ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಗಲ್ಫ್ ಇಸ್ಲಾಮಿಕ್ ಹೂಡಿಕೆಯ ಕಚೇರಿ: 3 ವರ್ಷಗಳಲ್ಲಿ 3500 ಕೋಟಿ ರೂ. ‌ಬಂಡವಾಳ ಹೂಡಿಕೆ

ದುಬೈ: ಭಾರತ ಹಾಗೂ ‌ ಯುನೈಟೆಡ್ ‌ಅರಬ್ ಯಮಿರೆಟ್ಸ್ ( ಯುಎಇ) ನಡುವೆ ಹೂಡಿಕೆ ಸಂಬಂಧಗಳನ್ನು ಭವಿಷ್ಯದಲ್ಲಿ ಮತ್ತಷ್ಟು ಬಲಪಡಿಸಲು ಗಲ್ಫ್ ಇಸ್ಲಾಮಿಕ್ ಹೂಡಿಕೆ ( GII) ತನ್ನ ಕಚೇರಿಯನ್ನು ರಾಜಧಾನಿ ‌ಬೆಂಗಳೂರಿನಲ್ಲಿ ತೆರೆಯಲು ಮುಂದೆ ‌ಬಂದಿದೆ.
ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ,ಹಾಗೂ ಐಟಿ ಮತ್ತು ಬಿಟಿ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ್ ಅವರು ದುಬೈ ‌ಎಕ್ಸ್‌ಪೋ 2020 ಸಮಾರಂಭದಲ್ಲಿ ಸೋಮವಾರ ಕರ್ನಾಟಕ ವಸ್ತು ಪ್ರದರ್ಶನ ಕೇಂದ್ರದಲ್ಲಿ ಪ್ರಮುಖ ಉದ್ಯಮಿಗಳ ಜೊತೆ ನಡೆಸಿದ ‘ ಯಶಸ್ವಿ’ ಮಾತುಕತೆ ‌ಪರಿಣಾಮ
‘ ಐಟಿ ಸಿಟಿ ಖ್ಯಾತಿಯ ಬೆಂಗಳೂರಿನಲ್ಲಿ ‌ಗಲ್ಫ್ ಇಸ್ಲಾಮಿಕ್ ಹೂಡಿಕೆ ಕಚೇರಿಯನ್ನು ಆರಂಭಿಸಲು‌ ತೀರ್ಮಾನಿಸಲಾಯಿತು.
ಮುಂದಿನ ಮೂರು ವರ್ಷಗಳಲ್ಲಿ ಭಾರತದಲ್ಲಿ 500 ಮಿಲಿಯನ್ ಅಮೆರಿಕ ಡಾಲರ್‌ ( 3,500 ಕೋಟಿ ರೂ.ಗಳ) ಹೂಡಿಕೆ ಮಾಡಲು ಜಿಐಐ ಯೋಜಿಸಿದ್ದು, ಇದರಿಂದಾಗಿ ‌ಸಾವಿರಾರು ಉದ್ಯೋಗಗಳು ‌ಸೃಷ್ಟಿಯಾಗುವ ನಿರೀಕ್ಷೆಯಿದೆ.. ಗಲ್ಫ್ ಇಸ್ಲಾಮಿಕ್ ಇನ್ವೆಸ್ಟ್‌ಮೆಂಟ್ ಯುಎಇ ಮೂಲದ ಪ್ರಮುಖ ಷರಿಯಾ-ಕಂಪ್ಲೈಂಟ್ ಹಣಕಾಸು ಸೇವೆಗಳ ಸಂಸ್ಥೆಯಾಗಿದ್ದು, ನಿರ್ವಹಣೆಯ ಅಡಿಯಲ್ಲಿ 2 ಶತಕೋಟಿ ಅಮೆರಿನದದ ಡಾಲರುಗಳಿಗಿಂತ ಹೆಚ್ಚಿನ ಆಸ್ತಿಗಳನ್ನು ಹೊಂದಿದೆ.
ಜಿಐಎಯು ತಮ್ಮ ಮಧ್ಯಪ್ರಾಚ್ಯ ವಿಸ್ತರಣಾ ಯೋಜನೆಗಳನ್ನು ಹೆಚ್ಚಿಸಲು ಭಾರತೀಯ ಸ್ಟಾರ್ಟ್ಅಪ್‌ಗಳೊಂದಿಗೆ ಸಹಯೋಗವನ್ನು ಪಡೆಯುವ ಯೋಜನೆಯನ್ನೂ ಹಾಕಿಕೊಂಡಿದೆ.
ಇದೇ ಸಂದರ್ಭದಲ್ಲಿ ‌ಹೂಡಿಕೆಗಳನ್ನು ಆಕರ್ಷಿಸಲು ಮತ್ತು ವ್ಯಾಪಾರವನ್ನು ಉತ್ತೇಜಿಸಲು ಕರ್ನಾಟಕ ಸರ್ಕಾರವು ( GII) ಸಮೂಹಗಳೊಂದಿಗೆ ವ್ಯಾಪಾರ ಒಪ್ಪಂದ ‌( MOU) ಮಾಡಿಕೊಂಡಿತು.
ಈ ಸಂದರ್ಭದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ‌ಮಾತನಾಡಿ, ” ಬೆಂಗಳೂರಿನಲ್ಲಿ ತನ್ನ ಕಚೇರಿಯನ್ನು ತೆರೆಯಲು ಜಿಐಐ ನಿರ್ಧಾರವು ಭಾರತ ಮತ್ತು ಯುಎಇ ನಡುವಿನ ಹೂಡಿಕೆ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುತ್ತದೆ” ಎಂದು ಹೇಳಿದರು.
ನಮ್ಮ ರಾಜ್ಯವು ಹೂಡಿಕೆ ಮಾಡಲು ಸೂಕ್ತ ತಾಣವಾಗಿದೆ ಏಕೆಂದರೆ, ನಾವು ಉದ್ಯಮ-ವಹಿವಾಟು ‌ನಡೆಸಲು ಸುಲಭ ಮತ್ತು ಹೂಡಿಕೆದಾರರ ಸ್ನೇಹಿ ವಾತಾವರಣವನ್ನು ನಿರ್ಮಿಸಿದ್ದೇವೆ. ಬೆಂಗಳೂರಿನಲ್ಲಿ ಜಿಐಐ ಕಚೇರಿ ‌ಆರಂಭವಾಗುತ್ತಿರುವುದರಿಂದ‌ ಹೆಚ್ಚಿನ ಹೂಡಿಕೆಗಳು, ವ್ಯಾಪಾರ ಮತ್ತು ಉದ್ಯೋಗ ಸೃಷ್ಟಿಗೆ ದಾರಿ ಮಾಡಿಕೊಡುತ್ತದೆ ಎಂಬ ವಿಶ್ವಾಸ ನನಗಿದೆ‌ ಎಂದರು.

ಪ್ರಮುಖ ಸುದ್ದಿ :-   ವೀಡಿಯೊ..| ಕುಮಟಾ : ಅಘನಾಶಿನಿ ನದಿಗೆ ಅಡ್ಡವಾಗಿ ನಿರ್ಮಾಣವಾಗುತ್ತಿದ್ದ ಸೇತುವೆಯ ಸ್ಲ್ಯಾಬ್‌ ಕುಸಿತ

ಭಾರತದ ಕಾನ್ಸುಲ್ ಜನರಲ್ ಡಾ ಅಮಾನ್ ಪುರಿ ಮಾತನಾಡಿ, ದುಬೈಗೆ ಕರ್ನಾಟಕ‌ ಏಷ್ಯಾ ಖಂಡದ ರಾಜಧಾನಿಯಾಗಿದೆ. ಬೆಂಗಳೂರಿನಲ್ಲಿ ಭಾರತದ 40% ಯುನಿಕಾರ್ನ್‌ಗಳಿಗೆ ನೆಲೆಯಾಗಿದೆ‌. 5 ಟ್ರಿಲಿಯನ್ ಅಮೆರಿಕ ಡಾಲರ್ ಆರ್ಥಿಕತೆಯಾಗುವ ಭಾರತದ ಅನ್ವೇಷಣೆಯಲ್ಲಿ ಯುಎಇ ದೊಡ್ಡ ಪಾಲುದಾರ ಎಂದು ‌ಪ್ರಶಂಸಿದರು.
ಇದೇ ವೇಳೆ ಮೊಹಮ್ಮದ್ ಅಲ್ಹಾಸನ್ ಮತ್ತು ಪಂಕಜ್ ಗುಪ್ತಾ, ಗಲ್ಫ್ ಇಸ್ಲಾಮಿಕ್ ಇನ್ವೆಸ್ಟ್ಮೆಂಟ್ಸ್ ನ ಸ್ಥಾಪಕ ಪಾಲುದಾರರು ಮತ್ತು ಸಹ ಸಿಇಒಗಳು ತಮ್ಮ ‌ಜಂಟಿ ಹೇಳಿಕೆಯಲ್ಲಿ,
“ಭಾರತದ ತಂತ್ರಜ್ಞಾನ ರಾಜಧಾನಿ ಬೆಂಗಳೂರಿನಲ್ಲಿ ಜಿಐಐ ಕಚೇರಿಯನ್ನು ಸ್ಥಾಪಿಸುವ ನಮ್ಮ ಯೋಜನೆಗಳನ್ನು ಅಧಿಕೃತವಾಗಿ ಘೋಷಿಸಲು ನಾವು ಸಂತೋಷಪಡುತ್ತೇವೆ” ಎಂದು ತಿಳಿಸಿದರು.
ಭಾರತ ಬೆಳವಣಿಗೆ ಪೋರ್ಟ್ಫೋಲಿಯೋ ಸರಣಿಯ ಮೂಲಕ ನಮ್ಮ ಪ್ರಾಥಮಿಕ ಹೂಡಿಕೆ ಸುತ್ತುಗಳ ಯಶಸ್ಸನ್ನು ಗಮನಿಸಿದರೆ, ₹ 1,000 ಕೋಟಿಗೂ ಅಧಿಕ ಮೌಲ್ಯದ ವಹಿವಾಟು ನಡೆಸಲು ‌ಉತ್ಸುಕತೆ ಹೊಂದಿದ್ದೇವೆ. ಭಾರತ-ಯುಎಇ ಹೂಡಿಕೆ ಕಾರಿಡಾರ್ ಅನ್ನು ಹೆಚ್ಚಿಸಲು ಕಾರ್ಯತಂತ್ರವಾಗಿ ಕೊಡುಗೆ ನೀಡಲು ಎದುರು ನೋಡುತ್ತಿದ್ದೇವೆ ಎಂದು ‌ತಿಳಿಸಿದರು.
ಕಳೆದ ಮೂರು ದಿನಗಳಿಂದ ಸಚಿವ ಮುರುಗೇಶ್ ನಿರಾಣಿ ಅವರು ಹಲವಾರು ಉದ್ಯಮಿಗಳನ್ನು ಭೇಟಿ ಮಾಡಿ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ‌ಮನವರಿಕೆ ಮಾಡಿದ್ದಾರೆ. ನಿರಂತರವಾಗಿ ‌ಹೆಸರಾಂತ ನಿಯೋಗಗಳನ್ನು ಭೇಟಿ ಮಾಡಿರುವ‌ ಅವರು, ಕರ್ನಾಟಕದಲ್ಲಿ ಹೂಡಿಕೆ ಮಾಡಲು ಹಲವಾರು ಕಂಪನಿಗಳನ್ನು ಮನವೊಲಿಸುವಲ್ಲಿ ಯಶಸ್ವಿಯಾದರು. ಲುಲು ಗುಂಪು, ಡುಕಾಬ್ ಮತ್ತು ಎಲೆಕ್ಟ್ರಿಕ್ ವೇ ಇತರವುಗಳು ರಾಜ್ಯದಲ್ಲಿ ಹೂಡಿಕೆ ಮಾಡುವುದಾಗಿ ಭರವಸೆ ನೀಡಿದವು.
ನಿರಾಣಿ ಅವರು, B2G (ಬಿಸಿನೆಸ್-ಟು-ಗವರ್ನಮೆಂಟ್) ಸಭೆಯನ್ನು ಗ್ರೂಪ್ ಕಾರ್ಪೊರೇಟ್ ಫೈನಾನ್ಸ್ ಮತ್ತು ಡಿಪಿ ವರ್ಲ್ಡ್ ನ ವ್ಯಾಪಾರ ಅಭಿವೃದ್ಧಿ ಉಪಾಧ್ಯಕ್ಷಗೌರವ್ ಖನ್ನಾ ಮಾತುಕತೆ ನಡೆಸಿದರು. ಕೇಬಲ್‌ಗಳು, ಕೈಗಾರಿಕಾ ದೀಪಗಳು ಮತ್ತು ವಿದ್ಯುತ್ ವ್ಯವಸ್ಥೆಗಳ ವಿತರಣೆಯಲ್ಲಿ ಮುಂಚೂಣಿಯಲ್ಲಿರುವ ಎಲೆಕ್ಟ್ರಿಕ್ ವೇ ಕಂಪನಿಯ ಸಿಇಒ ಅತೀಕ್ ಅನ್ಸಾರಿ, ತಾಮ್ರದ ವಿನ್ಯಾಸ ಮತ್ತು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಅಲ್ಯೂಮಿನಿಯಂ ತಂತಿ ಮತ್ತು ಕೇಬಲ್ ಉತ್ಪನ್ನಗಳ ಜನರಲ್ ಮ್ಯಾನೇಜರ್ ಮೊಹಮ್ಮದ್ ಎ. ಅಲ್ ಕುರಾಶಿ, ಆಸ್ಟರ್ ಹೆಲ್ತ್ ಕೇರ್ ಡಿಎಂ ಶ್ರೀನಾಥ್ ಪಿ ರೆಡ್ಡಿ ಸೇರಿದಂತೆ ಅನೇಕ ‌ಉದ್ಯಮಿಗಳನ್ನು‌ ಭೇಟಿಯಾಗಿ ರಾಜ್ಯದಲ್ಲಿ ಬಂಡವಾಳ ‌ಹೂಡಿಕೆಗೆ ಇರುವ‌
ಅವಕಾಶಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಪ್ರಮುಖ ಸುದ್ದಿ :-   ಬಿಜೆಪಿ ಅಭ್ಯರ್ಥಿಗಳ 7ನೇ ಪಟ್ಟಿ ಪ್ರಕಟ : ಚಿತ್ರದುರ್ಗದಲ್ಲಿ ಹಾಲಿ ಸಂಸದರಿಗೆ ಕೊಕ್, ಯಡಿಯೂರಪ್ಪ ಆಪ್ತನಿಗೆ ಟಿಕೆಟ್‌

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement