ಐಸಿಸ್​ ಸಂಪರ್ಕ​ ಹೊಂದಿದ್ದ ಆರೋಪದ ಮೇಲೆ ಬೆಂಗಳೂರು ನಿವಾಸಿಯ ಬಂಧನ

ಬೆಂಗಳೂರು: ಐಸಿಸ್ ಸೇರಿ ಕೆಲವು ನಿಷೇಧಿತ ಸಂಘಟನೆಗಳ ಜತೆ ಸಂಪರ್ಕ ಹೊಂದಿದ್ದ ಬೆಂಗಳೂರು ನಿವಾಸಿ ಮುಹಮ್ಮದ್​ ತಾಖಿರ್ (33) ಎಂಬಾತನನ್ನು ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಅಧಿಕಾರಿಗಳು ಬಂಧಿಸಿದ್ದಾರೆ.
ರಾಜಧಾನಿಯಲ್ಲಿ ನೆಲೆಸಿರುವ ಮುಹಮ್ಮದ್​ ತಾಖಿರ್​ನನ್ನು ಎನ್​ಐಎ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ. ಇದೇ ವರ್ಷದ ಏಪ್ರಿಲ್​ನಲ್ಲಿ ಈತನ ಇನ್ನಿಬ್ಬರು ಸಹಚರರಾದ ಅಹಮದ್ ಅಬ್ದುಲ್ ಖಾದರ್ ಮತ್ತು ಇರ್ಫಾನ್​ ನಾಸಿರ್ ಅವರನ್ನು ಬಂಧಿಸಿದ್ದ ಎನ್​ಐಎ, ದೋಷಾರೋಪಣಾ ಪಟ್ಟಿ ಸಲ್ಲಿಸಿತ್ತು. ತನಿಖೆ ವೇಳೆ ಮೊಹಮದ್ ತಾಕಿರ್​ಗೆ ಉಗ್ರರೊಂದಿಗೆ ಸಂಪರ್ಕ ಇರುವ ವಿಚಾರ ಬೆಳಕಿಗೆ ಬಂದಿತ್ತು. ನಿಷೇಧಿತ ಸಂಘಟನೆಗಳಿಗೆ ಫಂಡಿಂಗ್ ಮಾಡಿಸುತ್ತಿದ್ದ ತಾಕಿರ್, ಯುವಕರನ್ನು ಪ್ರೇರೇಪಿಸಿ ಸಿರಿಯಾಗೆ ಕಳುಹಿಸುತ್ತಿದ್ದ ಎನ್ನಲಾಗಿದೆ.
2013ರಲ್ಲಿ ಕಾನೂನುಬಾಹಿರವಾಗಿ ಸಿರಿಯಾಗೆ ಭೇಟಿ ನೀಡಿದ್ದ ಎಂದು ಎನ್​ಐಎ ತಿಳಿಸಿದೆ.

0 / 5. 0

ಪ್ರಮುಖ ಸುದ್ದಿ :-   ಸಿದ್ದರಾಮಯ್ಯಗೆ ಬ್ಲ್ಯಾಕ್‌ಮೇಲ್‌ ಮಾಡಲು ಸ್ಟಿಂಗ್ ಆಪರೇಷನ್.. ಇದ್ರಲ್ಲಿ ಕಾಂಗ್ರೆಸ್ಸಿನವರು ಇದ್ದಾರೆ: ಸಚಿವ ಯತೀಂದ್ರ

ನಿಮ್ಮ ಕಾಮೆಂಟ್ ಬರೆಯಿರಿ

advertisement