ಕರ್ನಾಟಕದಲ್ಲಿ ಪೆಟ್ರೋಲ್‌, ಡಿಸೇಲ್‌ ಬೆಲೆ ಇಳಿಕೆ ಸುಳಿವು ನೀಡಿದ ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ತೈಲ ಬೆಲೆ ಏರಿಕೆಯಿಂದ ಜನ ಎಲ್ಲ ಸಾಮಗ್ರಿಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಈಗ ಕೊಂಚ ನಿಟ್ಟುಸಿರು ಬಿಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ಬಂದಿದೆ.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಮತ್ತು ಮಾರಾಟ ತೆರಿಗೆಯನ್ನು ಕಡಿಮೆ ಮಾಡುವ ಬಗ್ಗೆ ಅವರು ಸುಳಿವು ನೀಡಿದ್ದಾರೆ. ರಾಜ್ಯದ ಆರ್ಥಿಕತೆ ಸುಧಾರಣೆಯಾದರೆ ಉಪಚುನಾವಣೆ ಬಳಿಕ ಬೆಲೆ ಇಳಿಕೆ ಮಾಡುವ ಬಗ್ಗೆ ಚಿಂತನೆಯಿದೆ ಎಂದು ಅವರು ಹೇಳಿದ್ದಾರೆ.
ಹಾನಗಲ್‌ ಉಪಚುನಾವಣಾ ಪ್ರಚಾರಕ್ಕೆ ತೆರಳುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ತೈಲ ಬೆಲೆ ಏರಿಕೆಯಿಂದ ಜನರು ಸಮಸ್ಯೆಗೆ ಸಿಲುಕಿದ್ದಾರೆ. ರಾಜ್ಯದಲ್ಲಿ ಆರ್ಥಿಕತೆಯ ಸುಧಾರಣೆಗೆ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಒಂದೊಮ್ಮೆ ಆರ್ಥಿಕ ಚೇತರಿಕೆ ಕಂಡು ಬಂದರೆ ಉಪಚುನಾವಣೆಯ ನಂತರದಲ್ಲಿ ತೈಲ ಬೆಲೆ ಇಳಿಕೆ ಮಾಡುವ ಚಿಂತನೆಯಿದೆ ಎಂದು ತಿಳಿಸಿದ್ದಾರೆ.
ಎಲ್ಲವೂ ರಾಜ್ಯದ ಆರ್ಥಿಕತೆಯ ಮೇಲೆ ಅವಲಂಬಿತವಾಗಿದೆ. ನಾನು ಆರ್ಥಿಕ ಪರಿಶೀಲನೆ ಸಭೆ ಕರೆದಿದ್ದೇನೆ. ಆರ್ಥಿಕ ಪರಿಸ್ಥಿತಿ ಉತ್ತಮವೆಂದು ತೋರುತ್ತಿದ್ದರೆ, ಸೆಸ್ ಮತ್ತು ಮಾರಾಟ ತೆರಿಗೆಯನ್ನು ಕಡಿಮೆ ಮಅಡುವ ಬಗ್ಗೆ ಪರಿಗಣಿಸುವ ಎಲ್ಲ ಸಾಧ್ಯತೆಗಳಿವೆ ಎಂದು ಅವರು ಹೇಳಿದರು.
ಕರ್ನಾಟಕದಲ್ಲಿ ಈಗಾಗಲೇ ಪೆಟ್ರೋಲ್‌ ಹಾಗೂ ಡಿಸೇಲ್‌ ಬೆಲೆ ನೂರರ ಗಡಿದಾಟಿದೆ. ರಾಯಚೂರಿನಲ್ಲಿ ಒಂದು ಲೀಟರ್ ಪೆಟ್ರೋಲ್​ಗೆ 109.35 ರೂ. ಇದ್ರೆ, ತುಮಕೂರಿನಲ್ಲಿ 108.08 ರೂ, ಕಲಬುರಗಿಯಲ್ಲಿ ಪೆಟ್ರೋಲ್ 109.26, ಬೀದರ್​ನಲ್ಲಿ 110.42, ಚಿತ್ರದುರ್ಗದಲ್ಲಿ 111.30, ಮಂಡ್ಯದಲ್ಲಿ 109.28, ಯಾದಗಿರಿಯಲ್ಲಿ 109.88, ಚಿಕ್ಕಬಳ್ಳಾಪುರದಲ್ಲಿ 109.59, ಧಾರವಾಡದಲ್ಲಿ 109.26 ರೂ. ಗಡಿದಾಟಿದೆ.
ಅಲ್ಲದೇ ಡಿಸೇಲ್‌ ದರ ಕೂಡ ನೂರರ ಗಡಿದಾಟಿದೆ. ಪ್ರಮುಖವಾಗಿ ಬೆಂಗಳೂರಿನಲ್ಲಿ ಲೀಟರ್ ಡೀಸೆಲ್ ಬೆಲೆ 100.37 ರೂ. ಆಗಿದ್ದರೆ, ರಾಯಚೂರಿನಲ್ಲಿ100.25 ರೂಪಾಯಿ, ತುಮಕೂರಿನಲ್ಲಿ100.84 ರೂಪಾಯಿ, ಕಲಬುರಗಿಯಲ್ಲಿ 100.16 ರೂಪಾಯಿ, ಬೀದರ್​ನಲ್ಲಿ 101.22 ರೂಪಾಯಿ, ಚಿತ್ರದುರ್ಗದಲ್ಲಿ101.93 ರೂಪಾಯಿ ಇದೆ.
ಪೆಟ್ರೋಲ್‌ ಹಾಗೂ ಡಿಸೇಲ್‌ ದರ ದೇಶಾದ್ಯಂತ ಭಾರಿ ಏರಿಕೆ ಕಾಣುತ್ತಲೇ ಇದೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ 2024: ಕರ್ನಾಟಕದ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement