ನೀವೇನು ಕೆಲಸ ಮಾಡಿದ್ದೀರಿ ಎಂದು ಪ್ರಶ್ನಿಸಿದ ವ್ಯಕ್ತಿಯ ಕಪಾಳಕ್ಕೆ ಹೊಡೆದು, ನಂತರ ಥಳಿಸಿದ ಶಾಸಕ..! ವಿಡಿಯೊದಲ್ಲಿ ಸೆರೆ

ಚಂಡೀಗಡ: ಕಾಂಗ್ರೆಸ್ ಶಾಸಕ ಜೋಗಿಂದರ್ ಪಾಲ್ ಮತದಾರರೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಕ್ಷೇತ್ರದಲ್ಲಿ ನೀವೇನು ಕೆಲಸ ಮಾಡಿದ್ದೀರಿ ಎಂದು ಕೇಳಿದ ವ್ಯಕ್ತಿಯ ಕಪಾಳಕ್ಕೆ ಹೊಡೆದು ಹಲ್ಲೆ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.
ಪಠಾಣ್‌ಕೋಟ್ ಜಿಲ್ಲೆಯ ಭೋವಾದಲ್ಲಿನ ಡೇರೆಯೊಳಗೆ ಬಿಳಿ ಕುರ್ತಾ ಧರಿಸಿದ್ದ ಜೋಗಿಂದರ್ ಪಾಲ್ ಜನರನ್ನು ಉದ್ದೇಶಿಸಿ ಮಾತನಾಡುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಅವರು ಆ ಹಳ್ಳಿಯಲ್ಲಿ ತಾವು ಮಾಡಿದ ಕಾರ್ಯಗಳ ಬಗ್ಗೆ ಹೇಳುತ್ತಿರುವಂತೆ ಕಾಣುತ್ತದೆ. ಅವನು ಮಾತನಾಡುತ್ತಿದ್ದಂತೆ ಜನಸಂದಣಿಯಲ್ಲಿದ್ದ ಕಡು ಕಂದು ಬಣ್ಣದ ಶರ್ಟ್ ಧರಿಸಿರುವ ಯುವಕನೊಬ್ಬನಿಗೆ ಗೊಣಗುತ್ತಿರುವುದು ಕೇಳಿಸುತ್ತದೆ. ಆಗ ಜೋಗಿಂದರ್‌ ಪಾಲ್ ಮೊದಲು ಅತ್ತ ಕಣ್ಣು ಹಾಯಿಸುತ್ತಾರೆ, ಆ ಗೊಣಗಾಟವನ್ನು ಕಡೆಗಣಿಸಿ ಮಾತು ಮುಂದುವರಿಸುತ್ತಾರೆ. ವ್ಯಕ್ತಿಯ ಪಕ್ಕದಲ್ಲಿ ನಿಂತಿದ್ದ ಪೊಲೀಸ್ ಅಧಿಕಾರಿಯೊಬ್ಬರು ಆತನ ಕೈ ಹಿಡಿದು ಆತನನ್ನು ಸದ್ದಿಲ್ಲದೆ ಕರೆದೊಯ್ಯಲು ಪ್ರಯತ್ನಿಸುತ್ತಿರುವುದು ಕೂಡಾ ವಿಡಿಯೊದಲ್ಲಿ ಕಾಣಬಹುದು.

ಆದರೂ ಆ ವ್ಯಕ್ತಿ ಶಾಸಕ ಜೋಗಿಂದರ್‌ ಪಾಲ್ ಅವರನ್ನು ಪ್ರಶ್ನಿಸುತ್ತಾನೆ. ಪ್ರಶ್ನೆಯನ್ನು ಕೂಗಿದ ನಂತರ ಶಾಸಕರ ಪ್ರತಿಕ್ರಿಯೆಗೆ ಒತ್ತಾಯಿಸಿದ ವ್ಯಕ್ತಿ “ನೀವು ನಿಜವಾಗಿಯೂ ಏನು ಮಾಡಿದ್ದೀರಿ” ಎಂದು ಶಾಸಕರಲ್ಲಿ ಕೇಳಿದ್ದಾನೆ.
ಮೊದಲಿಗೆ ಶಾಂತವಾಗಿ ಪಾಲ್ ಆ ವ್ಯಕ್ತಿಯನ್ನು ಮುಂದೆ ಕರೆದು ಮೈಕ್ರೊಫೋನ್ ಕೊಡುತ್ತಾರೆ. ಆದರೆ ನಂತರ ಶಾಸಕರು ಆ ವ್ಯಕ್ತಿಯ ಕೆನ್ನೆಗೆ ಹೊಡೆದು ಬೇಕಾಬಿಟ್ಟಿ ಥಳಿಸುತ್ತಾರೆ. ಅಷ್ಟೇ ಅಲ್ಲದೆ ಅಲ್ಲಿ ಆ ವ್ಯಕ್ತಿಯನ್ನು ದೂರ ಹೋಗುವಂತೆ ಹೇಳುತ್ತಿದ್ದ ಪೊಲೀಸ್ ಕೂಡಾ ವ್ಯಕ್ತಿಯ ಮೇಲೆ ಹಲ್ಲೆ ಮಾಡುತ್ತಿರುವುದು ಕಾಣುತ್ತದೆ. ಅಲ್ಲಿಂದ ಐದಾರು ಜನಗಳು ವ್ಯಕ್ತಿಯ ಮೇಲೆ ಮುಗಿಬಿದ್ದು ಹೊಡೆಸರು. ಆಗ ಮತ್ತೊಬ್ಬ ಪೊಲೀಸ್ ಬಂದು ಆತನನ್ನು ಕಾಪಾಡಿದ್ದಾನೆ.
ಶಾಸಕರ ವರ್ತೆನೆಗೆ ಕ್ಷದಲ್ಲೇ ಅಸಮಾಧಾನ ವ್ಯಕ್ತವಾಗಿದೆ. ಶಾಸಕರ ವರ್ತನೆ ಸರಿಯಲ್ಲ. ನಾವು ಜನಪ್ರತಿನಿಧಿಗಳು ಮತ್ತು ಅವರ ಸೇವೆಗಾಗಿ ಇಲ್ಲಿಗೆ ಬಂದಿದ್ದೇವೆ.” ಎಂದು ರಾಜ್ಯ ಗೃಹ ಸಚಿವ ಸುಖಜಿಂದರ್ ಸಿಂಗ್ ರಾಂಧವ ಹೇಳಿದ್ದಾರೆ.
ಪಂಜಾಬ್ ನಲ್ಲಿ ಚುನಾವಣೆ ಸನ್ನಿಹಿತವಾದ ಸಂದರ್ಭದಲ್ಲಿ ಈ ಘಟನೆ ಕಾಂಗ್ರೆಸ್ಸಿಗೆ ಮುಜುಗರಕ್ಕೆ ಕಾರಣವಾಗಿದೆ.

ಪ್ರಮುಖ ಸುದ್ದಿ :-   ನಾಳೆ ಫಿಲಿಪ್ಪೀನ್ಸ್‌ಗೆ ʼಬ್ರಹ್ಮೋಸ್ ಕ್ಷಿಪಣಿʼಗಳ ಮೊದಲ ಸೆಟ್ ನೀಡಲಿದೆ ಭಾರತ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement