ಕನ್ನಡ ಚಿತ್ರರಂಗದ ಹಿರಿಯ ನಟ, ʼಪಾಪ ಪಾಂಡು’ ಖ್ಯಾತಿಯ ಶಂಕರ್​ ರಾವ್​ ನಿಧನ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ, ಜನಪ್ರಿಯ ‘ಪಾಪ ಪಾಂಡು’ ಧಾರಾವಾಹಿಯ ನಟ ಶಂಕರ್​ ರಾವ್​  ನಿಧನರಾಗಿದ್ದಾರೆ.
ಅವರು ಸೋಮವಾರ (ಅ.18) ಬೆಳಗಿನ ಜಾವ 6.30ರ ಸುಮಾರಿಗೆ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 84 ವರ್ಷ ವಯಸ್ಸಾಗಿತ್ತು.
ಶಂಕರ್​ ರಾವ್​ ನಿಧನಕ್ಕೆ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ.
ತುಮಕೂರಿನಲ್ಲಿ ಬಾಲ್ಯ ಹಾಗೂ ಕಾಲೇಜು ದಿನಗಳನ್ನು ಕಳೆದ ಶಂಕರ್​ ರಾವ್​. ಅಲ್ಲಿನ ಚಿತ್ರಮಂದಿರಗಳಲ್ಲಿ ಪ್ರದರ್ಶನ ಆಗುತ್ತಿದ್ದ ತೆಲುಗು ಸಿನಿಮಾಗಳನ್ನು ನೋಡಿ ಚಿತ್ರರಂಗದ ಬಗ್ಗೆ ಆಕರ್ಷಿತರಾದರು.. ಶಾಲಾ ದಿನಗಳಿಂದಲೇ ಅವರು ನಟನೆಯಲ್ಲಿ ಅಭಿರುಚಿ ಹೊಂದಿದ್ದರು. 1956ರಲ್ಲಿ ಬೆಂಗಳೂರಿಗೆ ಬಂದರು. ‘ಗೆಳೆಯರ ಬಳಗ’ ಟೀಮ್​ ಕಟ್ಟಿಕೊಂಡು ಶಂಕರ್​ ರಾವ್​ ನಾಟಕ ಮಾಡುತ್ತಿದ್ದರು. 19ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು ಮನೆಯ ಜವಾಬ್ದಾರಿಯನ್ನೂ ಹೊತ್ತುಕೊಂಡರು. ಪ್ರತಿ ವರ್ಷ ಸಿಗುತ್ತಿದ್ದ ಬೋನಸ್​ ಹಣದಲ್ಲಿ ಹೊಸ ರಂಗ ತಂಡ ಕಟ್ಟಿಕೊಂಡರು. ‘ನಟರಂಗ’ ತಂಡದ ಜೊತೆಗೂ ಶಂಕರ್​ ರಾವ್​ ಗುರುತಿಸಿಕೊಂಡಿದ್ದರು. ಹವ್ಯಾಸಿ ರಂಗಭೂಮಿ ಕಲಾವಿದನಾಗಿದ್ದ ಅವರು ಹಲವಾರು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು.
ವೇದಿಕೆ ಮೇಲೆ ಶಂಕರ್​ ರಾವ್​ ಅವರ ಅಭಿನಯ ನೋಡಿದ ನಿರ್ಮಾಪಕರೊಬ್ಬರು ಸಿನಿಮಾದಲ್ಲಿ ಅಭಿನಯಕ್ಕೆ ಅವಕಾಶ ನೀಡಿದರು. ‘ಯಾರ ಸಾಕ್ಷಿ’ ಸಿನಿಮಾದಲ್ಲಿ ಅವರು ಮೊದಲ ಬಾರಿಗೆ ನಟಿಸಿದರು. ಆ ಚಿತ್ರಕ್ಕೆ ಮಂಜುಳಾ ನಾಯಕಿ ಆಗಿದ್ದರು. ಲೋಕನಾಥ್​ ಕೂಡ ಅದರಲ್ಲಿ ನಟಿಸಿದ್ದರು. ನಂತರ ಶಂಕರ್​ ರಾವ್​ ಅವರಿಗೆ ತುಳಸಿದಳ ಸೇರಿದಂತೆ ಹೆಚ್ಚಾಗಿ, ಶಂಕರ್ ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳು ಮತ್ತು ಹಾಸ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅವರ ಕೆಲವು ಪ್ರಸಿದ್ಧ ಚಲನಚಿತ್ರಗಳಲ್ಲಿ ಧ್ರುವ, ಉಪ್ಪಿ ದಾದಾ ಎಂಬಿಬಿಎಸ್, ಸಿದ್ದಲಿಂಗು, ಮಿಲನ ಅಪ್ಪು ಮತ್ತು ವಂಶಿ ಸೇರಿವೆ.
ನಟರಾದ ರಮೇಶ ಅರವಿಂದ, ಶಿವರಾಜಕುಮಾರ್, ವಿಷ್ಣುವರ್ಧನ್, ಲೋಕೇಶ್, ಶ್ರೀನಾಥ್, ಉಪೇಂದ್ರ, ದ್ವಾರಕೀಶ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಕನ್ನಡದ ಜನಪ್ರಿಯ ನಟರೊಂದಿಗೆ ಶಂಕರ್ ರಾವ್ ಕೆಲಸ ಮಾಡಿದ್ದಾರೆ. ಇತ್ತೀಚಿಗೆ ಅವರು ಪಾಪ ಪಾಂಡು ಧಾರಾವಾಹಿ ಮೂಲಕ  ಮೂಲಕ ಮನೆ ಮಾತಾಗಿದ್ದರು.

ಪ್ರಮುಖ ಸುದ್ದಿ :-   ಬಿಜೆಪಿಯಿಂದ ಕೆ.ಎಸ್‌. ಈಶ್ವರಪ್ಪ ಉಚ್ಚಾಟನೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement