ಕುಮಟಾ: ಬರ್ಗಿ ಬಳಿ ಮನೆಗೇ ಬಂದ ಚಿರತೆ, ಸ್ಪಲ್ಪದರಲ್ಲೇ ಮಗು ಪಾರು

ಕುಮಟಾ: ಮನೆಗೆ ನುಗ್ಗಿದ ಚಿರತೆಯೊಂದು ಮನೆಗೇ ಬಂದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬರ್ಗಿ ಗ್ರಾಮದಲ್ಲಿ ನಡೆದಿದೆ.
ಚಿರತೆ ಬರ್ಗಿಯ ನಾರಾಯಣ ನಾಯ್ಕ ಎಂಬುವವರ ಮನೆಗೆ ರಾತ್ರಿ ವೇಳೆ  ಚಿರತೆ ಮನೆಗೆ ಬಂದಿದೆ. ಅಂಗಳದಲ್ಲಿ ಆಟವಾಡುತ್ತಿದ್ದ ಮಗುವಿನ ಬಳಿಯೇ ಕಾಣಿಸಿಕೊಂಡಿದೆ.  ಈ ವೇಳೆ ಮನೆಯವರು ಇದನ್ನು ತಕ್ಷಣವೇ ಗಮನಿಸಿ ಬೊಬ್ಬೆ ಹೊಡೆದು ಮಗುವನ್ನು ರಕ್ಷಿಸಿದ್ದಾರೆ. ಮನೆಯವರು ಕೂಗಾಟ ಹಾಗೂ ಬೊಬ್ಬೆಗೆ ಚಿರತೆ ಹೆದರಿ ಓಡಿಹೋಗಿದೆ. ಮನೆಯವರಲ್ಲಿ ಹಾಗೂ ಸುತ್ತಮುತ್ತಲಿನವರಲ್ಲಿ ಇನ್ನೂ ಆತಂಕ ಮನೆ ಮಾಡಿದೆ. ಮೂರ್ನಾಲ್ಕು ದಿನದಿಂದ ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಳ್ಳುತಿದ್ದು ಘಟನೆ ನಡೆದ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ಹಿರೇಗುತ್ತಿ ಡಿಎಫ್‌ಒ ಅವರು ಮಾತನಾಡಿ, ಬರ್ಗಿ ಭಾಗದಲ್ಲಿ ಕುರುಚಲು ಗಿಡಗಳು ಹೆಚ್ಚಿರುವುದರಿಂದ ಚಿರತೆ ಇಲ್ಲಿ ಓಡಾಡುತ್ತದೆ. ಮನೆಯವರು ಚಿರತೆ ಬಂದ ಬಗ್ಗೆ ಬೆಳಿಗ್ಗೆ ಮಾಹಿತಿ ನೀಡಿದ್ದಾರೆ.   ಅದು ನಾಯಿ ಹಿಡಿಯಲು ಬಂದಿರಬಹುದು. ಆದರೂ ನಾವು ಸುರಕ್ಷತೆ ದೃಷ್ಟಿಯಿಂದ  ಚಿರತೆ ಹಿಡಿಯಲು ಬೋನ್‌ ಇರಿಸುತ್ತಿದ್ದೇವೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಬೆಂಗಳೂರು: ರೈಲಿಗೆ ಸಿಲುಕಿ ಮೂವರು ಸಾವು

3.7 / 5. 3

ನಿಮ್ಮ ಕಾಮೆಂಟ್ ಬರೆಯಿರಿ

advertisement