ಫೇಸ್​ಬುಕ್ ಹೆಸರಿನಲ್ಲಿ ಬದಲಾವಣೆ..ಹೊಸ ಹೆಸರಿನೊಂದಿಗೆ ಮರುಬ್ರ್ಯಾಂಡ್ ಆಗಲಿದೆಯಂತೆ

ನವದೆಹಲಿ : ಸಾಮಾಜಿಕ ಜಾಲತಾಣದ ದೈತ್ಯ ಫೇಸ್‌ಬುಕ್‌ ಈಗ ತನ್ನ ಹೆಸರು ಬದಲಾಯಿಸಲು ಮುಂದಾಗಿದೆ. ಫೇಸ್‌ಬುಕ್ ಇಂಕ್ ಮುಂದಿನ ವಾರ ಕಂಪನಿಯನ್ನ ಹೊಸ ಹೆಸರಿನೊಂದಿಗೆ ಬ್ರಾಂಡ್ ಮಾಡಲು ಯೋಜಿಸುತ್ತಿದೆ ಎಂದು ದಿ ವರ್ಜ್ ವರದಿ ಮಾಡಿದೆ.
ಫೇಸ್‌ಬುಕ್​ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಝುಕರ್‌ಬರ್ಗ್ ಅಕ್ಟೋಬರ್ 28ರಂದು ಕಂಪನಿಯ ವಾರ್ಷಿಕ ಕನೆಕ್ಟ್ ಕಾನ್ಫರೆನ್ಸ್‌ನಲ್ಲಿ ಹೆಸರು ಬದಲಾವಣೆಯ ಬಗ್ಗೆ ಮಾತನಾಡಲು ಯೋಜಿಸಿದ್ದಾರೆ, ಆದರೆ ಅದನ್ನು ಶೀಘ್ರದಲ್ಲೇ ಅನಾವರಣಗೊಳಿಸಬಹುದು ಎಂದು ವರ್ಜ್ ವರದಿ ಹೇಳಿದೆ.
ಹೆಸರು ಬದಲಾದರೂ ಕೂಡ ಫೇಸ್‌ಬುಕ್ ಆಪ್ ಮತ್ತು ಸೇವೆಯು ತಮ್ಮ ಬ್ರ್ಯಾಂಡಿಂಗ್‌ನಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ.
ಮರುಬ್ರ್ಯಾಂಡ್ ಫೇಸ್‌ಬುಕ್‌ನ ಸಾಮಾಜಿಕ ಮಾಧ್ಯಮ ಅಪ್ಲಿಕೇಷನ್ ಅನ್ನು ಪೋಷಕ ಕಂಪೆನಿಯ ಅಡಿಯಲ್ಲಿರುವ ಅನೇಕ ಉತ್ಪನ್ನಗಳಲ್ಲಿ ಒಂದಾಗಿ ಇರಿಸುತ್ತದೆ. ಇದು Instagram, WhatsApp, Oculus ಮತ್ತು ಹೆಚ್ಚಿನವುಗಳಂತಹ ಗುಂಪುಗಳನ್ನು ಸಹ ಮೇಲ್ವಿಚಾರಣೆ ಮಾಡುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.
2004 ರಲ್ಲಿ ಸಾಮಾಜಿಕ ಜಾಲತಾಣವನ್ನು ಸ್ಥಾಪಿಸಿದ ಮಾರ್ಕ್‌ ಜೂಕರ್‌ಬರ್ಗ್, ಫೇಸ್‌ಬುಕ್‌ ವಿಶ್ವದಾದ್ಯಂತ ತನ್ನ ಗ್ರಾಹಕರನ್ನು ಹೊಂದಿದೆ. ಮಾತ್ರವಲ್ಲ ಪ್ರಮುಖ ಸಾಮಾಜಿಕ ಜಾಲತಾಣವಾಗಿ ಹೊರಹೊಮ್ಮಿದೆ. ಆದರೆ ಫೇಸ್‌ಬುಕ್‌ ಸಾಮಾಜಿಕ ಜಾಲತಾಣ ಎಂಬ ತನ್ನ ಹೆಸರನ್ನು ಬದಲಾಯಿಸಿಕೊಳ್ಳುವ ಸಲುವಾಗಿ ಇದೀಗ ಹೊಸ ಕ್ರಮಕ್ಕೆ ಮುಂದಾಗಿದೆ ಎನ್ನಲಾಗುತ್ತಿದೆ. ಆದರೆ ಫೇಸ್‌ಬುಕ್‌ ಯಾವ ಹೆಸರಿನಿಂದ ಮರು ಬ್ರ್ಯಾಂಡ್‌ ಆಗಲಿದೆ ಎಂಬುದು ಗೊತ್ತಾಗಿಲ್ಲ.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement