ಮೂರು ತಿಂಗಳ ಕಂದಮ್ಮನ ಹತ್ಯೆ ಮಾಡಿದ ಅಜ್ಜಿ, ಮತ್ತೊಂದು ಮಗುವಿನ ಹತ್ಯೆಗೂ ಯತ್ನ..!

ಚೆನ್ನೈ: ಅಜ್ಜಿಯೋರ್ವಳು ಮೂರು ತಿಂಗಳ ಮೊಮ್ಮಗುವನ್ನೇ ಕೊಲೆ ಮಾಡಿದ್ದಾಳೆ. ಅಲ್ಲದೆ, ಮತ್ತೊಂದು ಮಗುವಿನ ಕೊಲೆಗೂ ಯತ್ನಿಸಿದ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಕುಂದಂಪಾಳ್ಯಂ ಮೂಲದ ಭಾಸ್ಕರನ್ ಹಾಗೂ ಐಶ್ವರ್ಯ ಎಂಬ ದಂಪತಿ ಮೂರು ತಿಂಗಳ ಹಿಂದೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಈ ಅವಳಿ ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ಮಧುರೈಯಿಂದ ಅಜ್ಜಿಯನ್ನು ಕರೆದುಕೊಂಡು ಬಂದಿದ್ದರು. ಇಬ್ಬರು ಅವಳಿ ಮೊಮ್ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಅಜ್ಜಿಯೇ ಇಬ್ಬರಲ್ಲಿ ಒಂದು ಮಗುವನ್ನು ಕೊಲೆ ಮಾಡಿದ್ದಾಳೆ.ಮತ್ತೊಂದು ಮಗುವನ್ನು ಕೊಲೆ ಮಾಡುವ ಯತ್ನದಲ್ಲಿದ್ದಾಗ ಬಾಗಿಲು ಬಡಿದ ಸಪ್ಪಳವಾಗಿ ಬಿಟ್ಟು ಓಡಿಹೋಗಿದ್ದಾಳೆ.
ಅಕ್ಟೋಬರ್ 21 ರಂದು ಐಶ್ವರ್ಯ ಅವರು ಇಬ್ಬರು ಮಕ್ಕಳನ್ನು ಬಿಟ್ಟು ಅಂಗಡಿಗೆ ಹೋಗಿದ್ದ ವೇಳೆ ಐಶ್ವರ್ಯ ತಾಯಿ ಶಾಂತಿ ಎಂಬವರು ಮೂರು ತಿಂಗಳ ಮಗುವನ್ನು ಹತ್ಯೆ ಮಾಡಿದ್ದಾಳೆ. ಮತ್ತೊಂದು ಮಗುವನ್ನೂ ಕೂಡ ಹತ್ಯೆ ಮಾಡಲು ಮುಂದಾದಾಗ ಆ ಕ್ಷಣಕ್ಕೆ ಯಾರೋ ಬಾಗಿಲು ಬಡಿದಂತಾಗಿದೆ. ಹೆದರಿದ ಅಜ್ಜಿ ಅಲ್ಲಿಂದ ಪರಾರಿಯಾಗಿದ್ದಾಳೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಂಡು ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಕೊಲೆ ಮಾಡಿದ ಅಜ್ಜಿ ಹಲವು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಳು ಎಂದು ಹೇಳಲಾಗಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ