ಕುಮಟಾ: ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದ ಬಾಳಿಗಾ ವಾಣಿಜ್ಯ ಕಾಲೇಜಿನ ದೀಪಾ ಭಟ್ಟ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಡಾ.ಎ. ವಿ. ಬಾಳಿಗಾ ವಾಣಿಜ್ಯ ಮಹಾ ವಿದ್ಯಾಲಯದ ದೀಪಾ ಭಟ್ಟ ಅವರು 2 ಬಂಗಾರದ ಪದಕ ಮತ್ತು 5 ಪ್ರಮಾಣ ಪತ್ರ ದೊಂದಿಗೆ ಕರ್ನಾಟಕ ವಿಶ್ವ ವಿದ್ಯಾಲಯಕ್ಕೆ ವಾಣಿಜ್ಯ ಪದವಿಯಲ್ಲಿ ಪ್ರಥಮ ರ್ಯಾಂಕ್‌ ಬಂದಿದ್ದಾರೆ.
ದಿನಾಂಕ 9.10.21 ರಂದು ಶನಿವಾರ ಧಾರವಾಡ ದಲ್ಲಿ ನಡೆದ ವಿಶ್ವ ವಿದ್ಯಾಲಯದ ಘಟಿಕೋತ್ಸವದಲ್ಲಿ ವಿಶ್ವ ವಿದ್ಯಾಲಯ ಉಪ ಕುಲಪತಿಗಳಾದ ಪ್ರೊ. ಕೆ. ಬಿ. .ಗುಡಸ್ಸಿ ಅವರು ದೀಪಾ ಭಟ್ಟ ಅವರನ್ನು ಗೌರವಿಸಿ ಪ್ರಮಾಣ ಪತ್ರ ಪ್ರದಾನ ಮಾಡಿದರು.
ಕೆನರಾ ಕಾಲೇಜು ಸೊಸೈಟಿಯ ಪದವಿ ವಾಣಿಜ್ಯ ವಿಭಾಗದಲ್ಲಿ ವಿಶ್ವ ವಿದ್ಯಾಲಯಕ್ಕೆ ಪ್ರಥಮ ರ್ಯಾಂಕ್‌ ಗಳಿಸಿದ್ದು ಇದೇ ಪ್ರಥಮ. ದೀಪಾ ಭಟ್ಟ ಗ್ರಾಮೀಣ ಶಾಲೆಯಲ್ಲಿ ಓದಿದ್ದು ಹಳ್ಳಿಯಿಂದ ಹೋಗಿ ಕರ್ನಾಟಕ ವಿಶ್ವವಿದ್ಯಾಲಯದ ಅಡಿಯಲ್ಲಿ 157 ಪದವಿ ಕಾಲೇಜಿನ ಹತ್ತಾರು ಸಾವಿರ ಪದವಿ ವಿದ್ಯಾರ್ಥಿ ಗಳ ನಡುವೆ ಪ್ರಥಮ ಸ್ಥಾನ ಗಳಿಸಿ ಸಾಧನೆ ಮಾಡಿದ್ದಾರೆ.
ದೀಪಾ ಭಟ್ಟ ಡಾ.ಎ. ವಿ. ಬಾಳಿಗಾ ವಾಣಿಜ್ಯ ಕಾಲೇಜಿನಲ್ಲಿ ಸ್ನಾತ್ತಕೋತ್ತರ ವಿಭಾಗದಲ್ಲಿ M.COM ಅಧ್ಯಯನ ಮಾಡುತ್ತಿದ್ದು .ವಾಣಿಜ್ಯ ಶಾಸ್ತ್ರ ದಲ್ಲಿ ಪಿಎಚ್‌ಡಿ ಮಾಡುವ ಮಹತ್ವಾ ಕಾಂಕ್ಷೆ ಹೊಂದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಸಂಶೋಧನೆಯನ್ನು ಕೈ ಗೊಂಡು ಬಡತನ.. ನಿರುದ್ಯೋಗ ನಿವಾರಿಸುವ ನಿಟ್ಟಿನಲ್ಲಿ ಪ್ರಯತ್ನಿಸುವ ಗುರಿ ಹೊಂದಿದ್ದಾರೆ.
ಡಾ. ಬಾಳಿಗಾ ವಾಣಿಜ್ಯ ವಿದ್ಯಾಲಯಕ್ಕೆ ಕೀರ್ತಿ ತಂದ ದೀಪಾ ಭಟ್ಟ ಅವರನ್ನು ಕೆನರಾ ಕಾಲೇಜು ಸೊಸೈಟಿಯ ಅಧ್ಯಕ್ಷರಾದ ರಘು ಪಿಕಳೆ, ಉಪಾಧ್ಯಕ್ಷ ಪುರುಷೋತ್ತಮ್ ಶಾನಭಾಗ್. ಕಾರ್ಯಾಧ್ಯಕ್ಷ ಡಿ. ಎಂ. ಕಾಮತ. ಕಾರ್ಯದರ್ಶಿ ಸುಧಾಕರ ನಾಯಕ. ಪ್ರಾಚಾರ್ಯ ಡಾ. ಎಸ್. ವಿ. ಶೇನ್ವಿ ಅಭಿನಂದಿಸಿದ್ದಾರೆ.

ಪ್ರಮುಖ ಸುದ್ದಿ :-   ಸಚಿವ ದಿನೇಶ ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನ' ಹೇಳಿಕೆ : ಬಿಜೆಪಿ ಶಾಸಕ ಯತ್ನಾಳ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement