ಫಿಲಿಪೈನ್ಸ್​ನಲ್ಲಿ ಕುಖ್ಯಾತ ಗ್ಯಾಂಗ್​ಸ್ಟರ್ ಸುರೇಶ್ ಪೂಜಾರಿ ಬಂಧನ

ಫಿಲಿಪೈನ್ಸ್​ನಲ್ಲಿ ಕುಖ್ಯಾತ ಗ್ಯಾಂಗ್​ಸ್ಟರ್ ಸುರೇಶ್ ಪೂಜಾರಿಯನ್ನು ಬಂಧಿಸಲಾಗಿದೆ.
ಮಂಗಳೂರು ಮೂಲದ ಸುರೇಶ್ ಪೂಜಾರಿ, ಭೂಗತ ಪಾತಕಿ ಛೋಟಾ ರಾಜನ್ ಹಾಗೂ ರವಿ ಪೂಜಾರಿ ಸಹಚರನಾಗಿದ್ದ. ನಂತರ ತನ್ನದೇ ಗ್ಯಾಂಗ್ ನಡೆಸುತ್ತಿದ್ದ. ಬೆಂಗಳೂರಿನ ಕೆಲವು ಪ್ರಣಗಳಲ್ಲಿಯೂ ಸುರೇಶ್ ಪೂಜಾರಿ ಪ್ರಮುಖ ಆರೋಪಿಯಾಗಿದ್ದಾನೆ. ಇದೀಗ ಫಿಲಿಫೈನ್ಸ್​​ನಲ್ಲಿ ಇಂಟರ್​ಪೋಲ್ ಪೊಲೀಸರು ಈತನನ್ನು ಬಂಧಿಸಲಾಗಿದೆ ಎಂದು ಖಾಸಗಿ ವಾಹಿನಿಯೊಂದು ವರದಿ ಪ್ರಸಾರ ಮಾಡಿದೆ.
ಕಳೆದ 10 ವರ್ಷದಿಂದ ರವಿ ಪೂಜಾರಿ ಗ್ಯಾಂಗ್​ನಿಂದ ಬೇರೆ ಆಗಿ, ಪ್ರತ್ಯೇಕ ಗ್ಯಾಂಗ್ ಮಾಡಿಕೊಂಡಿದ್ದ ಸುರೇಶ್ ಪೂಜಾರಿ, ಕಾಲ್ ಮಾಡಿ ಬೆದರಿಕೆ ಒಡ್ಡುತ್ತಿದ್ದ. ಈತನ ವಿರುದ್ಧ ಕರ್ನಾಟಕ, ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಲ್ಲಿ ಪ್ರಕರಣ ದಾಖಲಾಗಿತ್ತು. ಹಲವು ಎಫ್​ಐಆರ್​ಗಳು ದಾಖಲಾದ ನಂತರ ಭಾರತದಿಂದ ಪಲಾಯನ ಮಾಡಿ, ವಿವಿಧ ದೇಶಗಳಲ್ಲಿ ನಕಲಿ ಗುರುತಿನ ಕಾರ್ಡ್ ಬಳಸಿ ವಾಸಿಸುತ್ತಿದ್ದ. ಮೂಲಗಳ ಪ್ರಕಾರ, ಸುರೇಶ್ ಪೂಜಾರಿ ಅಕ್ಟೋಬರ್ 15ರಂದು ಸಿಕ್ಕಿಬಿದ್ದಿದ್ದು, ಈಗ ಪೊಲೀಸ್‌ ವಶದಲ್ಲಿದ್ದಾನೆ. ಮುಂಬಯಿ ಪೊಲೀಸರು ಮತ್ತು ಸಿಬಿಐ ಹಲವು ವರ್ಷಗಳಿಂದ ದರೋಡೆಕೋರರ ಚಲನವಲನಗಳನ್ನು ಗಮನಿಸುತ್ತಿತ್ತು.
ಈ ವರ್ಷದ ಆರಂಭದಲ್ಲಿ ಮತ್ತೊಬ್ಬ ಕುಖ್ಯಾತ ರವಿ ಪೂಜಾರಿಯನ್ನು ವಶಕ್ಕೆ ಪಡೆಯಲಾಗಿತ್ತು. ಪೂಜಾರಿ ಭಾರತದಿಂದ ಪಲಾಯನ ಮಾಡಿದ ಮತ್ತು ವಿವಿಧ ದೇಶಗಳಲ್ಲಿ ನಕಲಿ ಗುರುತಿನ ಅಡಿಯಲ್ಲಿ ವಾಸಿಸುತ್ತಿದ್ದ. ಹೋಟೆಲ್ ಮತ್ತು ಬಾರ್ ಮಾಲೀಕರ ಬಹು ಸುಲಿಗೆ ಸೇರಿದಂತೆ ಹಲವಾರು ಪ್ರಕರಣಗಳಿಗೆ ಪೂಜಾರಿ ಬೇಕಾಗಿದ್ದಾನೆ. ಮುಂಬೈ ಪೊಲೀಸರು ಈಗ ಫಿಲಿಪೈನ್ಸ್‌ನಿಂದ ಪೂಜಾರಿ ಅವರನ್ನು ಹಸ್ತಾಂತರಿಸುವ ಕೆಲಸ ನಡೆಯುತ್ತಿದೆ.

ಪ್ರಮುಖ ಸುದ್ದಿ :-   ಇಂದು ಮಂಗಳೂರು ಏರ್​ಪೋರ್ಟ್​ಗೆ ಪ್ರಜ್ವಲ್ ರೇವಣ್ಣ ಆಗಮಿಸುವ ಸಾಧ್ಯತೆ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement