ಬಂಡೀಪುರ; ಗಾಯಾಳು ಹುಲಿ ಪತ್ತೆ, ಕಣ್ಗಾವಲು

ಚಾಮರಾಜನಗರ: ಹುಲಿ ಸಂರಕ್ಷಿತ ಅರಣ್ಯವಾದ ಬಂಡೀಪುರದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾದ ಕಾರಣದಿಂದ ಹುಲಿಗಳ ನಡುವೆ ಕಾದಾಟ ಹೆಚ್ಚಾಗುತ್ತಿದ್ದು, ಹೀಗೆ ನಡೆದ ಕಾದಾಟದಲ್ಲಿ ಗಾಯಗೊಂಡ ಹುಲಿಯೊಂದು ಈಗ ಪತ್ತೆಯಾಗಿದೆ.
ಬಂಡೀಪರ ಹುಲಿ ಸಂರಕ್ಷಿತ ಪ್ರದೇಶ ಸಫಾರಿ ಝೋನ್‌ನಲ್ಲಿ ಗಾಯಗೊಂಡಿರುವ ಹುಲಿಯೊಂದು ಕಾಣಿಸಿಕೊಂಡಿದೆ. ಗಡಿಯ ವಿಚಾರದಲ್ಲಿ ಹುಲಿಗಳ ನಡುವೆ ಕಾಡಿನಲ್ಲಿ ಕಾದಾಟ ನಡೆಯುವುದು ಸಹಜ ಪ್ರಕ್ರಿಯೆ ಈ ವೇಳೆ ಹುಲಿಗಳು ಗಂಭೀರವಾಗಿ ಗಾಯಗೊಳ್ಳುತ್ತವೆ.
ಈ ಹುಲಿಯು ಸುಮಾರು ಏಳರಿಂದ ಎಂಟು ವರ್ಷ ವಯಸ್ಸಿನದಾಗಿದ್ದು, ನಿತ್ರಾಣ ಸ್ಥಿತಿಯಲ್ಲಿ ಸಂಚರಿಸುತ್ತಿರುವುದು ಬಂಡೀಪರ ಪ್ರವಾಸೋದ್ಯಮ ಪ್ರದೇಶದ ಗಂಜಿಕಟ್ಟೆ ಬಳಿ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ಸಮಯದಲ್ಲಿ ಕಂಡು ಬಂದಿದೆ.
ಗಮನಿಸಿದರೆ ಹುಲಿಯು ಮತ್ತೊಂದು ಹುಲಿಯೊಂದಿಗೆ ಕಾದಾಡಿದ ಪರಿಣಾಮ ಹುಲಿಯ ಬೆನ್ನಿನ ಕೆಳಭಾಗದ ಎರಡು ಕಡೆಗಳಲ್ಲಿ ದೊಡ್ಡ ಗಾಯವಾಗಿದೆ ಹೀಗಾಗಿ ಬೇಟೆಯಾಡಲು ಸಾಧ್ಯವಾಗದೆ ನಿತ್ರಾಣ ಸ್ಥಿತಿಗೆ ತಲುಪಿರಬಹುದೆಂದು ಶಂಕಿಸಲಾಗಿದೆ.
ಈಗ ಅದರ ಬಗ್ಗೆ ನಿಗಾ ವಹಿಸಲು ಅರಣ್ಯ ಇಲಾಖೆ ಮುಂದಾಗಿದ್ದು, ಅದು ಹುಲಿಯು ಚೇತರಿಕೆಯಾಗುವ ಲಕ್ಷಣಗಳು ಕಾಣುತ್ತಿರುವುದುರಿಂದ ಪತ್ತೆ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಪತ್ತೆಗಾಗಿ ಕ್ಯಾಮರಾ ಅಳವಡಿಸಲಾಗಿದೆ.
ಒಂದು ವೇಳೆ ಹುಲಿಯು ಚೇತರಿಸಿಕೊಳ್ಳದೆ ಇದ್ದಲ್ಲಿ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿಯಂತೆ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ತಿಳಿಸಲಾಗಿದೆ.
ಹೆಚ್ಚು ಹುಲಿಗಳು ಹುಲಿ ಗಣತಿಯ ವರದಿ ಪ್ರಕಾರ ಕರ್ನಾಟಕದಲ್ಲಿ ನಾಗರಹೊಳೆ ಅಭಯಾರಣ್ಯದ ವ್ಯಾಪ್ತಿಯಲ್ಲಿ ಹೆಚ್ಚು ಹುಲಿಗಳಿವೆ. ಬಂಡೀಪುರ 2ನೇ ಸ್ಥಾನದಲ್ಲಿದೆ. ನಾಗರಹೊಳೆಯಲ್ಲಿ 127 ಹುಲಿಗಳಿದ್ದರೆ, ಬಂಡೀಪುರದಲ್ಲಿ 126 ಹುಲಿಗಳಿವೆ.
2020ರ ಮಾಹಿತಿ ಪ್ರಕಾರ ದೇಶದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಮಧ್ಯ ಪ್ರದೇಶ ರಾಜ್ಯದಲ್ಲಿ 526 ಹುಲಿಗಳಿವೆ. ಕರ್ನಾಟಕದಲ್ಲಿ 524 ಹುಲಿಗಳಿವೆ. 3ನೇ ಸ್ಥಾನದಲ್ಲಿ ಉತ್ತರಾಖಂಡ್ ರಾಜ್ಯವಿದ್ದು, ಅಲ್ಲಿ 442 ಹುಲಿಗಳಿವೆ. ಈಗ ಹುಲಿಗಳ ನಡುವೆ ವಾಸವಿರುವ ಇತರೆ ಸಸ್ಯಹಾರಿ ಪ್ರಾಣಿಗಳ ಗಣತಿಗೂ ಅಧಿಕಾರಿಗಳು ಮುಂದಾಗಿದ್ದಾರೆ.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement