ಇನ್ಫೋಸಿಸ್​ಗೆ ಎರಡನೇ ತ್ರೈಮಾಸಿಕದಲ್ಲಿ 5421 ಕೋಟಿ ರೂ. ಲಾಭ; 15 ರೂ.ಗಳ ಡಿವಿಡೆಂಡ್ ಘೋಷಣೆ

ಬೆಂಗಳೂರು: ದೇಶದ ಎರಡನೇ ಅತಿದೊಡ್ಡ ಐ.ಟಿ. (ಮಾಹಿತಿ ತಂತ್ರಜ್ಞಾನ) ಸೇವಾ ಕಂಪೆನಿಯಾದ ಇನ್ಫೋಸಿಸ್ 2021ರ ಜುಲೈನಿಂದ ಸೆಪ್ಟೆಂಬರ್​ ತನಕದ ತ್ರೈಮಾಸಿಕ ಫಲಿತಾಂಶವನ್ನು ಬುಧವಾರ ಪ್ರಕಟಿಸಿದ್ದು, 5,421 ಕೋಟಿ ರೂ.ಗಳ ಕ್ರೋಡೀಕೃತ ಲಾಭವನ್ನು ವರದಿ ಮಾಡಿದೆ.
ಜೂನ್ ತ್ರೈಮಾಸಿಕದಲ್ಲಿ ಬಂದಿದ್ದ 5,195 ಕೋಟಿ ರೂ.ಗಳ ನಿವ್ವಳ ಲಾಭಕ್ಕೆ ಹೋಲಿಸಿದರೆ ಶೇ 4.4ರಷ್ಟು ಹೆಚ್ಚಳವಾಗಿದೆ. ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಶೇ 11.9ರಷ್ಟು ಏರಿಕೆ ಆಗಿದೆ.
ಡೈಮ್ಲರ್ ಒಪ್ಪಂದದಿಂದ ಬಲವಾದ ಆದಾಯದ ಕೊಡುಗೆ, ಗ್ರಾಹಕರಿಂದ ಡಿಜಿಟಲ್ ರೂಪಾಂತರದ ಹೆಚ್ಚಿನ ಅಳವಡಿಕೆ, ವರ್ಟಿಕಲ್​ಗಳಲ್ಲಿನ ಬೆಳವಣಿಗೆ ಇವೆಲ್ಲವೂ ಹೆಚ್ಚಿನ ಲಾಭಾಂಶಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ. ಕಾರಣವಾಗಿದೆ. ಡೈಮ್ಲರ್ ಮತ್ತು ಇನ್ಫೋಸಿಸ್ ಡಿಸೆಂಬರ್ -2020ರಲ್ಲಿ ತಂತ್ರಜ್ಞಾನ ಆಧಾರಿತ ಐಟಿ ಮೂಲಸೌಕರ್ಯ ರೂಪಾಂತರಕ್ಕಾಗಿ ದೀರ್ಘಾವಧಿಯ ಕಾರ್ಯತಂತ್ರದ ಪಾಲುದಾರಿಕೆ ಪ್ರಕಟಿಸಿತ್ತು. ಈ ಪಾಲುದಾರಿಕೆಯ ಮೂಲಕ ಡೈಮ್ಲರ್ ಎಜಿ ತನ್ನ ಐಟಿ ಆಪರೇಟಿಂಗ್ ಮಾದರಿ ಮತ್ತು ಮೂಲಸೌಕರ್ಯ ಲ್ಯಾಂಡ್​ ಸ್ಕೇಪ್ ಕೆಲಸದ ಸ್ಥಳ ಸೇವೆಗಳು, ಸರ್ವೀಸ್ ಡೆಸ್ಕ್, ಡೇಟಾ ಸೆಂಟರ್, ನೆಟ್‌ವರ್ಕ್‌ಗಳು ಮತ್ತು ಎಸ್‌ಎಪಿ ಆಧಾರದಲ್ಲಿ ಇನ್ಫೋಸಿಸ್‌ನೊಂದಿಗೆ ಪರಿವರ್ತನೆ ಮಾಡುತ್ತದೆ. ಈ ವ್ಯವಹಾರದ ಒಟ್ಟು ಮೊತ್ತವು ಸುಮಾರು 320 ಕೋಟಿ ಅಮೆರಿಕನ್ ಡಾಲರ್ ಆಗಿತ್ತು.
ಐಟಿ ಸೇವೆಗಳ ಆದಾಯ ಹಿಂದಿನ ತ್ರೈಮಾಸಿಕದಲ್ಲಿ ಬಂದಿದ್ದ 27,896 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ, 2021ರ ಸೆಪ್ಟೆಂಬರ್​ನಲ್ಲಿ ಕೊನೆಗೊಂಡ ತ್ರೈಮಾಸಿಕದಲ್ಲಿ 29,602 ಕೋಟಿ ರೂ,ಗಳಿಗೆ ಅದು ಹೆಚ್ಚಿದೆ. ಆದಾಯ ಗೈಡೆನ್ಸ್ ಶೇ 14- 16ರಿಂದ ಶೇ 16.5-17.5ಕ್ಕೆ ಮೇಲ್ಮುಖವಾಗಿ ಪರಿಷ್ಕರಿಸಲಾಗಿದೆ. ಮಾರ್ಜಿನ್ ಗೈಡೆನ್ಸ್​ನ ಶೇ. 22ರಿಂದ 24ರಲ್ಲೇ ಉಳಿದಿದೆ. ಈ ಸ್ಟಾಕ್ ಬೆಲೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 23.71ರಷ್ಟು ಏರಿಕೆ ದಾಖಲಿಸಿದೆ ಮತ್ತು ಜುಲೈನಿಂದ ಇಂದಿನವರೆಗೆ ಶೇ 7ರಷ್ಟು ಗಳಿಕೆ ಕಂಡಿದೆ. ಅಕ್ಟೋಬರ್ 13 ರಂದು ಇನ್ಫೋಸಿಸ್ 2021-22ರ ಹಣಕಾಸು ವರ್ಷಕ್ಕೆ ಪ್ರತಿ ಷೇರಿಗೆ ಮಧ್ಯಂತರ ಡಿವಿಡೆಂಡ್ 15 ರೂಪಾಯಿಗಳನ್ನು ಘೋಷಿಸಿದೆ.
ಭಾರತದ ಮಹತ್ವಾಕಾಂಕ್ಷೆಯ ಹೊಸ ಆದಾಯ ತೆರಿಗೆ ಪೋರ್ಟಲ್ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಕಂಪೆನಿಯು ಸ್ಥಿರ ಪ್ರಗತಿಯನ್ನು ಕಾಣುತ್ತಿದೆ ಎಂದು ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಹೇಳಿದ್ದಾರೆ. ಯೋಜನೆಯಲ್ಲಿ ತೊಂದರೆಗಳು ಉಂಟಾದ ತಿಂಗಳ ನಂತರ ಪ್ರತಿ ದಿನ 1.9 ಕೋಟಿ ರಿಟರ್ನ್ಸ್ ಸಲ್ಲಿಸಲಾಗುತ್ತಿದೆ. “ನಾವು ಪ್ರತಿದಿನ 1.9 ಕೋಟಿ ರಿಟರ್ನ್ಸ್ ಸಲ್ಲಿಸುವುದರೊಂದಿಗೆ ಸ್ಥಿರವಾದ ಪ್ರಗತಿಯನ್ನು ಕಾಣುತ್ತಿದ್ದೇವೆ. 1 ರಿಂದ 7 ರ ನಮೂನೆಗಳು ಕ್ರಿಯಾತ್ಮಕವಾಗಿವೆ ಮತ್ತು ಲಭ್ಯವಿವೆ” ಎಂದು ಎರಡನೇ ತ್ರೈಮಾಸಿಕದ ಕಂಪೆನಿಯ ಫಲಿತಾಂಶಗಳ ನಂತರ ಪರೇಖ್ ಸುದ್ದಿಗಾರರಿಗೆ ತಿಳಿಸಿದ್ದಾರೆ. 3.8 ಕೋಟಿ ಬಳಕೆದಾರರು ವಹಿವಾಟುಗಳನ್ನು ಪೂರ್ಣಗೊಳಿಸಿದ್ದಾರೆ ಮತ್ತು ಪ್ರತಿ ದಿನ 2-3 ಲಕ್ಷ ರಿಟರ್ನ್ಸ್ ಸಲ್ಲಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಕಳೆದ ತಿಂಗಳು ಮೂರು ಕೋಟಿಗೂ ಅಧಿಕ ತೆರಿಗೆದಾರರು ವಹಿವಾಟುಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ ಮತ್ತು ಹೊಸ ಐಟಿ ಪೋರ್ಟಲ್‌ನಲ್ಲಿ ಸುಮಾರು 1.5 ಕೋಟಿ ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ

ಪ್ರಮುಖ ಸುದ್ದಿ :-   ಅಕ್ರಮ ಹಣ ವರ್ಗಾವಣೆ ಪ್ರಕರಣ : ಕೇಜ್ರಿವಾಲಗೆ ದೆಹಲಿ ಹೈಕೋರ್ಟ್‌ ನಿಂದ ಸಿಗದ ಜಾಮೀನು

.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement