ಏನಂತ ತಿಳಿದುಕೊಂಡಿದ್ದಾನೆ ಅವನು ಎಂದು ಏಕವಚನದಲ್ಲಿ ಯತ್ನಾಳ ಜರೆದ ಸಚಿವ ನಿರಾಣಿ

ಬೆಳಗಾವಿ: ಬಸನಗೌಡ ಪಾಟೀಲ ಯತ್ನಾಳ ಹಿರಿಯರು. ಅಂಥವರು ನಮ್ಮ ಪಕ್ಷದಲ್ಲಿದ್ದುಕೊಂಡು ನಮ್ಮ ಪಕ್ಷದವರನ್ನೇ ಟೀಕೆ ಮಾಡುವುದು ಎಷ್ಟರಮಟ್ಟಿಗೆ ಸರಿ ಎಂದು ಸಚಿವ ಮುರುಗೇಶ ನಿರಾಣಿ ಪ್ರಶ್ನಿಸಿದರು.
ಬೆಳಗವಾವಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ವಿರುದ್ಧ ಯತ್ನಾಳ ವಾಗ್ದಾಳಿ ನಡೆಸಿರುವುದಕ್ಕೆ ಕಿಡಿಕಾರಿದರು.
ಯತ್ನಳ ಅವರಿಗೆ ಟೀಕೆ ಮಾಡಲೇಬೇಕು ಎಂದರೆ ಅವರು ರಾಜೀನಾಮೆ ಕೊಟ್ಟು ಹೊರಗಡೆ ಹೋಗಿ ಆಮೇಲೆ ನಮ್ಮ ಪಕ್ಷದವರ ಬಗ್ಗೆ ಮಾತನಾಡಲಿ. ಪಕ್ಷದ ಚಿನ್ಹೆ ಹಾಗೂ ಪಕ್ಷದ ನಾಯಕರ ಪೋಟೋ ಮುಂದಿಟ್ಟುಕೊಂಡು ಆಯ್ಕೆಯಾಗಿ ಬಂದಿದ್ದಾರೆ. ಆಯ್ಕೆಯಾಗಿ ಬಂದ ಮೇಲೆ ಈಗ ಪಕ್ಷಕ್ಕೆ ಅನ್ಯಾಯ ಮಾಡುವುದೆಂದರೆ ಅದು ಉಂಡ ಮನೆಗೆ ದ್ರೋಹ ಮಾಡಿದಂತೆ.ಹೀಗಾಗಿ ಅವರು ಬಾಯಿ ಮುಚ್ಚಿಕೊಂಡು ಸುಮ್ಮನಿರುವುದು ಒಳಿತು ಎಂದು ಎಚ್ಚರಿಸಿದರು.
ಮಾನವೀಯತೆ ಇದ್ದರೆ ಅವನು ರಾಜೀನಾಮೆ ಕೊಡಬೇಕು.ಏನಂತ ತಿಳಿದುಕೊಂಡಿದ್ದಾನೆ ಅವನು ಎಂದು ಏಕವಚನದಲ್ಲಿ ಯತ್ನಾಳ ವಿರುದ್ಧ ವಾಗ್ದಾಳಿ ನಡೆಸಿದ ನಿರಾಣಿ, ನಮ್ಮ ಮನೆಯಲ್ಲಿದ್ದು ನಮ್ಮ ಬಗ್ಗೆ ವಿರೋಧ ಮಾಡುತ್ತಾನೆ. ನಮ್ಮ ಪಕ್ಷದ ಯಾರನ್ನೇ ಟೀಕೆ ಮಾಡಿದರೂ ಅದನ್ನು ನಮ್ಮ ಪಕ್ಷದಲ್ಲಿದ್ದು ಮಾಡಬಾರದು ಎಂದು ವಾಗ್ದಾಳಿ ನಡೆಸಿದರು.
ಎಲ್ಲವನ್ನೂ ಪಕ್ಷದ ಹೈಕಮಾಂಡ್‌ ಸೂಕ್ಷ್ಮವಾಗಿ ನೋಡುತ್ತಿದ್ದು, ಇದು ಮುಂದುವರಿದರೆ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ ಅವರು, ತಾನನು ತೆಗೆದುಕೊಳ್ಳುತ್ತೆ.ಹೈಕಮಾಂಡ್ ಇದನ್ನ ಬಹಳ ಸೂಕ್ಷ್ಮವಾಗಿ ನೋಡುತ್ತಿದೆ ಎಂದುಬೆಳಗಾವಿಯಲ್ಲಿ ಸಚಿವ ಮುರಗೇಶ್ ನಿರಾಣಿ ಹೇಳಿದರು.

ಪ್ರಮುಖ ಸುದ್ದಿ :-   'ಇದು ಸಾಮಾನ್ಯ ಚುನಾವಣೆಯಲ್ಲ' : ಲೋಕಸಭೆ ಚುನಾವಣೆ ಮೊದಲ ಹಂತದ ಮತದಾನಕ್ಕೂ ಮುನ್ನ ಬಿಜೆಪಿ-ಎನ್‌ಡಿಎ ಅಭ್ಯರ್ಥಿಗಳಿಗೆ ಪತ್ರ ಬರೆದ ಪ್ರಧಾನಿ ಮೋದಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement