ಓದಿನಲ್ಲಿ ಆಸಕ್ತಿ ಇಲ್ಲವೆಂದು ಮನೆ ತೊರೆದಿದ್ದ ಏಳು ಮಕ್ಕಳಲ್ಲಿ ಮೂವರು ಪತ್ತೆ, ಪೇಪರ್‌ ಆಯುವ ವ್ಯಕ್ತಿಯಿಂದ ಸಿಕ್ಕ ಮಾಹಿತಿ

ಬೆಂಗಳೂರು: ಓದಿನಲ್ಲಿ ಆಸಕ್ತಿ ಇಲ್ಲ. ಹಾಗಾಗಿ ಕ್ರೀಡೆಯಲ್ಲಿ ಸಾಧನೆ ಮಾಡುತ್ತೇವೆ ಎಂದು ಪರಸ್ಪರ ಮಾತನಾಡಿಕೊಂಡು ರಾಜಧಾನಿ ಬೆಂಗಳೂರಿನಿಂದ ಪ್ರತ್ಯೇಕ ಪ್ರಕರಣದಲ್ಲಿ ಮನೆ ತೊರೆದಿದ್ದ ಏಳು ಮಕ್ಕಲ್ಲಿ ಮೂವರು ಮಕ್ಕಳು ಪತ್ತೆಯಾಗಿದ್ದಾರೆ.
ನಾಪತ್ತೆಯಾಗಿದ್ದ 7 ಮಕ್ಕಳ ಪೈಕಿ ಮೂವರು ಮಕ್ಕಳಾದ ಪರೀಕ್ಷಿತ್, ಕಿರಣ್ ಮತ್ತು ನಂದನ್ ಎಂಬ ಮಕ್ಕಳು ಪತ್ತೆಯಾಗಿದ್ದು ಮತ್ತೊಂದು ಪ್ರಕರಣದಲ್ಲಿ ನಾಪತ್ತೆಯಾಗಿರುವ ಮಕ್ಕಳ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.
ನಾಪತ್ತೆಯಾಗಿದ್ದ ಪರೀಕ್ಷಿತ್, ಕಿರಣ್ ಮತ್ತು ನಂದನ್ ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸದ್ಯ ಪತ್ತೆಯಾಗಿದ್ದಾರೆ. ಓದುವುದು ಇಷ್ಟವಿಲ್ಲ; ಕ್ರೀಡೆಯಲ್ಲೇ ಸಾಧನೆ ಮಾಡುತ್ತೇವೆ ಎಂದು ಮನೆ ಬಿಟ್ಟಿದ್ದ ಈ ಮೂವರೂ ಮಕ್ಕಳು ಆನಂದರಾವ್ ಸರ್ಕಲ್‌ ಬಳಿ ನಡೆದು ಹೋಗುತ್ತಿದ್ದರು. ಈ ವೇಳೆ ಪೇಪರ್ ಆಯುವ ವ್ಯಕ್ತಿಯಿಂದ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.
ಪೇಪರ್‌ ಆಯುವ ವ್ಯಕ್ತಿ ಉಪ್ಪಾರಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದ. ವಿಷಯ ತಿಳಿದು ಬೀಟ್ ಪೊಲೀಸರು ಆಗಮಿಸಿ ಮಕ್ಕಳನ್ನು ಠಾಣೆಗೆ ಕರೆದೊಯ್ದು ವಿಚಾರಿಸಿದ್ದಾರೆ. ಆ ಮಕ್ಕಳಿಂದ ಫೋನ್​ ನಂಬರ್ ತೆಗೆದುಕೊಂಡು ಅವರ ಪೋಷಕರಿಗೆ ಪೊಲೀಸರು ಕರೆ ಮಾಡಿದ್ದಾರೆ.
ಮೈಸೂರಿನಲ್ಲಿ ದಸರಾ ನೋಡಿಕೊಂಡು ರಾತ್ರಿ ವಾಪಸ್ ಆಗಿದ್ದ ಮಕ್ಕಳು!
ಮೂವರೂ ಮಕ್ಕಳು ಶನಿವಾರ ಬೆಳಗ್ಗೆ 5.30ಕ್ಕೆ ಮನೆಯಿಂದ ಹೋಗಿದ್ದರು. ಜಾಗಿಂಗ್‌ಗೆ ಹೋಗಿಬರುವುದಾಗಿ ಮನೆಯಿಂದ ಹೊರಟಿದ್ದ ಅವರು ಮನೆಯಿಂದ ಬರುವಾಗ ತಲಾ 1,500 ರೂ.ಗಳನ್ನು ಮನೆಯಿಂದ ತಂದಿದ್ದರು. ಮೊದಲು ಮಂಗಳೂರಿಗೆ ಹೋಗಲು ಯೋಚನೆ ಮಾಡಿದ್ದರಂತೆ ಮಾಡಿದ್ದರು. ನಂತರ ಆಲೋಚನೆ ಬದಲಿಸಿ ಮೈಸೂರು ದಸರಾ ನೋಡಲು ಹೋಗಿದ್ದಾರೆ. ಮೂವರೂ ಮಕ್ಕಳು ಮೈಸೂರು ಬಸ್ ಸ್ಟಾಪ್‌ನಲ್ಲಿ ಶನಿವಾರ ಇಡೀ ದಿನ ಉಳಿದುಕೊಂಡಿದ್ದಾರೆ. ಭಾನುವಾರ ಕೂಡ ಮೈಸೂರಿನಲ್ಲಿ ಕಾಲ ಕಳೆದಿದ್ದಾರೆ. ಮತ್ತೆ ಭಾನುವಾರ ರಾತ್ರಿ ಮೈಸೂರಿನಿಂದ ಟ್ರೈನ್ ಹತ್ತಿ, ಬೆಂಗಳೂರಿಗೆ ವಾಪಸಾಗಿದ್ದಾರೆ. ನಂತರ ಮೂವರೂ ಮಕ್ಕಳು ಕಂಠೀರವ ಸ್ಟೇಡಿಯಂ ಗೆ ಹೋಗಿದ್ದಾರೆ. ಅಲ್ಲಿನ ಸ್ಪೋರ್ಟ್ಸ್ ವ್ಯವಸ್ಥೆ ನೋಡಿ ಆನಂದಿಸಿದ್ದಾರೆ. ನಂತರ ಆನಂದ್ ರಾವ್ ಸರ್ಕಲ್ ಬಳಿ ಬಂದಿದ್ದಾರೆ. ಅಲ್ಲಿ ಪೇಪರ್ ಆಯುವ ವ್ಯಕ್ತಿಯ ಬಳಿ ಮಕ್ಕಳು ಕೆಲಸ ಕೇಳಿದ್ದಾರೆ. ಅನುಮಾನಗೊಂಡ ಆತ ಆದರೆ ತಕ್ಷಣ ಪೊಲೀಸರಿಗೆ ಮಾಹಿತಿ‌ ನೀಡಿದ್ದಾನೆ.

ಪ್ರಮುಖ ಸುದ್ದಿ :-   ಪ್ರಜ್ವಲ್‌ ರೇವಣ್ಣ ಪ್ರಕರಣ : ದೇವೇಗೌಡ, ಎಚ್‌ಡಿಕೆಯನ್ನು ತಪ್ಪಾಗಿ ಬಿಂಬಿಸಿ ಸುದ್ದಿ ಪ್ರಸಾರ ಮಾಡದಂತೆ 89 ಮಾಧ್ಯಮಗಳ ವಿರುದ್ಧ ಪ್ರತಿಬಂಧಕಾದೇಶ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement