550 ಕೇಕ್ ಕಟ್ ಮಾಡಿ ಜನ್ಮದಿನ ಆಚರಿಸಿಕೊಂಡ ವ್ಯಕ್ತಿ..!

ಮುಂಬೈ: ಜನ್ಮದಿನ ಏನಾದರೂ ನೆನಪಿನಲ್ಲಿ ಉಳಿಯುವ ಕೆಲಸ ಮಾಡಲು ಹೆಚ್ಚಿನವರು ಬಯಸುತ್ತಾರೆ. ಆದರೆ ವ್ಯಕ್ತಿಯೊಬ್ಬ 550 ಕೇಕ್ ಕಟ್ ಮಾಡಿ ವಿಶೇಷವಾಗಿ ಜನ್ಮದಿನ ಆಚರಿಸಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಯಾಗಿದ್ದಾರೆ.
ಜನ್ಮದಿನಕ್ಕೆ ಎಲ್ಲರೂ ತಮ್ಮ ಸ್ನೇಹಿತರ ಜೊತೆ ಮತ್ತು ಕುಟುಂಬದವರ ಜೊತೆ ಕೇಕ್ ಕಟ್ ಮಾಡಿ ಆಚರಣೆ ಮಾಡಿಕೊಳ್ಳುತ್ತಾರೆ. ಹೆಚ್ಚು ಎಂದರೂ 10 ಕೇಕ್ ಕಟ್ ಮಾಡಬಹುದು. ಆದರೆ ಈ ವ್ಯಕ್ತಿ ಬರೋಬ್ಬರಿ 550 ಕೇಕ್ ಕಟ್ ಮಾಡಿದ್ದು, ಆ ವಿಡಿಯೊವನ್ನು ಸಾಮಾಜಿಕ ಜಾಳತಾಣದಲ್ಲಿ ಹಂಚಿಕೊಳ್ಳಲಾಗಿದೆ.

ಮುಂಬೈನ ಕಾಂಡಿವಲಿ ಪಶ್ಚಿಮ ನಿಲ್ದಾಣದ ಬಳಿ ಸೂರ್ಯ ರಾತುರಿ ತನ್ನ ಜನ್ಮದಿನವನ್ನು ಏಕಕಾಲದಲ್ಲಿ 550 ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡಿದ್ದಾರೆ
ಮೂರು ಬೃಹತ್ ಟೇಬಲ್‍ಗಳ‌ ಮೇಲೆ 550 ವರ್ಣರಂಜಿತ ಕೇಕ್‍ಗಳನ್ನು ಇರಿಸಲಾಗಿದ್ದು, ಆ ಎಲ್ಲ ಕೇಕ್‌ ಗಳನ್ನು ಸೂರ್ಯ ತನ್ನ ಎರಡು ಕೈಯಲ್ಲಿ ಚಾಕು ಹಿಡಿದುಕೊಂಡು ಒಂದೊಂದಾಗಿ ಕತ್ತರಿಸುತ್ತ ಹೋಗಿದ್ದಾರೆ. ಸೂರ್ಯ ಅವರ ಸುತ್ತಲೂ ಒಂದು ದೊಡ್ಡ ಜನಸಮೂಹ ಜಮಾಯಿಸಿದ್ದು, ಹಲವರು ತಮ್ಮ ಫೋನ್‍ಗಳಲ್ಲಿ ಈ ವಿಶೇಷವನ್ನು ಸೆರೆ ಹಿಡಿದಿದ್ದಾರೆ.
ವೀಕ್ಷಿಸಿದ ಜನರು, ಆಚರಣೆ ವೇಳೆ ಯಾರಲ್ಲೂ ಸಾಮಾಜಿಕ ಅಂತರ ಕಾಣಿಸುತ್ತಿಲ್ಲ. ಅದರಲ್ಲಿಯೂ ಒಬ್ಬರ ಮುಖದ ಮೇಲೆಯೂ ಮಾಸ್ಕ್ ಇಲ್ಲ. ಕೊರೊನಾ ನಿಯಮವನ್ನು ಯಾರು ಪಾಲಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ