಪಟ್ಟುಹಿಡಿದರು.ವಯಸ್ಸಾದ ತಾಯಿ ತೀರಿದರೂ ಆಕೆಯ ಕೊಳೆತ ಶವದ ಜೊತೆ ಪುತ್ರಿಯರಿಬ್ಬರು ವಾಸ ಮಾಡಿದ್ದರು.
ಜಿಲ್ಲೆಯ ಸೊಕ್ಕಂಪಟ್ಟೆ ಹಳ್ಳಿಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ನಿವೃತ್ತ ಶಿಕ್ಷಕಿ ಬಿ ಮೇರಿ ತನ್ನಿಬ್ಬರು ಅವಿವಾಹಿತ ಹೆಣ್ಣು ಮಕ್ಕಳೊಂದಿಗೆ ಗ್ರಾಮದಲ್ಲಿ ವಾಸವಾಗಿದ್ದರು. ಕಳೆದ ವಾರ ಆಕೆ ತೀರಿ ಹೋಗಿದ್ದಾಳೆ. ಆದರೆ, ಈ ವಿಷಯನ್ನು ಆಕೆಯ ಪುತ್ರಿಯರು ಯಾರ ಬಳಿಯೂ ಹೇಳಿಕೊಂಡಿಲ್ಲ. ಬದಲಾಗಿ ಮನೆಯ ಬಾಗಿಲು ಹಾಕಿಕೊಂಡು ಶವದ ಜೊತೆ ದಿನ ದೂಡಿದ್ದಾರೆ. ಶವ ಕೊಳೆಯುತ್ತಿದ್ದಂತೆ ಅಕ್ಕಪಕ್ಕದ ಮನೆಯವರ ಮೂಗಿಗೆ ವಾಸನೆ ಬಡಿದಿದೆ. ಇದರಿಂದ ಅನುಮಾನಗೊಂಡ ಅವರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಮನೆಯ ಬಾಗಿಲು ತೆರೆಯುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ. ಕೊನೆಗೆ ಗ್ರಾಮದ ಮುಖಂಡರ ಮನವೋಲಿಕೆಯ ನಂತರ ಪುತ್ರಿಯರಿಬ್ಬರು ಬಾಗಿಲು ತೆರೆದಿದ್ದಾರೆ. ಒಳಗೆ ಹೋಗಿ ನೋಡಿದಾಗ ಕೊಳೆತ ಸ್ಥಿತಿಯಲ್ಲಿ ವೃದ್ಧೆಯ ಶವ ಪತ್ತೆಯಾಗಿದೆ.
ತಾಯಿ ಮೃತಪಟ್ಟಿದ್ದರೂ ಆಕೆ ಇನ್ನೂ ಜೀವಂತ ಇದ್ದಾಳೆ ಎಂದು ಆ ಮಹಿಳೆಯರಿಬ್ಬರು ನಂಬಿದ್ದರು. ಹೀಗಾಗಿ ಮರಣೋತ್ತರ ಪರೀಕ್ಷೆಗೆ ಶವವನ್ನು ನೀಡಲು ನಿರಾಕರಿಸಿದರು. ಪೊಲೀಸರ ಜೊತೆ ವಾಗ್ದಾದ ನಡೆಸಿದರು. ಕೊನೆಗೆ ಆ ಮಹಿಳೆಯರ ಮನವೊಲಿಸಿದ ಪೊಲೀಸರು ಸರ್ಕಾರಿ ಆಸ್ಪತ್ರೆಗೆ ಶವ ಸಾಗಿಸಲಾಯಿತು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ