ಜ್ವರ, ಶೀತಕ್ಕೆ ಚಿಕಿತ್ಸೆ ನೀಡಲು 7 ತಿಂಗಳ ಮಗುವಿಗೆ ಕಬ್ಬಿಣದ ಸರಳಿಂದ ಬರೆ ಎಳೆದ ಮಾಂತ್ರಿಕ..!

ಜೈಪುರ: ಈವಿಜ್ಞಾನ ಹಾಗೂ ತಂತ್ರಜ್ಞಾನದ ಕಾಲದಲ್ಲಿಯೂ ಮೂಢ ನಂಬಿಕೆ ಅನುಸರಿಸುವವರೂ ಇದ್ದಾರೆ.
ಇದಕ್ಕೆ ಉದಾಹರಣೆಯಾಗಿ ರಾಜಸ್ಥಾನದ ಭಿಲ್ವಾರಾದಲ್ಲಿ ಘಟನೆಯೊಂದು ನಡೆದಿದ್ದು, ತಾಂತ್ರಿಕನೊಬ್ಬ 7 ತಿಂಗಳ ಗಂಡು ಮಗುವಿಗೆ ಜ್ವರ ಮತ್ತು ಶೀತಕ್ಕೆ ಚಿಕಿತ್ಸೆ ನೀಡುವುದಾಗಿ ಹೇ ಬಿಸಿ ಕಬ್ಬಿಣ ರಾಡ್‌ನಿಂದ ಬರೆ ಎಳೆದಿದ್ದಾನೆ.
ಭಿಲ್ವಾರಾದ ದಾದಾಬರಿ ಕಾಲೋನಿಯಲ್ಲಿ ಮಧ್ಯಪ್ರದೇಶದ ನೆಮಂಚ್ ಮೂಲದ ಕೂಲಿ ಕಾರ್ಮಿಕ ಶಂಭು ಅವರ ಕುಟುಂಬವೊಂದು ವಾಸವಾಗಿತ್ತು. ಶಂಭು ಅವರ ಪತ್ನಿ ಧಾರ್ಮಿಕ ಕಾರ್ಯಕ್ರಮಕ್ಕೆ ಹೋಗಿದ್ದರು. ಅಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಮಗನನ್ನು ಚಿಕಿತ್ಸೆಗಾಗಿ ಮಾಂತ್ರಿಕನ ಬಳಿ ಕರೆದೊಯ್ಯುವಂತೆ ಒಬ್ಬರು ಸಲಹೆ ನೀಡಿದರು.
ಶಂಭುವಿನ ಹೆಂಡತಿ ಮಗುವನ್ನು ಚಿಕಿತ್ಸೆಗೆಂದು ಮಾಂತ್ರಿಕನ ಬಳಿ ಕರೆದೊಯ್ದರು. ಮಾಂತ್ರಿಕ ಅನಾರೋಗ್ಯದಿಂದ ಬಳಲುತ್ತಿರುವ ಮಗುವಿಗೆ ಬಿಸಿ ಕಬ್ಬಿಣ ಸರಳಿನಿಂದ ಬರೆ ಎಳೆದಿದ್ದಾನೆ ಎಂದು ಆರೋಪಿಸಲಾಗಿದೆ, ಅದರ ನಂತರ ಮಗುವಿನ ಆರೋಗ್ಯ ಸ್ಥಿತಿ ತೀರ ಹದಗೆಟ್ಟಿತು. ನಂತರ ಮಗುವನ್ನು ಮಹಾತ್ಮಾ ಗಾಂಧಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ನಂತರ ಪೊಲೀಸರು ಮಗುವಿನ ಪೋಷಕರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದು, ಮಾಂತ್ರಿಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸಲು ಹುಡುಕಾಟ ಆರಂಭವಾಗಿದೆ. ಪುಟ್ಟ ಮಗುವಿಗೆ ಸರ್ಕಾರಿ ವೈದ್ಯಕೀಯ ಸೌಲಭ್ಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ