ಕಬಡ್ಡಿ ಆಡಿ ಗಮನ ಸೆಳೆದ ಬಿಜೆಪಿ ಸಂಸದೆ ಸಾಧ್ವಿ ಪ್ರಗ್ಯಾಸಿಂಗ್.. ವೀಕ್ಷಿಸಿ

ನವದೆಹಲಿ: ಬಿಜೆಪಿ ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್ ಮಹಿಳೆಯರೊಂದಿಗೆ ಕಬಡ್ಡಿ ಆಡಿ ಗಮನ ಸೆಳೆದಿದ್ದಾರೆ.
ಮಧ್ಯಪ್ರದೇಶದ ಭೂಪಾಲ್ ಲೋಕಸಭಾ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಸಿಂಗ್ ಅವರು ವಿಶ್ವ ಪ್ರಸಿದ್ದ ಕಾಳಿ ದೇವಾಲಯಕ್ಕೆ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಕ್ರೀಡಾಂಗಣದಲ್ಲಿ ಕಬಡ್ಡಿ ಆಡುತ್ತಿದ್ದ ಯುವತಿಯರು ತಮ್ಮೊಂದಿಗೆ ಕಬಡ್ಡಿ ಆಡುವಂತೆ ಮನವಿ ಮಾಡಿಕೊಂಡಾಗ ಕೇಸರಿ ರೂಮಾಲು ಸುತ್ತಿ ಅಂಕಣಕ್ಕೆ ಇಳಿದ ಪ್ರಗ್ಯಾ ಅವರು ಕಬಡ್ಡಿ ಆಡುತ್ತಿರುವ ವಿಡಿಯೋ ತುಣುಕುಗಳು ಇದೀಗ ವೈರಲ್ ಆಗಿವೆ.

ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಪ್ರಗ್ಯಾ ಅವರು ಬ್ಯಾಸ್ಕೆಟ್ ಬಾಲ್ ಆಡುವುದು ಮತ್ತು ನೃತ್ಯ ಮಾಡುತ್ತಿದ್ದ ದೃಶ್ಯಗಳು ಈ ಹಿಂದೆ ಗಮನ ಸೆಳೆದಿದ್ದವು. ವೈದ್ಯಕೀಯ ಚಿಕಿತ್ಸೆ ಕಾರಣದಿಂದ ಜಾಮೀನು ಪಡೆದು ಹೊರಬಂದ ನಂತರ ಅದೇ ಕಾರಣ ನೀಡಿ ಹಲವಾರು ವಿಚಾರಣೆಗೆ ಗೈರು ಹಾಜರಾಗಿದ್ದ ಪ್ರಗ್ಯಾ ಅವರು ಇದೀಗ ಕಬಡ್ಡಿ ಆಡುತ್ತಿರುವ ವಿಡಿಯೋ ವೈರಲ್ ಆಗಿರುವುದನ್ನು ಕಾಂಗ್ರೆಸ್ ತನ್ನ ಆಸ್ತ್ರವನ್ನಾಗಿ ಮಾಡಿಕೊಂಡಿದೆ.
2017 ರಲ್ಲಿ ಆಕೆಗೆ ವೈದ್ಯಕೀಯ ಕಾರಣಗಳ ಆಧಾರದ ಮೇಲೆ ಜಾಮೀನು ಮಂಜೂರಾಗಿತ್ತು. ಜಾಮೀನಿನ ಮೇಲೆ ಹೊರ ಬಂದ ನಂತರ ಆಕೆ ಮಾಡಿದ ಗಾರ್ಬಾ ನೃತ್ಯ, ಬ್ಯಾಸ್ಕೆಟ್ ಬಾಲ್ ಅಡುವ ವಿಡಿಯೋಗಳು ವೈರಲ್ ಆಗಿದ್ದವು. ಇದೀಗ ಕಬಡ್ಡಿ ಆಡುತ್ತಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿರುವುದರಿಂದ ಪ್ರಗ್ಯಾ ಮತ್ತೆ ಸಂಚಲನ ಸೃಷ್ಡಿಸಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ