ಮೈಸೂರು: ಮಳೆಗೆ ಎರಡಂತಸ್ತಿನ ಕಟ್ಟಡ ಕುಸಿತ, ವೃದ್ಧೆಯರಿಬ್ಬರು ಪಾರು

ಮೈಸೂರು: ಬೆಂಗಳೂರಿನಲ್ಲಿ ಕೆಲದಿನಗಳ ಹಿಂದೆಯಷ್ಟೇ ಬಹುಮಹಡಿ ಕಟ್ಟಡ ಕುಸಿತದ ಘಟನೆ ನೆನಪಿರುವಾಗಲೇ ಭಾರೀ ಮಳೆಗೆ ಮೈಸೂರಿನಲ್ಲೂ ಎರಡಂತಸ್ತಿನ ಕಟ್ಟಡ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಸೋಮವಾರವೂ ನಗರದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಇಟ್ಟಿಗೆಗೂಡಿನಲ್ಲಿರುವ ಎರಡಂತಸ್ತಿನ ಕಟ್ಟಡವೊಂದು ಭಾಗಶಃ ಕುಸಿದು ಬಿದ್ದಿದೆ. 60 ಹಾಗೂ 65 ವರ್ಷದ ಇಬ್ಬರು ವೃದ್ಧೆಯರು ಮನೆಯಲ್ಲಿದ್ದರೂ ಅಪಾಯದಿಂದ ಪಾರಾಗಿದ್ದಾರೆ.
ಭಾನುವಾರವೂ ಭಾರೀ ಮಳೆಯಾಗಿದ್ದ ಹಿನ್ನೆಲೆಯಲ್ಲಿ ಪೆರಿಯತಂಬಿ ರಸ್ತೆಯ ಎರಡಂತಸ್ತಿನ ಮನೆಯು ಭಾಗಶಃ ಜಖಂಗೊಂಡಿತ್ತು. ಅದು ಈಗ ಕುಸಿದಿದೆ. ತಕ್ಷಣಕ್ಕೆ ಸ್ಥಳಕ್ಕೆ ಧಾವಿಸಿದ ಮೈಸೂರು ಮಹಾನಗರ ಪಾಲಿಕೆಯ ಅಭಯ-1 ತಂಡ ವೃದ್ಧೆಯರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ.
ಕಟ್ಟಡ. ಕೆಲ ವರ್ಷಗಳ ಹಿಂದೆಯೇ ಅಲ್ಲಲ್ಲಿ ಶಿಥಿಲವಾಗಿತ್ತು. ಆದರೂ ಕುಟುಂಬಗಳು ಅಲ್ಲಿ ವಾಸವಾಗಿದ್ದವು. 60 ವರ್ಷದ ರಾಣಿಯಮ್ಮ, 65 ವರ್ಷದ ಪೂಜಾಮಣಿ ಹಾಗೂ 30 ವರ್ಷದ ಸತೀಶ್ ಎಂಬವರು ಈ ಮನೆಯಲ್ಲಿ ವಾಸವಾಗಿದ್ದರು. ಕಟ್ಟಡ ಬೀಳುವಾಗ ವೃದ್ಧೆಯರು ಮಾತ್ರ ಮನೆಯಲ್ಲಿದ್ದರು. ಕಟ್ಟಡ ಸೋಮವಾರ ಮಧ್ಯಾಹ್ನ 3.30ರ ಸಮಯದಲ್ಲಿ ಮತ್ತೆ ಮಳೆ ಬಂದಾಗ ಕುಸಿದು ಬಿದ್ದಿದೆ. ಕುಸಿಯುವುದನ್ನು ನೋಡಿ ಮನೆಯಲ್ಲಿದ್ದವರು ತಕ್ಷಣ ಹೊರ ಬಂದಿದ್ದಾರೆ. ನೆರೆ ಹೊರೆಯವರು ಪಾಲಿಕೆಗೆ ಮಾಹಿತಿ ನೀಡಿದ್ದು ರಕ್ಷಣೆ ಮಾಡಲಾಗಿದ್ದು, ಅಲ್ಲಿದ್ದ ವಸ್ತುಗಳನ್ನು ಹೊರ ತೆಗೆಯಲಾಗಿದೆ.
ಹಳೆಯ ಮನೆ ಕುಸಿತದಿಂದ ಯಾವುದೇ ಹಾನಿಯಾಗಿಲ್ಲ. ಆದರೂ ಅಭಯ ತಂಡ ಈಗಾಗಲೇ ತೆರವು ಕಾರ‍್ಯಾಚರಣೆ ನಡೆಸಿದೆ. .

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement