ಸಮುದ್ರದ ಆಳದಲ್ಲಿ ಸ್ಕೂಬಾ ಡೈವರ್‌ನ ಮುದ್ದಾಡಿದ ಸೀಲ್‌: ಮನ ತಟ್ಟುತ್ತದೆ ಈ ವಿಡಿಯೊ

ಮಾನವನಷ್ಟೇ ಅಲ್ಲ, ಪ್ರಾಣಿಗಳಳು ಸಹ ತಮ್ಮ ಪ್ರೀತಿಯನ್ನು ಅಪ್ಪುಗೆಯ ಮೂಲಕ ತೋರಿಸುತ್ತವೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಸ್ಕೂಬಾ ಡೈವಿಂಗ್‌ ಮಾಡುವ ವೇಳೆಯಲ್ಲಿ ಕಡಲ ಚಿರತೆ( Seal )ಯೊಂದು ಸ್ಕೂಬಾ ಡೈವರ್‌ನನ್ನು ಅಪ್ಪಿ ಹಿಡಿದು ಮುದ್ದಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಇದು ಸ್ಕೂಬಾ ಡೈವರ್‌ ಮೇಲೆ ಸೀಲ್‌ನ ಪ್ರೀತಿಗೆ ಸಾಕ್ಷಿಯಂತಿದೆ ಹಾಗೂ ಮನ ತಟ್ಟುತ್ತದೆ.

ವೃತ್ತಿಯಲ್ಲಿ ವೈದ್ಯರಾಗಿರುವ ಬೆನ್‌ ಬರ್ವಿಲ್ಲೆ ಅವರಿಗೆ ಸ್ಕೂಬಾ ಡೈವಿಂಗ್‌ ಮಾಡುವ ಹವ್ಯಾಸ. ಸುಮಾರು 20 ವರ್ಷಗಳಿಂದಲೂ ಸ್ಕೂಬಾ ಡೈವಿಂಗ್‌ ಮಾಡುತ್ತಿರುವ ಅವರಿಗೆ ಸಮುದ್ರ ಆಳದಲ್ಲಿರುವ ಜೀವಿಗಳನ್ನು ಅಧ್ಯಯನ ಮಾಡುವುದು ಹಾಗೂ ಅದರ ಜೊತೆ ಬಾಂಧವ್ಯ ಬೆಸೆಯುವುದೆಂದರೆ ಪ್ರೀತಿ. ಉತ್ತರ ಸಮುದ್ರ ಪ್ರದೇಶದಲ್ಲಿ ಡೈವಿಂಗ್‌ ಮಾಡುವ ವೇಳೆಯಲ್ಲಿ ಸೀಲ್‌ ಮುಖಾಮುಖಿಯಾಗಿದೆ. ಈ ವೇಳೆ ಬೆನ್‌ ಬರ್ವಿಲ್ಲೆ ಜೊತೆಗೆ ಅದೂ ಈಜಿದೆ. ನಂತರದಲ್ಲಿ ಬೆನ್‌ ಬರ್ವಿಲ್ಲೆ ಬೆನ್‌ ಬರ್ವಿಲ್ಲೆ ಅವರನ್ನು ಅಪ್ಪಿಕೊಂಡು ಮುದ್ದಾಡಿದೆ. ತನ್ನ ಭಾವನೆಯನ್ನು ಬೆನ್‌ ಬರ್ವಿಲ್ಲೆ ಅವರ ಜೊತೆಗೆ ವ್ಯಕ್ತಪಡಿಸಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಇದಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸೀಲ್‌ನ ಪ್ರೀತಿಯ ಅಭಿವ್ಯಕ್ತಿಗೆ ಮಾರುಹೋಗಿದ್ದಾರೆ.

ಬೆನ್‌ ಬರ್ವಿಲ್ಲೆ ಸುಮಾರು 20 ವರ್ಷಗಳಿಂದ ಉತ್ತರ ಸಮುದ್ರದ ಆ ಪ್ರದೇಶದಲ್ಲಿ ಸ್ಕೂಬಾ ಡೈವಿಂಗ್ ಮಾಡುತ್ತಿದ್ದಾರೆ ಮತ್ತು ಇದರ ಪರಿಣಾಮವಾಗಿ ಸ್ಥಳೀಯ ಸಮುದ್ರದ ಸೀಲ್‌ ಗಳೊಂದಿಗೆ ಬಹಳ ಪರಿಚಿತರಾಗಿವುದಾಗಿ ಹೇಳುತ್ತಾರೆ.

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement