ಶೆರ್ಲಿನ್ ಚೋಪ್ರಾ ಮೇಲೆ 50 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ಹೂಡಿದ ಶಿಲ್ಪಾ ಶೆಟ್ಟಿ-ರಾಜ ಕುಂದ್ರಾ ದಂಪತಿ

ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ದಂಪತಿ ನಟಿ ಶೆರ್ಲಿನ್ ಚೋಪ್ರಾ ಮೇಲೆ 50 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಲೈಂಗಿಕ ದೌರ್ಜನ್ಯ, ಮೋಸ, ಕ್ರಿಮಿನಲ್ ಬೆದರಿಕೆ ಆರೋಪ ಹೊರಿಸಿ ರಾಜ್ ಕುಂದ್ರಾ ವಿರುದ್ಧ ಅಕ್ಟೋಬರ್ 14ರಂದು ಶೆರ್ಲಿನ್ ಚೋಪ್ರಾ ದೂರು ನೀಡಿದ್ದರು. ಶೆರ್ಲಿನ್ ಚೋಪ್ರಾ , ಲೈಂಗಿಕ ದೌರ್ಜನ್ಯ, ಮೋಸ ಮಾಡಿದ್ದಾರೆ ಎಂದು ರಾಜ್ ಕುಂದ್ರಾ ವಿರುದ್ಧ ದೂರು ನೀಡಿದ್ದೇನೆ ಎಂದು ಜುಹು ಪೊಲೀಸ್ ಠಾಣೆಯ ಹೊರಗೆ ಮಾಧ್ಯಮದವರಿಗೆ ತಿಳಿಸಿದ್ದರು. 2019ರ ಮಾರ್ಚ್ 17ರಂದು ರಾಜ್ ಕುಂದ್ರಾ ಅವರು ನನ್ನ ಮನೆಗೆ ಬಂದು ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ಶೆರ್ಲಿನ್ ಆರೋಪಿಸಿದ್ದಾರೆ.
ಪ್ರಾಜೆಕ್ಟ್‌ವೊಂದರ ಸಲುವಾಗಿ ಮಾರ್ಚ್ 27, 2019 ರಂದು ಬಿಸಿನೆಸ್ ಮೀಟಿಂಗ್ ನಡೆದ ನಂತರದಲ್ಲಿ ಮೆಸೇಜ್‍ಗಳ ವಿನಿಮಯ ವೇಳೆ ನನ್ನ ಹಾಗೂ ರಾಜ್ ಕುಂದ್ರಾ ಮಧ್ಯೆ ವಾಗ್ವಾದ ನಡೆದಿತ್ತು. ಈ ವೇಳೆ ಹೇಳದೇ ಕೇಳದೆ ರಾಜ್ ಕುಂದ್ರಾ ನನ್ನ ಮನೆಗೆ ಬಂದಿದ್ದರು ಎಷ್ಟೇ ವಿರೋಧಿಸಿದರೂ ಕೂಡ, ರಾಜ್ ಕುಂದ್ರಾ ನನ್ನನ್ನು ಚುಂಬಿಸಿದರು ಎಂದು ಶೆರ್ಲಿನ್ ಚೋಪ್ರಾ ಹೇಳಿದ್ದರು.
ಲೀಗಲ್ ನೋಟಿಸ್:
ಈಗಾಗಲೇ ಶೆರ್ಲಿನ್ ಚೋಪ್ರಾ ಅವರಿಗೆ ಶಿಲ್ಪಾ ಶೆಟ್ಟಿ ದಂಪತಿ ಲೀಗಲ್ ನೋಟಿಸ್ ನೀಡಿದೆ. ಸುಳ್ಳು, ಹಣ ಗಳಿಸಲು ಹೆಸರು ಹಾಳು ಮಾಡುವ ಮಾರ್ಗ ಅನುಸರಿಸಲಾಗುತ್ತಿದೆ. ಆಧಾರ ರಹಿತ ದೂರು ನೀಡಲಾಗಿದೆ ಎಂದು ಶಿಲ್ಪಾ ಶೆಟ್ಟಿ ವಕೀಲರು ಹೇಳಿದ್ದಾರೆ. ಶಿಲ್ಪಾ ದಂಪತಿ ವಿರುದ್ಧ ಶೆರ್ಲಿನ್ ಚೋಪ್ರಾ ಅವರು ಮಾಧ್ಯಮ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೆ ನೀಡಿದ್ದರು. ಟಿಆರ್‍ಪಿಗಳಿಸಲು ಶೆರ್ಲಿನ್ ಈ ಮಾರ್ಗ ಅನುಸರಿಸಿದ್ದಾರೆ ಎಂದು ಲೀಗಲ್ ನೋಟೀಸ್‍ನಲ್ಲಿ ನಮೂದಿಸಲಾಗಿದೆ.
ಅಶ್ಲೀಲ ಸಿನಿಮಾಗಳ ನಿರ್ಮಾಣ ಮಾಡಿದ ಆರೋಪ ರಾಜ್ ಕುಂದ್ರಾ ಮೇಲಿದೆ. ಈ ಪ್ರಕರಣದಲ್ಲಿ ಶೆರ್ಲಿನ್ ಚೋಪ್ರಾ ಕೂಡ ಹೆಸರು ಕೇಳಿ ಬಂದಿತ್ತು. ಮುಂಬೈ ಪೊಲೀಸರು ರಾಜ್ ಕುಂದ್ರಾ ಅವರು ಈ ಪ್ರಕರಣದಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ ಎಂದು ಆರೋಪ ಮಾಡಿದ್ದರು ಹಾಗೂ ಬಂಧಿಸಿದ್ದರು.

ಪ್ರಮುಖ ಸುದ್ದಿ :-   ಕುಖ್ಯಾತ ಗ್ಯಾಂಗ್‌ಸ್ಟರ್‌-ರಾಜಕಾರಣಿ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ಸಾವು

 

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement