ರಿಲಯನ್ಸ್ ಇಂಡಸ್ಟ್ರೀಸ್ ಎರಡನೇ ತ್ರೈಮಾಸಿಕ ಲಾಭ ಶೇ. 43ರಷ್ಟು ಏರಿಕೆ: 13,680 ಕೋಟಿ ರೂ.ಗಳ ನಿವ್ವಳ ಲಾಭ

ಮುಂಬೈ: ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದ ಹಣಕಾಸು ವರದಿಯನ್ನು ರಿಲಯನ್ಸ್ ಇಂಡಸ್ಟ್ರೀಸ್ ಪ್ರಕಟಿಸಿದ್ದು, ಕಂಪನಿಯು ತ್ರೈಮಾಸಿಕದಲ್ಲಿ 13,680 ಕೋಟಿ ರೂ.ಗಳ ನಿವ್ವಳ ಲಾಭ ವರದಿ ಮಾಡಿದೆ.
ಕಳೆದ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಇದು ಸುಮಾರು ಶೇಕಡಾ 46.0ರಷ್ಟು ಹೆಚ್ಚಳವಾಗಿದೆ. ಇದೇ ಸಮಯದಲ್ಲಿ, ರಿಲಯನ್ಸ್‌ನ ಕ್ರೂಡೀಕೃತ ಆದಾಯವು 30 ಸೆಪ್ಟೆಂಬರ್ 2021 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 1.67 ಲಕ್ಷ ಕೋಟಿ ರೂ. ನಷ್ಟಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಈ ಆದಾಯ 1.40 ಲಕ್ಷ ಕೋಟಿ ರೂ. ನಷ್ಟಿತ್ತು.
ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಕ್ರೋಢೀಕೃತ ನಿವ್ವಳ ಲಾಭವು ವರ್ಷದಿಂದ ವರ್ಷಕ್ಕೆ ಶೇಕಡಾ 46.0 ರಷ್ಟು ಏರಿಕೆಯಾಗಿ 15,479 ಕೋಟಿ ರೂ.ಗಳಿಗೆ ತಲುಪಿದೆ.
ರಿಲಯನ್ಸ್‌ನ ಡಿಜಿಟಲ್ ಸೇವೆಗಳು ಇಬಿಐಟಿಡಿಎಗೆ 9,561 ಕೋಟಿ ರೂ. ಸಿಕ್ಕಿದೆ. ರಿಲಯನ್ಸ್ ಜಿಯೋ ಪ್ಲಾಟ್‌ಫಾರ್ಮ್‌ಗಳ ತ್ರೈಮಾಸಿಕ ಏಕೀಕೃತ ನಿವ್ವಳ ಲಾಭವು ವರ್ಷದಿಂದ ವರ್ಷಕ್ಕೆ ಶೇಕಡಾ 23.5 ರಷ್ಟು ಏರಿಕೆಯಾಗಿ 3,728 ಕೋಟಿ ರೂ. ತಲುಪಿದೆ. ರಿಲಯನ್ಸ್ ಜಿಯೋದ ಎಎಪಿಯು ಎರಡನೇ ತ್ರೈಮಾಸಿಕದಲ್ಲಿ ಪ್ರತಿ ಚಂದಾದಾರರಿಗೆ ತಿಂಗಳಿಗೆ 143.6 ರೂ.ಗಳಂತೆ ದಾಖಲಾಗಿದೆ .ಇದು ಹಿಂದಿನ ತ್ರೈಮಾಸಿಕದಲ್ಲಿ 138.4 ರೂ.ಗಳಷ್ಟಿತ್ತು.
ರಿಲಯನ್ಸ್ ರಿಟೇಲ್ ನ ಇಬಿಐಟಿಡಿಎ ಮಾರ್ಜಿನ್ ವರ್ಷದಿಂದ ವರ್ಷಕ್ಕೆ ಶೇ .45.2 ರಷ್ಟು ಏರಿಕೆಯಾಗಿ 2,913 ಕೋಟಿ ರೂ.ಗಳನ್ನು ತಲುಪಿದೆ. ಕಳೆದ ತ್ರೈಮಾಸಿಕ ಅವಧಿಯಲ್ಲಿ ರಿಲಯನ್ಸ್ ರಿಟೇಲ್ 813 ಹೊಸ ಮಳಿಗೆಗಳನ್ನು ತೆರೆದಿದೆ. ಇವುಗಳನ್ನು ಒಳಗೊಂಡಂತೆ, ಒಟ್ಟು ಮಳಿಗೆಗಳ ಸಂಖ್ಯೆ ಈಗ 13,635 ಕ್ಕೆ ಏರಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ