ದಾಳಿಯಲ್ಲಿ 750 ಕೋಟಿ ಅಕ್ರಮ ಆಸ್ತಿ ಪತ್ತೆ: ಅಧಿಕೃತ ಮಾಹಿತಿ ನೀಡಿದ ಐಟಿ ಇಲಾಖೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಪ್ತರ ಮನೆಗಳ ಮೇಲೆ ಐಟಿ ದಾಳಿಯಲ್ಲಿ 750 ಕೋಟಿ ಅಕ್ರಮ ಆಸ್ತಿ-ಪಾಸ್ತಿ ಪತ್ತೆಯಾಗಿದೆ ಎಂದು ಐಟಿ ಇಲಾಖೆ ಅಧಿಕಾರಿಗಳು ಮಾಧ್ಯಮ ಪ್ರಕಟಣೆ ನೀಡಿದ್ದಾರೆ.
ಅಕ್ಟೋಬರ್ 7ರಂದು ನಾಲ್ಕು ರಾಜ್ಯಗಳಲ್ಲಿ 47 ಕಡೆ ಐಟಿ ದಾಳಿ ನಡೆದಿತ್ತು. ಐಟಿ ದಾಳಿ ವೇಳೆ 4.69 ಕೋಟಿ ರೂ.ಗಳ ನಗದು ಜಪ್ತಿ ಮಾಡಲಾಗಿದೆ. 8.67 ಕೋಟಿ ರೂ. ಮೊತ್ತದ ಚಿನ್ನ, 29.83 ಲಕ್ಷ ಮೌಲ್ಯದ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ರಮವಾಗಿ 40 ಜನರ ಹೆಸರಿನಲ್ಲಿ ನೀರಾವರಿ, ಹೆದ್ದಾರಿ ಯೋಜನೆಗಳಲ್ಲಿ ಉಪ ಗುತ್ತಿಗೆ ಪಡೆದು ಅಕ್ರಮ ಎಸಗಿರುವುದು ದಾಳಿಯ ವೇಳೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂರು ಕಂಪನಿಗಳು ನಕಲಿಯಾಗಿ ಖರೀದಿ ಮಾಡಿ ಕೆಲಸ ಮಾಡಿದ್ದಾಗಿ ದಾಖಲೆಗಳನ್ನು ಸೃಷ್ಟಿ ಮಾಡಿ ಲಾಭ ಗಳಿಸುರುವುದು ಪತ್ತೆಯಾಗಿದೆ. ನಕಲಿಯಾಗಿ ಕಾರ್ಮಿಕ ವೆಚ್ಚ, ನಕಲಿಯಾಗಿ ಬೋಗಸ್ ಉಪಗುತ್ತಿಗೆಗಳನ್ನು ಮಾಡಿರುವುದು ಪತ್ತೆಯಾಗಿದೆ. ಒಂದು ಕಂಪನಿಗೆ ಸಂಬಂಧಿಸಿದಂತೆ 40 ವ್ಯಕ್ತಿಗಳ ಹೆಸರಲ್ಲಿ ನಕಲಿ ಉಪಗುತ್ತಿಗೆ ವೆಚ್ಚ ಸೃಷ್ಟಿ ಮಾಡಿರುವುದು ಪತ್ತೆಯಾಗಿದೆ. ಅಲ್ಲದೆ, ವಿಚಾರಣೆ ವೇಳೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿರುವುದಾಗಿ ಐಟಿ ಇಲಾಖೆಯ ಅಧಿಕಾರಿಗಳ ಮುಂದೆಉಪಗುತ್ತಿಗೆ ಪಡೆದವರು ಒಪ್ಪಿಕೊಂಡಿದ್ದಾರೆ ಎಂದು ಇಲಾಖೆ ತಿಳಿಸಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಪ್ತರ ಮನೆ ಮೇಲೆ ದಾಳಿ ನಡೆದ ಕಾರಣ ಇದು ರಾಜಕೀಯ ಸ್ವರೂಪವನ್ನೂ ಪಡೆದುಕೊಂಡಿತ್ತು.

ಪ್ರಮುಖ ಸುದ್ದಿ :-   ಕುಣಿಗಲ್ : ರಾಮನವಮಿ ಪಾನಕ ಸೇವಿಸಿದ 42 ಮಂದಿ ಅಸ್ವಸ್ಥ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement