ಮನೆಯಲ್ಲಿ ಹಣವೇ ಇಲ್ಲದಿರುವಾಗ ಲಾಕ್ ಮಾಡುವ ಅಗತ್ಯವೇನಿತ್ತು?’: ಕಳ್ಳತನ ಮಾಡಿದ ಮನೆ ಮಾಲಕ-ಅಧಿಕಾರಿಗೆ ಪತ್ರ ಬರೆದಿಟ್ಟು ಹೋದ ಕಳ್ಳರು..!

ಭೋಪಾಲ: ಮಧ್ಯಪ್ರದೇಶದ ಉಪ ಜಿಲ್ಲಾಧಿಕಾರಿಯ ಮನೆಗೆ ಕಳ್ಳತನ ಮಾಡಲು ನುಗ್ಗಿದ ಕಳ್ಳರು ಮನೆಯಲ್ಲಿ ಏನೂ ಸಿಗದಿದ್ದಾಗ ಈ ಕುರಿತು ಪತ್ರವೊಂದನ್ನು ಬರೆದಿಟ್ಟು ಹೋದ ವಿಚಿತ್ರ ವಿದ್ಯಮಾನ ನಡೆದ ಬಗ್ಗೆ ವರದಿಯಾಗಿದೆ.
“ಹಣವೇ ಇಲ್ಲದಿರುವಾಗ ಲಾಕ್ ಮಾಡುವ ಅಗತ್ಯವೇನಿತ್ತು? (ಜಬ್ ಪೈಸೆ ನಹೀ ತೇ ತೋ ಲಾಕ್ ನಹಿ ಕರ್ನಾ ಥಾ ನಾ ಕಲೆಕ್ಟರ್..? ) ಎಂದು ಪತ್ರದಲ್ಲಿ ಬರೆಯಲಾಗಿದೆ. ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಿಂದ 2.5 ಗಂಟೆ ಪ್ರಯಾಣಸಿದ ಸಿಗುವ ದೇವಾಸ್​​ನ ಸಿವಿಲ್ ಲೈನ್ಸ್ ಪ್ರದೇಶದಲ್ಲಿರುವ ತ್ರಿಲೋಚನ್ ಗೌರ್ ಅವರ ಅಧಿಕೃತ ನಿವಾಸದಲ್ಲಿ ಕಳ್ಳತನ ನಡೆದಿದ್ದು, ಏನೂ ಸಿಗದ ಕಾರಣಕ್ಕೆ ಕಳ್ಳಲರು ಪತ್ರ ಬರೆದಿಟ್ಟು ಹೋಗಿದ್ದಾರೆ.
ಅಧಿಕಾರಿಯ ಮನೆ ಶಾಸಕರ ಬಂಗಲೆಗಳು ಮತ್ತು ದೇವಾಸ್ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಪ್ರದೀಪ್ ಸೋನಿ ಮತ್ತು ಪೊಲೀಸ್ ಅಧೀಕ್ಷಕರ ನಿವಾಸದಿಂದ ಕೇವಲ 100 ಮೀಟರ್ ದೂರದಲ್ಲಿದೆ.
ಪ್ರಸ್ತುತ ದೇವಾಸ್‌ನ ಖಟೇಗಾಂವ್ ತಹಸಿಲ್‌ನಲ್ಲಿ ಎಸ್‌ಡಿಎಮ್ ಆಗಿ ನೇಮಕಗೊಂಡಿರುವ ತ್ರಿಲೋಚನ್ ಗೌರ್ ಕಳೆದ 15-20 ದಿನಗಳಿಂದ ಮನೆಯಲ್ಲಿ ಇರಲಿಲ್ಲ. ಮನೆಯೊಳಗೆ ತನ್ನ ಸಾಮಾನುಗಳು ಚದುರಿಹೋಗಿರುವುದನ್ನು ಮತ್ತು ಕೆಲವು ನಗದು ಮತ್ತು ಬೆಳ್ಳಿ ಆಭರಣಗಳು ಕಾಣೆಯಾಗಿರುವುದನ್ನು ಕಂಡು ಇವರು ದೂರು ನೀಡಿದ್ದರು.
30,000 ನಗದು ಮತ್ತು ಕೆಲವು ಆಭರಣಗಳನ್ನು ತ್ರಿಲೋಚನ್ ಗೌರ್ ಅವರ ಸರ್ಕಾರಿ ನಿವಾಸದಿಂದ ಕಳವು ಮಾಡಲಾಗಿದೆ, ಅವರು ಪ್ರಸ್ತುತ ಖಟೇಗಾಂವ್‌ನ ಎಸ್ ಡಿಎಂ ಆಗಿ ನಿಯೋಜನೆಗೊಂಡಿದ್ದಾರೆ. ಘಟನೆಯ ನಿಖರವಾದ ಸಮಯ ಇನ್ನೂ ತಿಳಿದಿಲ್ಲ” ಎಂದು ಇನ್ಸ್‌ಪೆಕ್ಟರ್ ಉಮ್ರಾವ್ ಸಿಂಗ್ ಹೇಳಿದರು. ಪ್ರಕರಣದ ತನಿಖೆ ನಡೆಯುತ್ತಿದೆ.

ಪ್ರಮುಖ ಸುದ್ದಿ :-   ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement