ಕರ್ನಾಟಕದಲ್ಲಿ 1 ಲಕ್ಷ ಎಲೆಕ್ಟ್ರಿಕ್ ವಾಹನಗಳ ನೋಂದಣಿ: ಸಚಿವ ಮುರುಗೇಶ್ ನಿರಾಣಿ

posted in: ರಾಜ್ಯ | 0

ಬೆಂಗಳೂರು: ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, 1 ಲಕ್ಷ ವಾಹನಗಳ ನೋಂದಣಿಯಾಗಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ಈ ಕುರಿತು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದು, ಕರ್ನಾಟಕವು ಇವಿ ವಾಹನಗಳ ಮಾರಾಟದಲ್ಲಿ ಮುಂಚೂಣಿಯಲ್ಲಿದೆ ಎಂದು ಸಚಿವ ನಿರಾಣಿ ಹೇಳಿದ್ದಾರೆ. ಬಳಕೆ ಖರ್ಚು ಕಡಿಮೆ ಮಾಡುವ ಜೊತೆಗೆ … Continued

ಕೈಗಾರಿಕೆ ಪ್ರಾರಂಭ ಮಾಡದ 500ಕ್ಕೂ ಹೆಚ್ಚು ಕೈಗಾರಿಕೆಗಳ ಜಮೀನು ವಾಪಸ್ ಪಡೆಯುವೆವು: ಸಚಿವ ನಿರಾಣಿ

posted in: ರಾಜ್ಯ | 0

ಬೆಳಗಾವಿ: ಅನೇಕ ವರ್ಷಗಳು ಕಳೆದರೂ ಕೈಗಾರಿಕೆ ಪ್ರಾರಂಭ ಮಾಡದ 500ಕ್ಕೂ ಹೆಚ್ಚು ಕೈಗಾರಿಕೆಗಳ ಜಮೀನನ್ನು ವಾಪಸ್ ಪಡೆಯಲಾಗುತ್ತದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್. ನಿರಾಣಿ ಶುಕ್ರವಾರ ವಿಧಾನಸಭೆಗೆ ತಿಳಿಸಿದರು. ಕಾಂಗ್ರೆಸ್ ಶಾಸಕ ಎನ್. ಎಚ್. ಶಿವಶಂಕರ ರೆಡ್ಡಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಭೂಮಿ ಹಂಚಿಕೆಯಾಗಿ 5 ರಿಂದ 20 ವರ್ಷ … Continued

ವಿದೇಶಿ ಹೂಡಿಕೆ ಆಕರ್ಷಣೆಗೆ ನೆರವಾದ ದುಬೈ ಭೇಟಿ : ಸಚಿವ ನಿರಾಣಿ

posted in: ರಾಜ್ಯ | 0

ಬೆಂಗಳೂರು: ‘ದುಬೈ ಎಕ್ಸ್ ಪೋ 2020’ ಭೇಟಿ ಯಶಸ್ವಿಯಾಗಿದ್ದು, ರಾಜ್ಯದಲ್ಲಿ ಬಂಡವಾಳ ಹೂಡಲು ಅನೇಕ ಪ್ರತಿಷ್ಠಿತ ಉದ್ಯಮಿಗಳು ಮುಂದೆ ಬಂದಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು. ನಾಲ್ಕು ದಿನಗಳ ದುಬೈ ಪ್ರವಾಸದ ಬಗ್ಗೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ದಿನಗಳಲ್ಲಿ ಕಾಲ ನಡೆದ ದುಬೈ ಎಕ್ಸ್ ಪೋದಲ್ಲಿ … Continued

ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಗಲ್ಫ್ ಇಸ್ಲಾಮಿಕ್ ಹೂಡಿಕೆಯ ಕಚೇರಿ: 3 ವರ್ಷಗಳಲ್ಲಿ 3500 ಕೋಟಿ ರೂ. ‌ಬಂಡವಾಳ ಹೂಡಿಕೆ

posted in: ರಾಜ್ಯ | 0

ದುಬೈ: ಭಾರತ ಹಾಗೂ ‌ ಯುನೈಟೆಡ್ ‌ಅರಬ್ ಯಮಿರೆಟ್ಸ್ ( ಯುಎಇ) ನಡುವೆ ಹೂಡಿಕೆ ಸಂಬಂಧಗಳನ್ನು ಭವಿಷ್ಯದಲ್ಲಿ ಮತ್ತಷ್ಟು ಬಲಪಡಿಸಲು ಗಲ್ಫ್ ಇಸ್ಲಾಮಿಕ್ ಹೂಡಿಕೆ ( GII) ತನ್ನ ಕಚೇರಿಯನ್ನು ರಾಜಧಾನಿ ‌ಬೆಂಗಳೂರಿನಲ್ಲಿ ತೆರೆಯಲು ಮುಂದೆ ‌ಬಂದಿದೆ. ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ,ಹಾಗೂ ಐಟಿ ಮತ್ತು ಬಿಟಿ ಸಚಿವ … Continued

ಏನಂತ ತಿಳಿದುಕೊಂಡಿದ್ದಾನೆ ಅವನು ಎಂದು ಏಕವಚನದಲ್ಲಿ ಯತ್ನಾಳ ಜರೆದ ಸಚಿವ ನಿರಾಣಿ

ಬೆಳಗಾವಿ: ಬಸನಗೌಡ ಪಾಟೀಲ ಯತ್ನಾಳ ಹಿರಿಯರು. ಅಂಥವರು ನಮ್ಮ ಪಕ್ಷದಲ್ಲಿದ್ದುಕೊಂಡು ನಮ್ಮ ಪಕ್ಷದವರನ್ನೇ ಟೀಕೆ ಮಾಡುವುದು ಎಷ್ಟರಮಟ್ಟಿಗೆ ಸರಿ ಎಂದು ಸಚಿವ ಮುರುಗೇಶ ನಿರಾಣಿ ಪ್ರಶ್ನಿಸಿದರು. ಬೆಳಗವಾವಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ವಿರುದ್ಧ ಯತ್ನಾಳ ವಾಗ್ದಾಳಿ ನಡೆಸಿರುವುದಕ್ಕೆ ಕಿಡಿಕಾರಿದರು. ಯತ್ನಳ ಅವರಿಗೆ ಟೀಕೆ ಮಾಡಲೇಬೇಕು ಎಂದರೆ ಅವರು ರಾಜೀನಾಮೆ ಕೊಟ್ಟು ಹೊರಗಡೆ … Continued