ಶ್ರೀ ಜೈನ ರಾಜಸ್ತಾನಿ ವಿದ್ಯಾ ಪ್ರಚಾರಕ ಮಂಡಳದ ನೂತನ ಪದಾಧಿಕಾರಿಗಳ ಪದಗ್ರಹಣ, ಸತತ 3ನೇ ಬಾರಿಗೆ ಅಧ್ಯಕ್ಷರಾಗಿ ಭವರಲಾಲ್ ಜೈನ್‌ ಆಯ್ಕೆ

ಹುಬ್ಬಳ್ಳಿ: ಸ್ಥಾನಿಕ ಶ್ರೀ ಜೈನ ರಾಜಸ್ತಾನಿ ವಿದ್ಯಾ ಪ್ರಚಾರಕ ಮಂಡಳದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ನಗರದ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.
ಭವರಲಾಲ್‌ ಸಿ.ಜೈನ್‌ ಅವರು ಸತತ ಮೂರನೇ ಬಾರಿಗೆ ಶ್ರೀ ಜೈನ ರಾಜಸ್ತಾನಿ ವಿದ್ಯಾ ಪ್ರಚಾರಕ ಮಂಡಳದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅವರು ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಮಹೇಂದ್ರ ಪಾಲಗೋತಾ ಉಪಾಧ್ಯಕ್ಷರಾಗಿ, ಭರತ ಭಂಡಾರಿ ಕಾರ್ಯದರ್ಶಿಯಾಗಿ, ಪುರಣಕುಮಾರ ನಹಾಟಾ ಖಜಾಂಚಿಯಾಗಿ, ಭರತ ಜೈನ್‌ ಸಹಕಾರ್ಯದರ್ಶಿಯಾಗಿ, ಮಹಾವೀರ ಜೆ.ಜೈನ್‌, ಅಶ್ವಿನಕುಮಾರ ಬಿ.ಜೈನ್‌, ಪರ್ವೇಶ ಎಸ್‌.ಕೊಠಾರಿ, ಪೃಥ್ವಿರಾಜ ಎನ್‌.ಸುರಾನಾ, ದಾನೇಶಕುಮಾರ ಎನ್‌.ಕಟಾರಿಯಾ ಇತರ ಪದಾಧಿಕಾರಿಗಳಾಗಿ ಅಧಿಕಾರ ಗ್ರಹಣ ಮಾಡಿದರು.
ವಿವೇಕ ಷಾಹ ಅವರು ಶಾಂತಿನಿಕೇತನ ಆಂಗ್ಲಮಾಧ್ಯಮ ಶಾಲೆ, ಶಾಂತಿನಿಕೇತನ ಪದವಿಪೂರ್ವ ಕಾಲೇಜ್‌ ಹಾಗೂ ಶಾಂತಿನಿಕೇತನ ಪದವಿ ಕಾಲೇಜಿಗೆ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ವಿಆರ್‌ಎಲ್‌ ಲಾಜಿಸ್ಟಿಕ್‌ ಸಮೂಹ ಸಂಸ್ಥೆಗಳ ಚೇರ್ಮನ್‌ ವಿಜಯ ಸಂಕೇಶ್ವರ ಅವರು ಸತತ ಮೂರನೇ ಬಾರಿಗೆ ಆಯ್ಕೆಯಾದ ಭವರಲಾಲ್‌ ಸಿ.ಜೈನ್‌ ಹಾಗೂ ಇತರ ಪದಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಅಭಿನಂದಿಸಿದರು.
ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆ ಪ್ರಾಚಾರ್ಯರಾದ ಡಾ.ಕ್ಯಾಥರೀನ್‌ ದಿನೇಶ, ಶಾಂತಿನಿಕೇತನ ಪದವಿ ಕಾಲೇಜ್‌ ಪ್ರಾಚಾರ್ಯರಾದ ವೆಂಕಣ್ಣ ಹೂಗಿ, ಶಾಂತಿನಿಕೇತನ ಹಿಂದಿ ಮಾಧ್ಯಮ ಪ್ರೌಢಶಾಲೆ ಪ್ರಾಚಾರ್ಯರಾದ ವಿಲಾಸ ಪುರಾಳೆ ಮೊದಲಾದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement