ಬಾಂಗ್ಲಾದೇಶದಲ್ಲಿ ದುರ್ಗಾ ಪೂಜಾ ಪಂಡಲ್‌ಗಳು ಧ್ವಂಸ, ಕನಿಷ್ಠ 3 ಸಾವು

ಢಾಕಾ: ಬಾಂಗ್ಲಾದೇಶದಲ್ಲಿ ದುರ್ಗಾ ಪೂಜಾ ಪಂಡಲ್‌ಗಳು ಮತ್ತು ವಿಗ್ರಹಗಳ ಮೇಲೆ ಹಲವಾರು ದಾಳಿಗಳು ನಡೆದಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ದುರ್ಗಾಪೂಜೆ ಆಚರಣೆಯಲ್ಲಿ ಕೋಮು ಉದ್ವಿಗ್ನತೆ ಆವರಿಸಿದೆ. ಕೊಮಿಲ್ಲಾ ಪಟ್ಟಣದ ನನುವಾರ್ ದಿಗಿ ಸರೋವರದ ಬಳಿ ದುರ್ಗಾ ಪೂಜಾ ಪಂಡಲ್‌ ಒಂದರಲ್ಲಿ ಕುರಾನ್ ಅನ್ನು ಅಪವಿತ್ರಗೊಳಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಹರಡಿದ ನಂತರ ಹಿಂಸಾಚಾರ ಭುಗಿಲೆದ್ದಿದೆ.
ಕೋಮಿಲ್ಲಾ ಹಿಂಸಾಚಾರದ ನಂತರ, ಚಂದ್‌ಪುರದ ಹಾಜಿಗಂಜ್, ಚಟ್ಟೋಗ್ರಾಮ್‌ನ ಬಂಶ್‌ಖಾಲಿ ಮತ್ತು ಕಾಕ್ಸ್ ಬಜಾರ್‌ನ ಪೆಕುವಾದಲ್ಲಿನ ದೇವಸ್ಥಾನಗಳಲ್ಲಿ ವಿಧ್ವಂಸಕ ಘಟನೆಗಳು ವರದಿಯಾಗಿವೆ ಎಂದು ವರದಿ ಹೇಳಿದೆ.
ಹಿಂಸಾಚಾರವು ಇತರ ಪೂಜಾ ಪಂಡಲ್‌ಗಳಿಗೆ ಹರಡುತ್ತಿದ್ದಂತೆ, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಿದರು. ಆದರೆ ಗುಂಪುಗಳು ಕಲ್ಲುಗಳಿಂದ ಹೊಡೆದರು. ಗಲಭೆಕೋರರನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಶೆಲ್ ಮತ್ತು ರಬ್ಬರ್ ಗುಂಡುಗಳನ್ನು ಹಾರಿಸಬೇಕಾಯಿತು.
ಬಾಂಗ್ಲಾದೇಶದ ದುರ್ಗಾ ಪೂಜಾ ಪಂಡಲ್ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ವರದಿಗಳು ಹೇಳುತ್ತವೆ.
ಹಿಂಸಾಚಾರ ನಡೆದ ಪ್ರದೇಶಗಳಲ್ಲಿ ರಾಪಿಡ್‌ ಆಕ್ಷನ್ ಬೆಟಾಲಿಯನ್ (ಆರ್ಎಬಿ) ಸಿಬ್ಬಂದಿ ಸೇರಿದಂತೆ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ.
ಬಾಂಗ್ಲಾದೇಶ ಹಿಂದೂ ಯೂನಿಟಿ ಕೌನ್ಸಿಲ್ ಪ್ರಕಾರ, “ಕುರಾನ್ ಅನ್ನು ಅವಮಾನಿಸುವ ವದಂತಿಗಳ” ನಂತರ ಕೊಮಿಲ್ಲಾದ ನನುವಾ ದಿಘಿಯಲ್ಲಿರುವ ಪೂಜಾ ಮಂಟಪದ ಮೇಲೆ ದಾಳಿ ನಡೆಸಲಾಗಿದೆ.
ಬ ಕಳೆದ 24 ಗಂಟೆಗಳಲ್ಲಿ ಏನಾಯಿತು ಎಂಬುದನ್ನು ನಾವು ಟ್ವೀಟ್‌ನಲ್ಲಿ ಪ್ರಕಟಿಸಲು ಸಾಧ್ಯವಿಲ್ಲ. ಬಾಂಗ್ಲಾದೇಶದ ಹಿಂದೂಗಳು ಕೆಲವು ಜನರ ನಿಜವಾದ ಮುಖಗಳನ್ನು ನೋಡಿದರು. ಭವಿಷ್ಯದಲ್ಲಿ ಏನಾಗುತ್ತದೆ ಎಂದು ನಮಗೆ ತಿಳಿದಿಲ್ಲ. ಆದರೆ ಬಾಂಗ್ಲಾದೇಶದ ಹಿಂದೂಗಳು 2021 ರಲ್ಲಿ ದುರ್ಗಾ ಪೂಜೆಯನ್ನು ಎಂದಿಗೂ ಮರೆಯುವುದಿಲ್ಲ … “ಎಂದು ಹಿಂದೂ ಯುನಿಟಿ ಕೌನ್ಸಿಲ್ ಹೇಳಿದೆ.
ಈ ಹಿಂದೆ, ಇದೇ ರೀತಿಯ ಘಟನೆಗಳು ಢಾಕಾದ ಟಿಪ್ಪು ಸುಲ್ತಾನ್ ರಸ್ತೆ ಮತ್ತು ಚಿತ್ತಗಾಂಗ್‌ನ ಕೊತ್ವಾಲಿಯಿಂದಲೂ ವರದಿಯಾಗಿವೆ.

ಪ್ರಮುಖ ಸುದ್ದಿ :-   ದಾಖಲೆಯ 613 ದಿನಗಳ ಕಾಲ ಕೋವಿಡ್‌ ಜೊತೆ ಜೀವಿಸಿದ್ದ 72 ವರ್ಷದ ವ್ಯಕ್ತಿ ; ಸಾಯುವ ಮೊದಲು ಆತನ ದೇಹದಲ್ಲಿ ಕೊರೊನಾ ವೈರಸ್‌ 50ಕ್ಕೂ ಹೆಚ್ಚು ಬಾರಿ ರೂಪಾಂತರಗೊಂಡಿತ್ತು..!

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement