2-18 ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್’ ತುರ್ತು ಬಳಕೆಗೆ ಡಿಜಿಸಿಐ ಇನ್ನೂ ಅನುಮೋದಿಸಿಲ್ಲ ಸಚಿವೆ ಡಾ. ಭಾರತಿ ಪವಾರ್

ನವದೆಹಲಿ: ಕೋವಾಕ್ಸಿನ್ ಕೋವಿಡ್-19 ಲಸಿಕೆ 2-18 ವರ್ಷ ವಯಸ್ಸಿನವರಿಗೆ ತುರ್ತು ಬಳಕೆಗಾಗಿ ಡಿಜಿಸಿಐ ಇನ್ನೂ ಅನುಮೋದನೆ ನೀಡಿಲ್ಲ. ಇನ್ನೂ ಅದರ ಮೌಲ್ಯಮಾಪನ ನಡೆಯುತ್ತಿದೆ ಎಂದು ಕೇಂದ್ರ ಆರೋಗ್ಯ ಖಾತೆ ಸಹಾಯಕ ಸಚಿವೆ ಡಾ. ಭಾರತಿ ಪ್ರವೀಣ ಪವಾರ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಧ್ಯಮಗಳಲ್ಲಿ ಪ್ರಕಟವಾದ ವರದಿಗೆ ಪ್ರತಿಕ್ರಿಯಿಸಿ ಮಾಹಿತಿ ನೀಡಿರುವ ಅವರು, ಭಾರತ್ ಬಯೋಟೆಕ್ ನ ಕೋವಿಡ್-19 ಲಸಿಕೆ ಕೋವಾಕ್ಸಿನ್ ( Bharat Biotech’s COVID-19 vaccine COVAXIN ) ಕುರಿತಂತೆ ಕೆಲವು ಗೊಂದಲಗಳ ಸ್ಪಷ್ಟನೆಗೆ ತಜ್ಞರ ಸಮಿತಿಯೊಂದಿಗೆ ಮಾತುಕತೆ ನಡೆಯುತ್ತಿದೆ. ಇಲ್ಲಿಯವರೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (Drugs Controller General of India (DCGI) ಅದನ್ನು ಅನುಮೋದಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕೆಲ ಗಂಟೆಗಳ ಹಿಂದಷ್ಟೇ ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಲಸಿಕೆಯನ್ನು 2 ರಿಂದ 18 ವರ್ಷದ ಮಕ್ಕಳಿಗೆ ತುರ್ತು ಬಳಕೆಗಾಗಿ ತಜ್ಞರ ಸಮಿತಿಯು ಸಭೆಯಲ್ಲಿ ಡಿಸಿಜಿಐಗೆ ಶಿಫಾರಸ್ಸು ಮಾಡಿದ್ದಾಗಿ ವರದಿಯಾಗಿತ್ತು. ಹೀಗೆ ವರದಿಯಾದ ಕೆಲ ಗಂಟೆಗಳಲ್ಲಿಯೇ ಕೇಂದ್ರ ಆರೋಗ್ಯ ಖಾತೆ ಸಹಾಯಕ ಸಚಿವೆ ಡಾ.ಭಾರತಿ ಪ್ರವೀಣ ಪವಾರ್ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಪ್ರಮುಖ ಸುದ್ದಿ :-   ದೆಹಲಿ ಹೈಕೋರ್ಟ್ ಮರುಮೌಲ್ಯಮಾಪನದ ಅರ್ಜಿ ತಿರಸ್ಕರಿಸಿದ ನಂತರ ಕಾಂಗ್ರೆಸ್ಸಿಗೆ 1700 ಕೋಟಿ ತೆರಿಗೆ ನೋಟಿಸ್ ನೀಡಿದ ಐಟಿ : ಮೂಲಗಳು

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement