ಭಗವಂತನ ಅನುಭಾವದಲ್ಲಿ ಬೆರೆತರೆ ಜೀವನಕ್ಕೆ ಮುಕ್ತಿ: ಶ್ರೀ ರಘುವಿಜಯ ತೀರ್ಥ ಶ್ರೀಪಾದಂಗಳು

ಯಾದಗಿರಿ: ಮನುಷ್ಯ ನಿತ್ಯ ಜೀವನದ ಜಂಜಾಟದಿಂದ ಮಾನಸಿಕವಾಗಿ ಖಿನ್ನನಾಗುತ್ತಿದ್ದಾನೆ. ಇದರಿಂದ ಮುಕ್ತಿ ಹೊಂದಬೇಕಾದರೆ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಶಿವಮೊಗ್ಗ ಜಿಲ್ಲೆ ಕೂಡಲಿಯ ಆರ್ಯ ಅಕ್ಷೋಭ್ಯ ಮಠದ ಪೀಠಾಧಿಪತಿ ಶ್ರೀ ರಘುವಿಜಯ ತೀರ್ಥ ಶ್ರೀಪಾದಂಗಳರು ಹೇಳಿದರು.
ನಗರದ ಬಿ.ಶ್ರೀನಿವಾಸರಾವ್ ಕುಲಕರ್ಣಿ ನಿವಾಸದಲ್ಲಿ ನಡೆದ ವೈಕುಂಠ ಶ್ರೀರಾಮದೇವರ ಪೂಜಾ ಕಾರ್ಯಕ್ರಮದ ನಂತರ ಭಕ್ತರಿಗೆ ಆಶೀರ್ವಚನ ನೀಡಿದ ಅವರು, ಪ್ರತಿನಿತ್ಯ ಭಗವಂತನ ನಾಮಸ್ಮರಣೆ ಮಾಡಿದರೆ ಮನಸ್ಸು ಸಕಾರಾತ್ಮಕ ಚಿಂತನೆಯತ್ತ ತಿರುಗುತ್ತದೆ ಎಂದರು.
ಭಕ್ತಿಸೂತ್ರ, ಧರ್ಮಸೂತ್ರ ಹಾಗೂ ಬ್ರಹ್ಮಸೂತ್ರಗಳ ಮೂಲಕ ಭಗವಂತನ ನಾಮ ಸ್ಮರಣೆ ಸಾಧ್ಯ. ಈ ಜಗತ್ತು ನಾವು ಬರುವ ಮೊದಲೂ ಇದೆ. ನಮ್ಮ ನಂತರವೂ ಇರುತ್ತದೆ. ಭಗವಂತನಿಗೆ ಸೇರಿದ ಈ ಜಗತ್ತಿನಲ್ಲಿ ನಮ್ಮದು ಎನ್ನುವುದು ಯಾವುದೂ ಇಲ್ಲ. ಅಂಥ ಪರಮಾತ್ಮನ ಕಡೆಗೆ ಅಂತರ್ಮುಖಿಗಳಾಗಿ ನಾಮಸ್ಮರಣೆ ಮಾಡುವುದು ಮಾತ್ರ ನಮ್ಮ ಕಾಯಕವಾಗಬೇಕು ಎಂದು ಹೇಳಿದರು.
ವಿಜ್ಞಾನಿಗಳ ಸೇವೆ ಶರೀರ ಸಾಧನೆ, ಪಾಠ-ಪ್ರವಚನ ವಾಚಿಕ ಸಾಧನೆ. ವಾಚಿಕ ಸಾಧನೆಯಿಂದ ಮಾನಸ ಸಾಧನೆ ಉಂಟಾಗತ್ತದೆ. ಮನಸ್ಸಿನಲ್ಲಿ ನಡೆಯುವ ಭಗವಂತನ ನಾಮ ಸ್ಮರಣೆಯೆ ಮಾನಸ ಸಾಧನೆ. ಜೀವನ ಕೇವಲ ಸುಖ, ಸಮಾಧಾನ ಪ್ರಾಪ್ತಿಗಾಗಿ ಅಲ್ಲ. ಧನ ಸಂಪಾದನೆಯ ಕಡೆಗೆ ಪ್ರಥಮ ಪ್ರಾಶಸ್ತ್ತ ನೀಡುವ ನಾವುಗಳು ಸಂತ, ಸತ್ಪುರುಷರು ಹೇಳಿದ ಕಡೆ ಲಕ್ಷ್ಯ ಕೊಟ್ಟು ಭಗವಂತನ ಅನುಭಾವದಲ್ಲಿ ಬೆರೆತರೆ ಜೀವನಕ್ಕೆ ಮುಕ್ತಿ ಸಿಗಲಿದೆ ಎಂದರು.

ಪ್ರಮುಖ ಸುದ್ದಿ :-   ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ ; ತಕ್ಷಣವೇ ಸಿಪಿಆರ್‌ ಮಾಡಿ ಜೀವ ಉಳಿಸಿದ ಮತದಾನ ಮಾಡಲು ಬಂದಿದ್ದ ವೈದ್ಯ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement