ಅಹಂಕಾರ ತೊಡೆಯಲು ಭಿಕ್ಷಾಟನೆ, ಹಿಂದಿನ ಜೀವನದ ಬಗ್ಗೆ ತಿಳಿದುಕೊಳ್ಳಲು ಭಗವದ್ಗೀತೆ ಅಧ್ಯಯನಕ್ಕಾಗಿ ಪ್ರತಿ ಭಾನುವಾರ ರಜೆ ಕೇಳಿ ಅರ್ಜಿ ಬರೆದ ಇಂಜಿನಿಯರ್‌..!

ಭೋಪಾಲ್: ಮಧ್ಯಪ್ರದೇಶ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುತ್ತಿರುವ ಇಂಜಿನಿಯರ್ ಒಬ್ಬರ ರಜೆ ಅರ್ಜಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.
ವಿಲಕ್ಷಣ ಪತ್ರದಲ್ಲಿ, ಅಗರ್ ಮಾಲ್ವಾ ಜಿಲ್ಲೆಯ ಸುಸ್ನರ್‌ನಲ್ಲಿನ ಎಂಜಿಎನ್‌ಆರ್‌ಇಜಿಎ ಯೋಜನೆಗಳ ಉಪಇಂಜಿನಿಯರ್ ರಾಜಕುಮಾರ ಯಾದವ್, ತನ್ನ ಹಿಂದಿನ ಜೀವನದ ಬಗ್ಗೆ ಹೆಚ್ಚಿನದನ್ನು ತಿಳಿದುಕೊಳ್ಳಲು ತಾನು ಭಿಕ್ಷೆ ಬೇಡಬೇಕು ಮತ್ತು ಭಗವದ್ಗೀತೆ ಅಧ್ಯಯನ ಮಾಡಬೇಕು ಎಂದು ಭಾನುವಾರ ರಜೆ ಕೇಳಿದ್ದಾರೆ.
ರಾಜಕುಮಾರ ಯಾದವ್ ಅವರು ಪಂಚಾಯತ್ ಸಿಇಒಗೆ ಬರೆದ ಪತ್ರದಲ್ಲಿ, ಹೇಗೆ ತಮ್ಮ ಹಿಂದಿನ ಜೀವನದ ಘಟನೆಗಳನ್ನು ಇದ್ದಕ್ಕಿದ್ದಂತೆ ನೆನಪಿಸಿಕೊಂಡ ಬಗ್ಗೆ ವಿವರಿಸಿದ್ದಾರೆ ಮತ್ತು ತಮ್ಮ ಅಹಂಕಾರವನ್ನು ತೊಡೆದುಹಾಕಲು ತಾನು ಪ್ರತಿ ಭಾನುವಾರ ಮನೆ ಮನೆಗೆ ತೆರಳಿ ಭಿಕ್ಷೆ ಬೇಡಲು ತನಗೆ ರಜೆ ಬೇಕು ಕೇಳಿದ್ದಾರೆ…!
ತಮ್ಮ ಹಿಂದಿನ ಜೀವನದಲ್ಲಿ ಎಐಎಂಐಎಂ ಅಧ್ಯಕ್ಷ ಮತ್ತು ಸಂಸದ ಅಸಾದುದ್ದೀನ್ ಓವೈಸಿ ತಮ್ಮ ಬಾಲ್ಯದ ಗೆಳೆಯ ನಕುಲ್ ಆಗಿದ್ದರು ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು “ಶಕುನಿ ಮಾಮ ಆಗಿದ್ದರು” ಎಂದು ರಜೆ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಯಾದವ್, ಕೆಲವೊಮ್ಮೆ ಅವರು ಭಾನುವಾರ ಕೆಲಸ ಮಾಡಬೇಕು, ಆದರೆ ತಾವು ಆಧ್ಯಾತ್ಮಿಕ ಉನ್ನತಿಗಾಗಿ ಭಗವದ್ಗೀತೆಯನ್ನು ಅಧ್ಯಯನ ಮಾಡಲು ಆ ದಿನವನ್ನು ಕಳೆಯಲು ಬಯಸುತ್ತೇನೆ ಎಂದು ಹೇಳಿದ್ದಾರೆ.
“ನಾನು ಅಸದುದ್ದೀನ್ ಓವೈಸಿ ನನ್ನ ಸಖ (ಸ್ನೇಹಿತ) ಮತ್ತು ಮೋಹನ್ ಭಾಗವತ್ ಕೂಡ ಶಕುನಿ ಮಾಮ ಎಂದು ಕನಸು ಕಂಡೆ” ಎಂದು ಅವರು ಹೇಳಿದ್ದಾರೆ
ಪತ್ರದಲ್ಲಿ ಅವರು ತಮ್ಮ ಹಿಂದಿನ ಜೀವನದ ಬಗ್ಗೆ ತಿಳಿದ ನಂತರ, ತಾನು ಹಿಂದಿನ ಜೀವನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸಿದ್ದೇನೆ ಮತ್ತು ಆತ್ಮವು ಶಾಶ್ವತವಾದುದರಿಂದ ಆತ್ಮ ಶೋಧನೆಯನ್ನೂ ಮಾಡಲು ಬಯಸಿದ್ದೇನೆ ಎಂದು ರಜೆ ಅರ್ಜಿಯಲ್ಲಿ ಹೇಳಿದ್ದಾರೆ. ಅದಕ್ಕಾಗಿ, ನಾನು ಭಗವದ್ಗೀತೆಯ ಮಾರ್ಗವನ್ನು ಅನುಸರಿಸಲು ಬಯಸುತ್ತೇನೆ. ಅಲ್ಲದೆ, ನನ್ನ ಅಹಂಕಾರವನ್ನು ತೊಡೆದುಹಾಕಲು, ಪ್ರತಿ ಭಾನುವಾರ, ನಾನು ಪ್ರತಿ ಮನೆಯಿಂದ ಭಿಕ್ಷಾನ್ನ ಬೇಡಲು ಬಯಸುತ್ತೇನೆ, ಈ ಕಾರಣದಿಂದಾಗಿ ಭಾನುವಾರ ರಜೆ ನೀಡಬೇಕೆಂದು ನಾನು ವಿನಂತಿಸುತ್ತೇನೆ “ಎಂದು ಸಬ್ ಇಂಜಿನಿಯರ್ ಬರೆದಿದ್ದಾರೆ.
ಅವರ ರಜೆ ಅರ್ಜಿ ವೈರಲ್ ಆದ ತಕ್ಷಣ, ಅದನ್ನು ಜನಪದ್ ಪಂಚಾಯತ್ ಸಿಇಒ ತಿರಸ್ಕರಿಸಿದ್ದು ಮಾತ್ರವಲ್ಲದೆ, ಭಾನುವಾರಗಳಂದು ಕಚೇರಿಗೆ ಕೆಲಸಕ್ಕೆ ಹಾಜರಾಗಬೇಕು ಮತ್ತು ಕೆಲಸ ಮಾಡುವ ಮೂಲಕ ಅಹಂಕಾರವನ್ನು ತೊಡೆದು ಹಾಕಲು ಶ್ರಮಿಸುವಂತೆ ಸೂಚಿಸಲಾಯಿತು.

ಪ್ರಮುಖ ಸುದ್ದಿ :-   ಯು ಪಿ ಎಸ್ ಸಿ ಫಲಿತಾಂಶ ಪ್ರಕಟ: ಆದಿತ್ಯ ಶ್ರೀವಾಸ್ತವ ದೇಶಕ್ಕೆ ಟಾಪರ್, ಟಾಪ್‌-20 ರ‍್ಯಾಂಕ್ ಪಡೆದವರ ಪಟ್ಟಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement