ಕೋವಿಡ್ ಲಸಿಕೆ ಹಾಕಲು ಕಾಲು ಸಂಕದ ಮೇಲೆ ಉಕ್ಕಿದ ನದಿ ದಾಟಿದ ಆರೋಗ್ಯ ಕಾರ್ಯಕರ್ತರ ವಿಡಿಯೋ ವೈರಲ್

ಇಟಾನಗರ: ಕೊರೊನಾ ವೈರಸ್ ವಿರುದ್ಧ ಜನರಿಗೆ ಲಸಿಕೆ ನೀಡುವ ಸಲುವಾಗಿ ಆರೋಗ್ಯ ಕಾರ್ಯಕರ್ತರು ಭಾರೀ ಸಾಹಸ ಮಾಡುತ್ತಾರೆ. ನದಿ ದಾಟುತ್ತಾರೆ, ಎತ್ತರದ ಗುಡ್ಡ ದಾಟಿ ಹೋಗಿ ಲಸಿಕೆ ನೀಡಿದ್ದಾರೆ. ಈಗ ಇಂಥದ್ದೇ ಒಂದು ವಿದ್ಯಮಾನದಲ್ಲಿ ಉಕ್ಕಿ ಹರಿಯುತ್ತಿರುವ ನದಿಗೆ ಅಡ್ಡಲಾಗಿ ತಾತ್ಕಾಲಿಕವಾಗಿ ನಿರ್ಮಿಸಿದ ಬಿದಿರಿನ ಕಾಲು ಸಂಕ ದಾಟಿ ಬರುತ್ತಿರುವ ವಿಡಿಯೋ ವೈರಲ್ ಆಗಿದೆ.

ಉಕ್ಕಿಹರಿಯುತ್ತಿರುವ ನದಿಗೆ ಅಡ್ಡಲಾಗಿ ಸ್ಥಳೀಯರು ತಾತ್ಕಾಲಿಕ ಕಾಳು ಸಂಕ ನಿರ್ಮಿಸಿದ್ದಾರೆ. ಅರುಣಾಚಲ ಪ್ರದೇಶದ ದೂರದ ಹಳ್ಳಿಯನ್ನು ತಲುಪಲು ಬಿದಿರು ಹಾಗೂ ಮರದ ದಿಮ್ಮಿಗಳ ಸೇತುವೆ ಮೂಲಕ ಆರೋಗ್ಯ ಕಾರ್ಯಕರ್ತರು ದಾಟಿದ್ದಾರೆ. ಅವರು ಎದುರಿಸಿದ ಸವಾಲುಗಳನ್ನು ಎತ್ತಿ ತೋರಿಸುವ ನಿಟ್ಟಿನಲ್ಲಿ ಟ್ವಿಟ್ಟರ್‌ನಲ್ಲಿ ವಿಡಿಯೊ ಹಂಚಿಕೊಂಡಿದ್ದು ಈಗ ವೈರಲ್‌ ಆಗಿದೆ.
ಸರ್ಕಾರಿ ಸ್ವಾಮ್ಯದ ಪ್ರಸಾರ ಭಾರತಿ ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ. ಕೊರೋನ ವೈರಸ್ ವಿರುದ್ಧ ಸಾವಿರಾರು ಜನರಿಗೆ ಲಸಿಕೆ ಹಾಕಲು ಗ್ರಾಮೀಣ ಆರೋಗ್ಯ ಕಾರ್ಯಕರ್ತರು ಕಾಡುಗಳು, ಹೊಳೆಗಳು ಮತ್ತು ಹದಗೆಟ್ಟ ರಸ್ತೆಗಳ ಮುಖಾಂತರ ದೂರದ ಪ್ರದೇಶಗಳನ್ನು ತಲುಪಿ ಜನರಿಗೆ ಚುಚ್ಚುಮದ್ದು ನೀಡುತ್ತಿರುವುದನ್ನು ಇದು ತೋರಿಸುತ್ತದೆ.
ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಅಡಿಯಲ್ಲಿ ದೇಶದಲ್ಲಿ ಇದುವರೆಗೆ 96.82 ಕೋಟಿಗೂ ಹೆಚ್ಚು ಕೋವಿಡ್ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ.

ಪ್ರಮುಖ ಸುದ್ದಿ :-   ಶಿಂಧೆ ಬಣದ ಶಿವಸೇನೆ ಸೇರಿದ ಬಾಲಿವುಡ್‌ ನಟ ಗೋವಿಂದ : 14 ವರ್ಷಗಳ ವನವಾಸದ ನಂತರ ರಾಜಕೀಯಕ್ಕೆ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement