ಜೈನ್ ರಾಜಸ್ಥಾನಿ ವಿದ್ಯಾ ಪ್ರಚಾರಕ ಮಂಡಳದ ಅಧ್ಯಕ್ಷರಾಗಿ ಭವರಲಾಲ್‌ ಜೈನ್‌ ಸತತ 3ನೇ ಬಾರಿಗೆ ಆಯ್ಕೆ

ಹುಬ್ಬಳ್ಳಿ: ಘಂಟಿಕೇರಿಯ ಶ್ರೀ ಜೈನ್ ರಾಜಸ್ಥಾನಿ ವಿದ್ಯಾ ಪ್ರಚಾರಕ ಮಂಡಳದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಸತತ ಮೂರನೇ ಅವಧಿಗೆ ಭವರಲಾಲ್‌ ಸಿ.ಜೈನ್‌ ಅವರು ಆಯ್ಕೆಯಾಗಿದ್ದಾರೆ.
ಅವರನ್ನು ಮತ್ತೆ ಮೂರು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಮಹೇಂದ್ರ.ಪಿ. ಪಾಲ್ಗೋತಾ, ಮುಖ್ಯ ಕಾರ್ಯದರ್ಶಿಯಾಗಿ ಭರತ್ ಭಂಡಾರಿ ಹಾಗೂ ಖಜಾಂಚಿಯಾಗಿ ಪೂರನ್‌ ನಹತ ಆಯ್ಕೆಯಾಗಿದ್ದಾರೆ.
ಶ್ರೀ ಜೈನ್ ರಾಜಸ್ಥಾನಿ ವಿದ್ಯಾ ಪ್ರಚಾರಕ ಮಂಡಳದ ಅಡುಯಲ್ಲಿ ಶಾಂತಿನಿಕೇತನ ಇಂಗ್ಲಿಷ್‌ ಮಾಧ್ಯಮ ಶಾಲೆ, ಶ್ರೀ ಶಾಂತಿನಾಥ್ ಹಿಂದಿ ಪ್ರೌಢ ಶಾಲೆ, ಶಾಂತಿನಿಕೇತನ ಪಿಯು ಕಾಲೇಜು, ಶಾಂತಿನಿಕೇತನ ಪದವಿ ಕಾಲೇಜು ಹಾಗೂ ಮಹಾವೀರ್ ಶಿಶು ವಿಹಾರ ಎಂಬ ಐದು ವಿದ್ಯಾಸಂಸ್ಥೆಗಳು ಕಾರ್ಯನಿರ್ವಹಿಸುತ್ತವೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ