ದಾಂಡೇಲಿ: ಕಾಳಿ ನದಿ ದಂಡೆಯಿಂದ ಬಾಲಕನ ಎಳೆದೊಯ್ದ ಮೊಸಳೆ

ದಾಂಡೇಲಿ: ಕಾಳಿ ನದಿಯ ದಂಡೆಯ ಮೇಲೆ ಮೀನು ಹಿಡಿಯುತ್ತಿದ್ದ ಬಾಲಕನೋರ್ವನನ್ನು ಮೊಸಳೆಯೊಂದು ಎಳೆದೊಯ್ದು ಘಟನೆ ನಗರದ ಹಳಿಯಾಳ ರಸ್ತೆಯ ವಿನಾಯಕ ನಗರದಲ್ಲಿರುವ ಕಾಳಿ ನದಿಯ ದಂಡೆಯಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.
ನಗರದ ಹಳಿಯಾಳ ರಸ್ತೆಯ ಅಲೈಡ್ ಪ್ರದೇಶದ ನಿವಾಸಿಯಾಗಿರುವ ಮೆಹಮೂದ್ ಅಲಿ ಮಿಯಾ ಗುಲ್ಬರ್ಗ ಎಂಬವರ ಮಗನಾದ 15 ವರ್ಷದ ಬಾಲಕ ಮೊಹಿನ್ ಗುಲ್ಬರ್ಗ ಎಂಬತಾನನ್ನು ಮೊಸಳೆ ಎಳೆದೊಯ್ದಿದೆ.
ಘಟನೆ ನಡೆದ ತಕ್ಷಣವೆ ಅಲ್ಲೆ ಹತ್ತಿರದ ನಿವಾಸಿಯಾಗಿರುವ ನಗರ ಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ್ ಅವರು ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಪೊಲೀಸ್ ವೃತ್ತ ನಿರೀಕ್ಷಕರಾದ ಪ್ರಭು ಗಂಗನಹಳ್ಳಿ, ಗ್ರಾಮೀಣ ಠಾಣೆಯ ಪಿಎಸೈ ಐ.ಆರ್.ಗಡ್ಡೇಕರ ಹಾಗೂ   ಸಿಬ್ಬಂದಿ , ವಲಯಾರಣ್ಯಾಧಿಕಾರಿ ವಿನಯ್ ಭಟ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಕಾಗದ ಕಾರ್ಖಾನೆಯ ಅಗ್ನಿಶಾಮಕ ದಳದ ಅಧಿಕಾರಿಗಳು  ದೌಡಾಯಿಸಿದ್ದಾರೆ.
ಸ್ಥಳೀಯರು ಎರಡ್ಮೂರು ತೆಪ್ಪದ ಮೂಲಕ ಬಾಲಕನ ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಇತ್ತ ಜಂಗಲ್ ಲಾಡ್ಜ್‌ ಹಾಗೂ ಗಣೇಶಗುಡಿ ರ್ಯಾಪ್ಟಿಂಗಿನವರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿ, ಅವರಿಂದಲೂ ಪತ್ತೆ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ. ಪ್ರವಾಸೋದ್ಯಮಿಗಳಾದ ಸ್ಟ್ಯಾನ್ಲಿ, ರವಿ ನಾಯಕ ಮೊದಲಾದವರ ತಂಡ ಕಾರ್ಯಾಚರಣೆಯಲ್ಲಿ ತೊಡಗಿದೆ.
. ಈಗಾಗಲೆ ಗಣೇಶಗುಡಿ ಕೆಪಿಸಿಯವರಿಗೆ ಮಾಹಿತಿ ನೀಡಿ ನೀರು ಬಿಡುವುದನ್ನು ಸ್ಥಗಿತಗೊಳಿಸಲಾಗಿದೆ. ಸಂಜೆ ನಾಲ್ಕುವರೆ ಘಂಟೆ ಸುಮಾರಿಗೆ ಎರಡು ಸಲ ಬಾಲಕನನ್ನು ಮೇಲಕ್ಕೆತ್ತಿ ನೀರಿನ ಕೆಳಗಡೆ ಮೊಸಳೆ ಹೋಗಿರುವುದು ಕಂಡು ಬಂದಿದೆ.

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

ಮೊಸಳೆ ಬಾಲಕನನ್ನು ಎಳೆದುಕೊಂಡು ಹೋಗಿರುವುದು ನಗರದಲ್ಲಿ ಇದು ಮೊದಲ ಪ್ರಕರಣವಾಗಿದೆ. ಮಾಹಿತಿಯ ಪ್ರಕಾರ ಮೊಸಳೆ ಈವರೆಗೆ ಮನಿಷ್ಯರನ್ನು ಎಳೆದೊಯ್ದಿರಲಿಲ್ಲ.

4.5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement