ಭಾರತದ ತಂಡದ ಮಾಜಿ ಕ್ರಿಕೆಟ್‌ ಆಟಗಾರ ಯುವರಾಜ್ ಸಿಂಗ್ ಬಂಧನ; ವಿಚಾರಣೆ ಬಳಿಕ ಬಿಡುಗಡೆ

ಚಂಡೀಗಡ: ಪರಿಶಿಷ್ಟ ಜಾತಿ ಸಮುದಾಯವನ್ನು ಅವಹೇಳನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಕ್ರಿಕೆಟ್‌ ತಂಡದ ಮಾಜಿ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರನ್ನು ಹರಿಯಾಣದ ಪೊಲೀಸರು ಇಲ್ಲಿ ಬಂಧಿಸಿ ನಂತರ ಬಿಡುಗಡೆ ಮಾಡಿದ್ದಾರೆ.
ಕಳೆದ ವರ್ಷ ರೋಹಿತ್ ಶರ್ಮಾ ಜೊತೆ ಲೈವ್ ಚ್ಯಾಟಿಂಗ್ ಮಾಡುವ ವೇಳೆ ಪರಿಶಿಷ್ಟ ಜಾತಿಯ ಯುಜವೇಂದ್ರ ಚಹಲ್ ಅವರನ್ನ ಜಾತಿ ಕಾರಣಕ್ಕೆ ಹೀಗಳೆದಿದ್ದರು ಎಂದು ಆರೋಪಿಸಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಹೈಕೋರ್ಟ್​ನಲ್ಲಿ ವಿಚಾರಣೆಯಲ್ಲಿದೆ.
ಹೈಕೋರ್ಟ್ ಆದೇಶದ ಮೇರೆಗೆ ಚಂದೀಗಡದಿಂದ ಹಿಸಾರ್​ಗೆ ಬಂದ ಯುವರಾಜ್ ಸಿಂಗ್ ಅವರನ್ನ ಅಲ್ಲಿನ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದರು. ಬಳಿಕ, ಹೈಕೋರ್ಟ್​ನಲ್ಲಿ ಯುವರಾಜ್ ಸಿಂಗ್ ನಿರೀಕ್ಷಣಾ ಜಾಮೀನು ಪಡೆದದ್ದರಿಂದ ಅವರನ್ನ ಬಿಡುಗಡೆ ಮಾಡಲಾಯಿತು. ಯುವರಾಜ್ ಸಿಂಗ್ ಜೊತೆ ಭದ್ರತಾ ಸಿಬ್ಬಂದಿ ಮತ್ತು ವಕೀಲರೂ ಇದ್ದರು ಎನ್ನಲಾಗಿದೆ. ಬಿಡುಗಡೆಗೆ ಮುನ್ನ ಯುವರಾಜ್ ಸಿಂಗ್ ಅವರನ್ನ ಹಿಸಾರ್ ಪೊಲೀಸರು ಕೆಲ ಗಂಟೆಗಳ ಕಾಲ ವಿಚಾರಣೆ ನಡೆಸಿದರು ಎಂದು ತಿಳಿದುಬಂದಿದೆ.
ಪ್ರಕರಣ ಹಿನ್ನೆಲೆ: ಕಳೆದ ವರ್ಷ ರೋಹಿತ್ ಶರ್ಮಾ ಜೊತೆ ಸಂವಾದ ನಡೆಸುವ ಸಂದರ್ಭದಲ್ಲಿ ಯುಜವೇಂದ್ರ ಚಹಲ್ ಬಗ್ಗೆ ಮಾತನಾಡುತ್ತಾ ಅವರ ಜಾತಿ ಹಿನ್ನೆಲೆಯನ್ನ ಯುವರಾಜ್ ಹೀಗಳೆದಿದ್ದರು ಎಂಬುದು ಅವರ ಮೇಲಿರುವ ಆರೋಪ. ಪರಿಶಿಷ್ಟ ಸಮುದಾಯದ ವಿರುದ್ಧ ಅವರು ಆಕ್ಷೇಪಾರ್ಹ ಪದಪ್ರಯೋಗ ಮಾಡಿದ್ದರು ಎಂದು ದಲಿತ ಹಕ್ಕು ಹೋರಾಟಗಾರ ರಜತ್ ಕಲ್ಸನ್ ಎಂಬವರು ಎಸ್​ಸಿ ಎಸ್​ಟಿ ಕಾಯ್ದೆ ಮತ್ತು ಐಪಿಸಿಯ ವಿವಿಧ ಸೆಕ್ಷನ್ ಅಡಿಯಲ್ಲಿಯುವರಾಜ್ ಸಿಂಗ್ ವಿರುದ್ಧ ಹಾನ್ಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ನನ್ನಿಂದ ತಿಳಿಯದೇ ಆಡಿದ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಯುವರಾಜ್ ಸಿಂಗ್ ಕ್ಷಮೆ ಕೋರಿದ್ದರು.
ಇದೇ ವೇಳೆ, ಯುವರಾಜ್ ಸಿಂಗ್ ಅವರು ಹೈಕೋರ್ಟ್​ನಲ್ಲಿ ಈ ಪ್ರಕರಣ ವಜಾಗೊಳಿಸುವಂತೆ ಮನವಿ ಸಲ್ಲಿಸಿದರು. ಸದ್ಯ ಯುವರಾಜ್ ಸಿಂಗ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಪ್ರಮುಖ ಸುದ್ದಿ :-   ಕೆಲ ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ತಮಿಳುನಾಡು ಸಂಸದ ಹೃದಯಾಘಾತದಿಂದ ಸಾವು

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement