‘ಸುಳ್ಳು ಆರೋಪ’ಗಳ ವಿರುದ್ಧ ಕ್ರಮದಿಂದ ರಕ್ಷಣೆ ಕೋರಿ ಮುಂಬೈ ಪೊಲೀಸ್ ಆಯುಕ್ತರಿಗೆ ಪತ್ರ ಬರೆದ ಎನ್‌ಸಿಬಿಯ ಸಮೀರ್ ವಾಂಖೇಡೆ

ಮುಂಬೈ: ಎನ್‌ಸಿಬಿಯ ಮುಂಬೈ ಘಟಕದ ವಲಯ ನಿರ್ದೇಶಕ ಸಮೀರ್ ವಾಂಖೇಡೆ ಅವರು ಮುಂಬೈ ಪೊಲೀಸ್ ಕಮಿಷನರ್‌ಗೆ ಪತ್ರ ಬರೆದಿದ್ದು, ತಮ್ಮ ವಿರುದ್ಧ “ಯಾವುದೇ ದುರುದ್ದೇಶದಿಂದ ಕಾನೂನು ಕ್ರಮ ಕೈಗೊಳ್ಳದಂತೆ ನೋಡಿಕೊಳ್ಳಬೇಕು” ಎಂದು ಮನವಿ ಮಾಡಿದ್ದಾರೆ ಹಾಗೂ ಮುಂಬೈ ಪೊಲೀಸರಿಂದ ರಕ್ಷಣೆ ಕೋರಿದ್ದಾರೆ.
ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣದ ಸ್ವತಂತ್ರ ಸಾಕ್ಷಿ ಪ್ರಭಾಕರ್ ಸೈಲ್ ಅವರು ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಬಿಟ್ಟುಬಿಡಲು ಸಮೀರ್ ವಾಂಖೇಡೆ ಪರವಾಗಿ 25 ಕೋಟಿ ರೂ. ಬೇಡಿಕೆ ಬಂದಿತ್ತು ಎಂದು ಆರೋಪಿಸಿದ್ದರು. ಆರ್ಯನ್ ಖಾನ್ ಅವರನ್ನು ಅಕ್ಟೋಬರ್ 3 ರಂದು ಬಂಧಿಸಲಾಗಿತ್ತು.
ಸಮೀರ್ ವಾಂಖೇಡೆ ಅವರು ಭಾನುವಾರ ತಮ್ಮ ಪತ್ರದಲ್ಲಿ, ನನ್ನನ್ನು ತಪ್ಪಾಗಿ ಬಿಂಬಿಸಿ ನನ್ನ ಮೇಲೆ ಕಾನೂನು ಕ್ರಮಗಳಲ್ಲಿ ಸಿಲುಕಿಸಲು ಕೆಲವು ಅಪರಿಚಿತ ವ್ಯಕ್ತಿಗಳು ಯೋಜಿಸುತ್ತಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿದೆ.”
ಸಾರ್ವಜನಿಕ ಮಾಧ್ಯಮಗಳಲ್ಲಿ” ನನ್ನನ್ನು “ಜೈಲಿಗೆ ಹಾಕುವುದು ಮತ್ತು ವಜಾಗೊಳಿಸುವ ಬೆದರಿಕೆ ಇದೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
ಹಿಂದಿನ ದಿನ, ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರು ಸಮೀರ್ ವಾಂಖೇಡೆ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಲು ಮುಖ್ಯಮಂತ್ರಿ ಮತ್ತು ರಾಜ್ಯ ಗೃಹ ಸಚಿವರನ್ನು ಭೇಟಿಯಾಗುವುದಾಗಿ ಹೇಳಿದ್ದಾರೆ. ನವಾಬ್ ಮಲಿಕ್ ಸಮೀರ್ ವಾಂಖೇಡೆ ವಿರುದ್ಧ ಸುಲಿಗೆ ಸೇರಿದಂತೆ ಹಲವು ಆರೋಪಗಳನ್ನು ಮಾಡಿದ್ದಾರೆ.
ಮುಂಬೈ ಪೊಲೀಸ್ ಮುಖ್ಯಸ್ಥರಿಗೆ ಬರೆದ ಪತ್ರದಲ್ಲಿ ಸಮೀರ್ ವಾಂಖೇಡೆ ಅವರು ಈ ವಿಷಯವನ್ನು ಈಗಾಗಲೇ ಎನ್‌ಸಿಬಿಯ ಮಹಾನಿರ್ದೇಶಕರಿಗೆ ಉಲ್ಲೇಖಿಸಲಾಗಿದೆ ಎಂದು ಹೇಳಿದ್ದಾರೆ.
ಎನ್‌ಸಿಬಿ ಕೂಡ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದು, “ಅವರು [ಪ್ರಭಾಕರ್ ಸೈಲ್] ಪ್ರಕರಣದ ಸಾಕ್ಷಿಯಾಗಿದ್ದಾರೆ ಮತ್ತು ಪ್ರಕರಣವು ನ್ಯಾಯಾಲಯ ಮತ್ತು ಉಪ ನ್ಯಾಯಾಧೀಶರ ಮುಂದೆ ಇರುವುದರಿಂದ, ಅವರು ಏನಾದರೂ ಹೇಳಲು ಬಯಸಿದರೆ ನ್ಯಾಯಾಲಯಕ್ಕೆ ತಮ್ಮ ಅಹವಾಲು ಸಲ್ಲಿಸಬೇಕಾಗುತ್ತದೆಯೇ ಹೊರತು ಸಾಮಾಜಿಕ ಮಾಧ್ಯಮದ ಮೂಲಕ ಅಲ್ಲ. .. ನಮ್ಮ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಈ ಆರೋಪಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ವಿಟ್ನೆಸ್ ಹೇಳಿದ್ದೇನು?
ಅಫಿಡವಿಟ್‌ನಲ್ಲಿ, ಎನ್‌ಸಿಬಿ ಸಾಕ್ಷಿ ಕೆ.ಪಿ. ಗೋಸಾವಿಯ ಅಂಗರಕ್ಷಕ ಪ್ರಭಾಕರ್ ಸೈಲ್, ಮುಂಬೈ ಕ್ರೂಸ್ ಡ್ರಗ್ ಪ್ರಕರಣದಲ್ಲಿ ಆರ್ಯನ್ ಖಾನ್ ಅವರನ್ನು ಬಿಡುಗಡೆ ಮಾಡಲು ಎನ್‌ಸಿಬಿಯ ಸಮೀರ್ ವಾಂಖೆಡೆ ಪರವಾಗಿ 25 ಕೋಟಿ ರೂ.ಹಣ ಕೇಳಲಾಗಿತ್ತು ಎಂದು ಹೇಳಿದ್ದಾರೆ. ಕೆ.ಪಿ. ಗೋಸಾವಿ, ಆರ್ಯನ್ ಖಾನ್ ಜೊತೆಗಿನ ಸೆಲ್ಫಿ ವೈರಲ್ ಆಗಿದ್ದು, ಪ್ರಕರಣದ ಸಾಕ್ಷಿಯಾಗಿದ್ದಾನೆ. ಸದ್ಯ ತಲೆಮರೆಸಿಕೊಂಡಿದ್ದಾನೆ. ವಂಚನೆ ಪ್ರಕರಣಗಳಲ್ಲಿ ಪುಣೆ ಮತ್ತು ಪಾಲ್ಘರ್ ಪೊಲೀಸರಿಗೂ ಈತ ಬೇಕಾಗಿದ್ದಾನೆ.
ಪ್ರಭಾಕರ್ ಸೈಲ್, ಆರ್ಯನ್ ಖಾನ್ ಬಂಧನದ ನಂತರ ಹಣ ವಿನಿಮಯಕ್ಕೆ ಸಂಬಂಧಿಸಿದ ನಾಟಕೀಯ ಬೆಳವಣಿಗೆಗಳಿಗೆ ತಾನು ಸಾಕ್ಷಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ತನ್ನ ಅಫಿಡವಿಟ್‌ನಲ್ಲಿ, ಕ್ರೂಸ್ ಹಡಗಿನಲ್ಲಿ ದಾಳಿ ನಡೆಸಿದ ರಾತ್ರಿ ಕೆಪಿ ಗೋಸಾವಿ ಜೊತೆಗೂಡಿದ್ದೆ ಎಂದು ಅವರು ಹೇಳಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಪ್ರಕರಣದಲ್ಲಿ ಎನ್‌ಸಿಬಿಯಿಂದ ಖಾಲಿ ಪಂಚನಾಮಕ್ಕೆ ಸಹಿ ಹಾಕಿಸಲಾಗಿದೆ ಎಂದು ಪ್ರಭಾಕರ್ ಸೈಲ್ ಹಿಂದಿನ ದಿನವೂ ಆರೋಪಿಸಿದ್ದರು. ಕೆ.ಪಿ. ಗೋಸಾವಿ ಅನುಮಾನಾಸ್ಪದವಾಗಿ ನಾಪತ್ತೆಯಾದ ನಂತರ ಸಮೀರ್ ವಾಂಖೇಡೆಯಿಂದ ತನ್ನ ಜೀವಕ್ಕೆ ಅಪಾಯವಿದೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ವೀಡಿಯೊ...| ಬೈಕ್​ಗೆ ಡಿಕ್ಕಿ ಹೊಡೆದ ನಂತ್ರ ದೂರ ಎಳೆದೊಯ್ದ ಲಾರಿ..: ಟ್ರಕ್‌ ಹಿಡಿದುಕೊಂಡು ನೇತಾಡುತ್ತಿದ್ದ ಸವಾರ

2 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement