ಬೆಂಗಳೂರು: ಐಸಿಸ್ ಸೇರಿ ಕೆಲವು ನಿಷೇಧಿತ ಸಂಘಟನೆಗಳ ಜತೆ ಸಂಪರ್ಕ ಹೊಂದಿದ್ದ ಬೆಂಗಳೂರು ನಿವಾಸಿ ಮುಹಮ್ಮದ್ ತಾಖಿರ್ (33) ಎಂಬಾತನನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಅಧಿಕಾರಿಗಳು ಬಂಧಿಸಿದ್ದಾರೆ.
ರಾಜಧಾನಿಯಲ್ಲಿ ನೆಲೆಸಿರುವ ಮುಹಮ್ಮದ್ ತಾಖಿರ್ನನ್ನು ಎನ್ಐಎ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ. ಇದೇ ವರ್ಷದ ಏಪ್ರಿಲ್ನಲ್ಲಿ ಈತನ ಇನ್ನಿಬ್ಬರು ಸಹಚರರಾದ ಅಹಮದ್ ಅಬ್ದುಲ್ ಖಾದರ್ ಮತ್ತು ಇರ್ಫಾನ್ ನಾಸಿರ್ ಅವರನ್ನು ಬಂಧಿಸಿದ್ದ ಎನ್ಐಎ, ದೋಷಾರೋಪಣಾ ಪಟ್ಟಿ ಸಲ್ಲಿಸಿತ್ತು. ತನಿಖೆ ವೇಳೆ ಮೊಹಮದ್ ತಾಕಿರ್ಗೆ ಉಗ್ರರೊಂದಿಗೆ ಸಂಪರ್ಕ ಇರುವ ವಿಚಾರ ಬೆಳಕಿಗೆ ಬಂದಿತ್ತು. ನಿಷೇಧಿತ ಸಂಘಟನೆಗಳಿಗೆ ಫಂಡಿಂಗ್ ಮಾಡಿಸುತ್ತಿದ್ದ ತಾಕಿರ್, ಯುವಕರನ್ನು ಪ್ರೇರೇಪಿಸಿ ಸಿರಿಯಾಗೆ ಕಳುಹಿಸುತ್ತಿದ್ದ ಎನ್ನಲಾಗಿದೆ.
2013ರಲ್ಲಿ ಕಾನೂನುಬಾಹಿರವಾಗಿ ಸಿರಿಯಾಗೆ ಭೇಟಿ ನೀಡಿದ್ದ ಎಂದು ಎನ್ಐಎ ತಿಳಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ