ಹೊಸ ಪಕ್ಷ ಸ್ಥಾಪನೆ ಮಾಡವುದನ್ನು ಪ್ರಕಟಿಸಿದ ಕ್ಯಾಪ್ಟನ್ಅಮರಿಂದರ್ ಸಿಂಗ್: ಬಿಜೆಪಿ ಜೊತೆ ಸ್ಥಾನ ಹಂಚಿಕೆಗೆ ಸಿದ್ಧ, ಆದರೆ ಷರತ್ತು ಅನ್ವಯ

ಚಂಡಿಗಡ: ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಪಂಜಾಬ್​ ರಾಜಕಾರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ.
ಆಂತರಿಕ ಭಿನ್ನಮತದಿಂದ ಬೇಯುತ್ತಿರುವ ಕಾಂಗ್ರೆಸ್​ನ ಪ್ರಮುಖ ನಾಯಕ, ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಈಗ ಪಕ್ಷದಿಂದ ಹೊರಹೋಗುವ ಸ್ಪಷ್ಟ ಸೂಚನೆ ನೀಡಿದ್ದು, ಹೊಸ ಪಕ್ಷ ಸ್ಥಾಪನೆ ಮಾಡುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅಮರಿಂದರ್ ಸಿಂಗ್ ಅವರ ಮಾಧ್ಯಮ ಕಾರ್ಯದರ್ಶಿ ರವೀನ್ ಥುಕ್ರಾಲ್ ಅಮರಿಂದರ್ ಸಿಂಗ್​ ಅವರ ಮುಂದಿನ ನಡೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಪಂಜಾಬಿ​ನ ಉತ್ತಮ ಭವಿಷ್ಯಕ್ಕಾಗಿ ನಮ್ಮ ಹೋರಾಟ ಇನ್ನೂ ಮುಗಿದಿಲ್ಲ. ನನ್ನ ಹೊಸ ರಾಜಕೀಯ ಪಕ್ಷವನ್ನು ಶೀಘ್ರ ಘೋಷಿಸುತ್ತೇನೆ. ಪಂಜಾಬ್ ರಾಜ್ಯ ಮತ್ತು ಅದರ ಜನರ ಹಿತಾಸಕ್ತಿಗಳನ್ನು ಕಾಪಾಡುತ್ತೇನೆ. ಕಳೆದ ಒಂದು ವರ್ಷಗಳಿಂದ ಹೋರಾಡುತ್ತಿರುವ ರೈತರ ಪರವಾಗಿ ನಿಲ್ಲುತ್ತೇನೆ ಎಂದು ಅಮರಿಂದರ್ ಸಿಂಗ್ ಘೋಷಿಸಿದ್ದಾರೆ.
2022ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಸ್ಥಾನ ಹೊಂದಾಣಿಕೆ ಬಗ್ಗೆ ನಿರೀಕ್ಷೆ ಇರಿಸಿಕೊಂಡಿದ್ದೇನೆ. ಆದರೆ ಅವರು ರೈತರ ಹಿತಾಸಕ್ತಿಗೆ ಪೂರಕವಾಗಿ ರೈತ ಚಳವಳಿಯ ಆಶಯಗಳು ಈಡೇರಿದರೆ ಮಾತ್ರ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತದೆ. ಧಿಂಡ್ಸಾ ಮತ್ತು ಬ್ರಹ್ಮಪುರ ಸೇರಿದಂತೆ ಸಮಾನ ಮನಸ್ಕ ಅಕಾಲಿ ಗುಂಪುಗಳೊಂದಿಗೆ ಹೊಂದಾಣಿಕೆಯ ಆಲೋಚನೆಯಿದೆ ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ನನ್ನ ಜನರು ಮತ್ತು ರಾಜ್ಯದ ಭವಿಷ್ಯವನ್ನು ಸುಭದ್ರಗೊಳಿಸದೆ ನಾನು ವಿಶ್ರಾಂತಿ ಪಡೆಯುವುದಿಲ್ಲ. ಪಂಜಾಬಿಗೆ ರಾಜಕೀಯ ಸ್ಥಿರತೆ ಬೇಕು. ಆಂತರಿಕ ಮತ್ತು ಬಾಹ್ಯ ಆತಂಕಗಳಿಂದ ರಕ್ಷಣೆ ಬೇಕು. ನಮ್ಮ ರಾಜ್ಯದ ಶಾಂತಿ ಮತ್ತು ಸುವ್ಯವಸ್ಥೆ ಖಾತ್ರಿಗೊಳಿಸಲು ಯಾವುದೆಲ್ಲ ಮಾಡಬೇಕೋ ಅದೆಲ್ಲವನ್ನೂ ನಾನು ಮಾಡುತ್ತೇನೆ ಎಂದು ಜನರಿಗೆ ಭರವಸೆ ನೀಡುತ್ತೇನೆ ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ

ಪ್ರಮುಖ ಸುದ್ದಿ :-   ವೀಡಿಯೊ..| ಗ್ರಾಮದ ಪದ್ಧತಿ ಉಲ್ಲಂಘಿಸಿ ಮದುವೆ ; ದಂಪತಿಯನ್ನು ನೊಗಕ್ಕೆ ಕಟ್ಟಿ, ಕೋಲಿನಿಂದ ಹೊಡೆದು ಹೊಲ ಉಳುಮೆ ಮಾಡಿಸಿದ ಗುಂಪು

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement