ನವರಾತ್ರಿಯ ಸಮಯದಲ್ಲಿ ಒಡಿಶಾದಲ್ಲಿ 2 ತಲೆ, 3 ಕಣ್ಣುಗಳುಳ್ಳ ಕರುವಿನ ಜನನ, ದುರ್ಗಾ ಅವತಾರ ಎಂದು ಪೂಜೆ, ವೀಕ್ಷಿಸಿ

ನಬರಂಗಪುರ್ (ಒಡಿಶಾ): ನವರಾತ್ರಿಯ ಹಬ್ಬದಲ್ಲಿ ಒರಿಸ್ಸಾದ ನಬರಂಗಪುರ್ ಜಿಲ್ಲೆಯಲ್ಲಿ ಎರಡು ತಲೆ ಮತ್ತು ಮೂರು ಕಣ್ಣುಗಳೊಂದಿಗೆ ಆಕಳ ಕರು ಜನಿಸಿದೆ. ಈಗ ಆ ಕರುವನ್ನು ದುರ್ಗಾದೇವಿಯ ಅವತಾರವೆಂದು ಪೂಜಿಸಲಾಗುತ್ತದೆ.
ನಬರಂಪುರ ಜಿಲ್ಲೆಯ ಕುಮುಲಿ ಪಂಚಾಯತ್‌ನ ಬಿಜಾಪುರ ಗ್ರಾಮದ ಧನಿರಾಮ್ ಎಂಬ ರೈತನ ಮನೆಯ ಹಸು ಎರಡು ತಲೆ ಮತ್ತು ಮೂರು ಕಣ್ಣುಗಗಳುಳ್ಳ ಕರು ಜನಿಸಿದೆ. ಧನಿರಾಮ್ ಮತ್ತು ಅವರ ಕುಟುಂಬವು ಅಸಾಮಾನ್ಯ ಕರು ನೋಡಿ ಆಶ್ಚರ್ಯಚಕಿತರಾದರು.

ಧನಿರಾಮ್ ಎರಡು ವರ್ಷಗಳ ಹಿಂದೆ ಹಸುವನ್ನು ಖರೀದಿಸಿದ್ದರು. ಇದು ನವರಾತ್ರಿಯ ಸಮಯದಲ್ಲಿ ಕರುವಿಗೆ ಜನ್ಮ ನೀಡಿತು. ಹಸುವಿಗೆ ಕರುವಿನ ಹೆರಿಗೆಯಲ್ಲಿ ಸ್ವಲ್ಪ ತೊಂದರೆಯಾದಾಗ, ಆಕಳನ್ನು ಪರೀಕ್ಷಿಸಲಾಯಿತು. ನಂತರ ಕರು ಎರಡು ತಲೆ ಮತ್ತು ಮೂರು ಕಣ್ಣುಗಳೊಂದಿಗೆ ಜನಿಸಿತು.
ಕರು ತನ್ನ ತಾಯಿಯಿಂದ ಹಾಲು ಕುಡಿಯಲು ಕಷ್ಟಪಡುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡಿದೆ. ಬಾಟಲಿಯನ್ನು ಬಳಸಿ ಕರುವಿಗೆ ಆಹಾರ ನೀಡಲು ಮಾಲೀಕರು ಹಾಲನ್ನು ಖರೀದಿಸುತ್ತಿದ್ದಾರೆ.
ನವರಾತ್ರಿಯ ಹಬ್ಬದಲ್ಲಿ ಕರು ಜನಿಸಿದ್ದರಿಂದ ಸ್ಥಳೀಯರು ಇದನ್ನು ದುರ್ಗಾ ಅವತಾರವೆಂದು ಪೂಜಿಸುತ್ತಿದ್ದಾರೆ. ಅಪರೂಪದ ಕರು ಎರಡು ತಲೆಯೊಂದಿಗೆ ಜನಿಸಿದ್ದು ಇದೇ ಮೊದಲಲ್ಲ. ಸೆಪ್ಟೆಂಬರ್ ನಲ್ಲಿ, ರಾಜಸ್ಥಾನದ ಧೋಲ್ ಪುರ್ ಜಿಲ್ಲೆಯ ಪುರ ಸಿಕ್ರೌಡಾ ಗ್ರಾಮದಲ್ಲಿ ಎಮ್ಮೆಯೊಂದು ಅಪರೂಪದ ಎರಡು ತಲೆಯ ಕರುವಿಗೆ ಜನ್ಮ ನೀಡಿತು. ನವಜಾತ ಕರು ಎರಡು ಕುತ್ತಿಗೆ, ಎರಡು ಬಾಯಿ, ನಾಲ್ಕು ಕಣ್ಣು ಮತ್ತು ನಾಲ್ಕು ಕಿವಿಗಳನ್ನು ಹೊಂದಿತ್ತು.
ಕಳೆದ ವರ್ಷ, ಉತ್ತರ ಐರ್ಲೆಂಡ್‌ನಲ್ಲಿ “ಏಂಜಲ್ ವಿಂಗ್ಸ್” ನಂತೆಯೇ ಎರಡು ಹೆಚ್ಚುವರಿ ಕಾಲುಗಳನ್ನು ಭುಜದ ಮೇಲೆ ಇದ್ದ ಕರು ಜನಿಸಿತ್ತು. ಉಳಿದ ಕರುಗಳಿಗಿಂತ ಕರು ತುಂಬಾ ಚಿಕ್ಕದಾಗಿತ್ತು. ಪಶುವೈದ್ಯರು ಅದರ ಹೆಚ್ಚುವರಿ ಕಾಲುಗಳು ಬೆನ್ನುಮೂಳೆಗೆ ಜೋಡಿಸಿಕೊಂಡಿವೆ ಮತ್ತು ಅದನ್ನು ತೆಗೆಯುವುದು ತುಂಬಾ ಅಪಾಯಕಾರಿ ಎಂದು ಹೇಳಿದ್ದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ