ಬೆಂಗಳೂರು: ಜಾಗತಿಕವಾಗಿ ಕಚ್ಚಾ ತೈಲ ದರ ಏರಿಕೆಯಾಗಿರುವ ಬೆನ್ನಲ್ಲೇ ದೇಶದಲ್ಲಿ ಬುಧವಾರ ಪೆಟ್ರೋಲ್, ಡೀಸೆಲ್ ದರ ಸಾರ್ವಕಾಲಿಕ ದಾಖಲೆಯ ಮಟ್ಟಕ್ಕೆ ಏರಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರವು ಪ್ರತಿ ಬ್ಯಾರೆಲ್ಗೆ 85.08 ಡಾಲರ್ ತಲುಪಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರ 35 ಪೈಸೆ ಹೆಚ್ಚಳವಾಗಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ₹ 106.19 ಮತ್ತು ಡೀಸೆಲ್ ₹ 94.92ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ ₹109.89 ಮುಟ್ಟಿದ್ದು, ಡೀಸೆಲ್ ₹100.75 ಆಗಿದೆ.
ವ್ಯಾಟ್ ಕಾರಣದಿಂದ ಮುಂಬೈನಲ್ಲಿ ಪೆಟ್ರೋಲ್ ₹112.11 ತಲುಪಿದರೆ, ಡೀಸೆಲ್ ₹102.89 ಆಗಿದೆ. ಚೆನ್ನೈನಲ್ಲಿ ಪೆಟ್ರೋಲ್ ₹103.31, ಡೀಸೆಲ್ ₹99.26; ಕೋಲ್ಕತ್ತಾದಲ್ಲಿ ಪೆಟ್ರೋಲ್ ₹106.78, ಡೀಸೆಲ್ ₹98.03ಕ್ಕೆ ಏರಿಕೆಯಾಗಿದೆ.
ವಿಮಾನಗಳಿಗೆ ಬಳಸುವ ಏವಿಯೇಷನ್ ಟರ್ಬೈನ್ ಇಂಧನಕ್ಕಿಂತಲೂ ಪೆಟ್ರೋಲ್ ಶೇ 34ರಷ್ಟು ಹೆಚ್ಚಿನ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ದೆಹಲಿಯಲ್ಲಿ ಒಂದು ಸಾವಿರ ಲೀಟರ್ ಜೆಟ್ ಇಂಧನಕ್ಕೆ ₹ 79,020.16 (ಪ್ರತಿ ಲೀಟರ್ಗೆ ಸುಮಾರು 79 ರೂಪಾಯಿ) ಇದೆ ಎಂದು ವರದಿಗಳು ತಿಳಿಸಿವೆ.
ನಿಮ್ಮ ಕಾಮೆಂಟ್ ಬರೆಯಿರಿ