ಕರ್ನಾಟಕದಲ್ಲಿ ಬುಧವಾರ ಕೊರೋನಾ ಸೋಂಕು ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಬುಧವಾರ ಕೊರೊನಾ ಸೋಂಕು ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು (ಬುಧವಾರ) ಹೊಸದಾಗಿ 462 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು 9 ಮಂದಿ ಮೃತಪಟ್ಟಿದ್ದಾರೆ.ಜೊತೆಗೆ 479 ಮಂದಿ ಚೇತರಿಸಿಕೊಂಡು ಗುಣಮುಖರಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ‌.
ರಾಜ್ಯದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸೇರಿದಂತೆ ಇಲ್ಲಿಯ ತನಕ ಒಟ್ಟು ಸೋಂಕಿತರ ಸಂಖ್ಯೆ 29,84,484 ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 9.074 ಕ್ಕೆ ಕುಸಿದಿದೆ. ಒಟ್ಟು ಬಿಡುಗಡೆಯಾದವರ ಸಂಖ್ಯೆ 29,37,405 ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 37,976 ಕ್ಕೆ ಏರಿಕೆ.
ರಾಜಧಾನಿ ಬೆಂಗಳೂರಿನಲ್ಲಿ ಇಂದು 253 ಮಂದಿಗೆ ಕಾಣಿಸಿಕೊಂಡಿದ್ದು, 263 ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ. 6 ಮಂದಿ ಮೃತಪಟ್ಟಿದ್ದಾರೆ.
ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಪ್ರತಿಶತ ಪ್ರನಾಣ ಶೇ.1.94 ಕ್ಕೆ ಇಳಿಕೆಯಾಗಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ ಪ್ರತಿಶತ 0.39 ರಷ್ಟು ಇದೆ.

ಜಿಲ್ಲಾವಾರು ಸೋಂಕಿನ ವಿವರ..:
ಬಾಗಲಕೋಟೆ- 0, ಬಳ್ಳಾರಿ – 2, ಬೆಳಗಾವಿ –2, ಬೆಂಗಳೂರು ಗ್ರಾಮಾಂತರ- 6. ಬೆಂಗಳೂರು ನಗರ. – 253, ಬೀದರ್ 1, ಚಾಮರಾಜನಗರ- 5, ಚಿಕ್ಕಬಳ್ಳಾಪುರ- 4, ಚಿಕ್ಕಮಗಳೂರು- 1, ಚಿತ್ರದುರ್ಗ- 4, ದಕ್ಷಿಣ ಕನ್ನಡ – 29, ದಾವಣಗೆರೆ- 1, ಧಾರವಾಡ- 2, ಗದಗ- 0, ಹಾಸನ- 19, ಹಾವೇರಿ- 0, ಕಲಬುರಗಿ- 2, ಕೊಡಗು- 12, ಕೋಲಾರ- 4, ಕೊಪ್ಪಳ- 1, ಮಂಡ್ಯ- 10, ಮೈಸೂರು- 43, ರಾಯಚೂರು- 0, ರಾಮನಗರ – 1, ಶಿವಮೊಗ್ಗ- 9, ತುಮಕೂರು- 32, ಉಡುಪಿ- 15, ಉತ್ತರ ಕನ್ನಡ- 1, ವಿಜಯಪುರ – 1, ಯಾದಗಿರಿ- 1

ಪ್ರಮುಖ ಸುದ್ದಿ :-   ವೀಡಿಯೊ...| ಎಲ್ಲರೆದುರು ಸರ್ಪಕ್ಕೆ ಮುತ್ತಿಕ್ಕಿದ ಭೂಪ...ಆದ್ರೆ ನಂತರ ಆದದ್ದೇ ಬೇರೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement