ಚೀನಾದಲ್ಲಿ ಮತ್ತೆ ಕೋವಿಡ್‌ ಸೋಂಕು ಹೆಚ್ಚಳ: ಹಲವೆಡೆ ಶಾಲೆ ಬಂದ್‌, ವಿಮಾನಯಾನ ಸ್ಥಗಿತ

ಬೀಜಿಂಗ್‌: ಪ್ರವಾಸಿಗರಿಂದ ಚೀನಾದಲ್ಲಿ ಕೋವಿಡ್‌ ಏಕಾಏಕಿ ಹೆಚ್ಚಾಗಿದ್ದು, ಹಲವು ಪ್ರದೇಶಗಳಿಗೆ ವಿಮಾನ ಹಾರಾಟ ರದ್ದು ಮಾಡಲಾಗಿದೆ. ಶಾಲೆಗಳನ್ನು ಮುಚ್ಚಲಾಗಿದೆ ಹಾಗೂ ಜನರಿಗೆ ಸಾಮೂಹಿಕ ಪರೀಕ್ಷೆ ಮಾಡಿಸಲಾಗುತ್ತಿದೆ.
ಚೀನಾ ಕಟ್ಟುನಿಟ್ಟಾದ ನಿರ್ಬಂಧವೂ ಸೇರಿದಂತೆ, ಲಾಕ್‌ಡೌನ್‌ ಕ್ರಮ ಅನುಸರಿಸಿ ಕೋವಿಡ್‌ ಸೋಂಕನ್ನು ಶೂನ್ಯಕ್ಕೆ ತಂದಿಟ್ಟಿತ್ತು. ಆದರೆ, ಸತತ ಐದನೇ ದಿನ ಚೀನಾದಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ. ಉತ್ತರ ಮತ್ತು ವಾಯುವ್ಯ ಪ್ರದೇಶಗಳಲ್ಲಿ ಸೋಂಕು ಪ್ರಕರಣಗಳು ಕಾಣಿಸಿಕೊಂಡಿವೆ.
ಸದ್ಯ ಸೋಂಕು ಪ್ರಕರಣಗಳು ಹೆಚ್ಚಾಗಲು ಪ್ರವಾಸಿಗರ ಗುಂಪಿನಲ್ಲಿದ್ದ ವೃದ್ಧ ದಂಪತಿ ಕಾರಣ ಎಂದು ಅಧಿಕಾರಿಗಳು ಭಾವಿಸಿದ್ದಾರೆ. ದಂಪತಿ ಮೊದಲಿಗೆ ಶಾಂಘೈನಲ್ಲಿ ಸಂಚರಿಸಿದ್ದರು. ನಂತರ ಕ್ಸಿಯಾನ್, ಗನ್ಸು ಪ್ರಾಂತ್ಯ ಮತ್ತು ಮಂಗೋಲಿಯಾದ ಒಳನಾಡಿನಲ್ಲಿ ಓಡಾಡಿದ್ದಾರೆ ಎನ್ನಲಾಗಿದೆ.
ಈ ವೃದ್ಧ ದಂಪತಿಯ ನಿಕಟ ಸಂಪರ್ಕದಲ್ಲಿದ್ದ ಹತ್ತಾರು ಮಂದಿಗೆ ಸೋಂಕು ತಗುಲಿದೆ ಎನ್ನಲಾಗಿದೆ.
ಇದಕ್ಕೆ ಪ್ರತಿಯಾಗಿ ಸ್ಥಳೀಯ ಆಡಳಿತಗಳು ಸಾಮೂಹಿಕ ಪರೀಕ್ಷೆಗಳನ್ನು ನಡೆಸುತ್ತಿದೆ. ಕೆಲವು ಪ್ರದೇಶಗಳಲ್ಲಿ ತೀರ ಅಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಬರುವಂತೆ ನಾಗರಿಕರಿಗೆ ತಿಳಿಸಲಾಗಿದೆ. ಸೋಂಕು ಉಲ್ಬಣಗೊಂಡಿರುವ ಕ್ಸಿಯಾನ್, ಲಾಂನ್ಸೋಗೆ ವಿಮಾನಸೇವೆ ಸ್ಥಗಿತಗೊಳಿಸಲಾಗಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ