ಆಘಾತಕಾರಿ….20 ರೂ. ಕದ್ದ ಶಂಕೆ ಮೇಲೆ 7 ವರ್ಷದ ಬಾಲಕಿಯನ್ನು ತಳ್ಳುವ ಗಾಡಿಗೆ ಹಗ್ಗದಿಂದ ಕಟ್ಟಿ ಎಳೆದೊಯ್ದರು…!

ಮೀರತ್:‌ ಉತ್ತರ ಪ್ರದೇಶದಲ್ಲಿ ನಡೆದ ಭೀಕರ ಹಾಗೂ ಆಘಾತಕಾರಿ ಘಟನೆಯೊಂದರಲ್ಲಿ ಏಳು ವರ್ಷದ ಬಾಲಕಿಯನ್ನು ಕಳ್ಳತನದ ಶಂಕೆಯ ಮೇಲೆ ಅಂಗಡಿಯವನು ಮತ್ತು ಅವನ ಸಹಾಯಕ ತಳ್ಳುಗಾಡಿಗೆ ಹಗ್ಗದಿಂದ ಕಾಲುಕಟ್ಟಿ ಎಳೆದೊಯ್ದ ಬಗ್ಗೆ ವರದಿಯಾಗಿದೆ. ಹಾಪುರ್ ಜಿಲ್ಲೆಯ ಬಹದ್ದೂರ್ ಘಡ್ ನಲ್ಲಿ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಪ್ರಾಪ್ತ ಬಾಲಕಿಯೊಬ್ಬಳು 20 ರೂ. ಕದ್ದಿದ್ದಾಳೆ ಎಂದು ಆರೋಪಿಸಿದ ಅಂಗಡಿಯವನು ಮತ್ತು ಆತನ ಸಹಾಯಕರನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಬಹದ್ದೂರ್​ಗರ್​ನ ಹಾಪುರ್​​ನಲ್ಲಿ ಈ ದುರ್ಘಟನೆ ನಡೆದಿದ್ದು, 20 ರೂಪಾಯಿ ಕದ್ದ ಆರೋಪಕ್ಕೆ ಈ ಅಮಾನವೀಯ ಕೃತ್ಯ ಎಸಗಲಾಗಿದೆ. 7 ವರ್ಷದ ಬಾಲಕಿಗೆ ಸಮೋಸಾ ತಿನ್ನುವ ಆಸೆಯಾಗಿತ್ತು. ತನ್ನ ಅಪ್ಪನ ಬಳಿ ಹಣ ಪಡೆದುಕೊಂಡು ಈಕೆ ಸಮೋಸಾ ಅಂಗಡಿಗೆ ಹೋಗಿದ್ದಾಳೆ. ಅಂಗಡಿ ಮಾಲೀಕ ರಾಕೇಶ್​ ಕುಮಾರ್​ ಎಂಬಾತ ಬಾಲಕಿಗೆ ಸಮೋಸಾ ನೀಡಿದ್ದಾರೆ. ಇದೇ ವೇಳೆ ಅಲ್ಲೇ ಕ್ಯಾಶ್​ ಬಾಕ್ಸ್​ನಲ್ಲಿ ಇದ್ದ 20 ರೂಪಾಯಿ ಕಾಣೆಯಾಗಿತ್ತು. ಇಷ್ಟಕ್ಕೆ ಕೋಪಗೊಂಡ ಅಂಗಡಿ ಮಾಲೀಕ ಆಕೆ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾನೆ. ಪುಟ್ಟ ಬಾಲಕಿಯೆಂದು ಲೆಕ್ಕಿಸದೇ ಆಕೆಯ ಕೈ ಕಾಲು ಕಟ್ಟಿದ್ದಾನೆ. ಪುಟ್ಟ ಮಗುವಿಗೆ ಹೀಗೆ ಮಾಡುತ್ತಿದ್ದನ್ನ ಕಂಡ ಕೆಲ ಸ್ಥಳೀಯರು ಇದನ್ನು ಪ್ರಶ್ನೆ ಮಾಡಿದ್ದಾರೆ. ಆ ಮಗುವಿಗೆ ತೊಂದರೆ ಕೊಡಬೇಡ ಎಂದು ಮಾಲೀಕನಿಗೆ ಹೇಳಿದ್ದಾರೆ. ಅವಳ ಪರವಾಗಿ ಮಾತಾಡಲು ಬಂದ ಸ್ಥಳೀಯರ ಮೇಲೆಯೂ ಮಾಲೀಕ ರಾಕೇಶ್ ಸಿಂಗ್​ ಹಾಗೂ ಆತನ ಸಹಾಐಕ ಮಹೇಶ್​ ಸಿಂಗ್​ ಎಂಬುವವರು ಹಲ್ಲೆ ಮಾಡಲು ಯತ್ನಿಸಿದ್ದಾನೆ . ಇಷ್ಟಕ್ಕೆ ನಿಲ್ಲದ ಮಾಲೀಕನ ಕ್ರೌರ್ಯ ಆಕೆಯನ್ನು ತಳ್ಳುವ ಗಾಡಿಗೆ ಕಟ್ಟಿ ಎಳೆದೊಯ್ದಿದ್ದಾನೆ. ಮಗು ಅಳುತ್ತಾ ನಾನು ಹಣ ಕದ್ದಿಲ್ಲವೆಂದು ಬೇಡಿಕೊಂಡರು ಮಾಲೀಕನ ಕಲ್ಲು ಹೃದಯ ಕರಗಿಲ್ಲ. ಮತ್ತೆ ಮತ್ತೆ ಈ ಪುಟ್ಟ ಬಾಲಕಿ ಮೇಲೆ ಹಲ್ಲೆ ಮಾಡಿದ್ದಾನೆ.
ಇಬ್ಬರು ಅರೆಸ್ಟ್, ಬಾಲಕಿಗೆ ಮುಂದುವರಿದ ಚಿಕಿತ್ಸೆ
ಈ ಘಟನೆಯ ಸಂಪೂರ್ಣ ದೃಶ್ಯವನ್ನು ವ್ಯಕ್ತಿಯೊಬ್ಬ ತನ್ನ ಮೊಬೈಲ್​ನಲ್ಲಿ ಸೆರೆಹಿಡಿದಿದ್ದ. ಈ ವಿಡಿಯೋ ಸಖತ್​ ವೈರಲ್​ ಆಗಿತ್ತು. ಬಾಲಕಿಯ ತಂದೆ ಕೂಡ ಅಂಗಡಿ ಮಾಲೀಕ ಹಾಗೂ ಆತನ ಸಹಚರನ ವಿರುದ್ಧ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮಾಲೀಕ ರಾಕೇಶ್ ಸಿಂಗ್​, ಹಾಗೂ ಆತನ ಸಹಚರ ಮಹೇಶ್​ ಸಿಂಗ್​ ಬಂಧಿಸಲು ಮುಂದಾದಾಗ ಪೊಲೀಸರ ಮೇಲೂ ಇಬ್ಬರು ಕಿರುಚಾಡಿದ್ದಾರೆ. ಆ ಬಾಲಕಿ ಹಣ ಕದ್ದಿದ್ದಾಳೆ. ಹೀಗಾಗಿ ತಕ್ಕ ಶಿಕ್ಷೆ ನೀಡಿದ್ದೇವೆ. ಹೀಗೆ ಬಿಟ್ಟರೆ ಆ ಮಗು ದೊಡ್ಡ ಕಳ್ಳಿಯಾಗುತ್ತಾಳೆ ಎಂದು ಹೀಗೆ ಮಾಡಿದೆ ಎಂದು ಪೊಲೀಸರ ಮುಂದೆ ಹೇಳಿದ್ದಾರೆ. ಸಿಟ್ಟಿಗೆದ್ದ ಪೊಲೀಸರು ಇಬ್ಬರಿಗೂ ಥಳಿಸಿ, ಜೈಲಿಗಟ್ಟಿದ್ದಾರೆ. ಆದರೆ ಬಾಲಕಿಯ ತಂದೆ ನನ್ನ ಮಗಳು ಹಣ ಕದಿಯಲು ಸಾಧ್ಯವಿಲ್ಲ. ನಾನೇ ಸಮೋಸಾ ತರಲು ಹೆಚ್ಚಿನ ಹಣವನ್ನೂ ನೀಡಿದ್ದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಐಷಾರಾಮಿ ಕಾರು, ದುಬೈ, ಲಂಡನ್‌ನಲ್ಲಿ ಮನೆ... : ಈ ಬಿಜೆಪಿ ಅಭ್ಯರ್ಥಿ ಆಸ್ತಿ ₹1,400 ಕೋಟಿ

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement