ಐಪಿಎಲ್‌ಗೆ 2 ಹೊಸ ತಂಡಗಳು ಸೇರ್ಪಡೆ: ಬಿಡ್ಡಿಂಗ್​ ನಲ್ಲಿ ಬಿಸಿಸಿಐ ಪಡೆದ ಹಣ ಎಷ್ಟೆಂದರೆ…!

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಹಮದಾಬಾದ್ ಮತ್ತು ಲಕ್ನೋವನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ಐಪಿಎಲ್ ನ ಎರಡು ಹೊಸ ತಂಡಗಳಾಗಿ ಸೇರ್ಪಡೆಗೊಳಿಸಲಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಸೋಮವಾರ ನಡೆದ ಹರಾಜಿನಲ್ಲಿ ಒಟ್ಟು 9 ಸಂಸ್ಥೆಗಳು ಬಿಡ್ಡಿಂಗ್​ ನಡೆಸಿದ್ದವು. ಅಂತಿಮವಾಗಿ ಆರ್​ಪಿ-ಸಂಜಯ್ ಗೋಯೆಂಕಾ ಗ್ರೂಪ್ ಸಂಸ್ಥೆ 7,090 ಕೋಟಿ ರೂ. ಹರಾಜು ಮೊತ್ತಕ್ಕೆ ಲಕ್ನೋ ತಂಡವನ್ನ ತನ್ನದಾಗಿಸಿಕೊಂಡಿತು.
ಇನ್ನೊಂದೆಡೆ ಸಿವಿಸಿ ಕ್ಯಾಪಿಟಲ್ಸ್ ಕಂಪೆನಿಯು ಅಹಮದಾಬಾದ್ ತಂಡದ ಖರೀದಿಗಾಗಿ ಭರ್ಜರಿ ಪೈಪೋಟಿ ನಡೆಸಿತ್ತು. ಅದರಂತೆ ಅಂತಿಮವಾಗಿ 5625 ಕೋಟಿ ರೂ. ನೀಡಿ ಅಹಮದಾಬಾದ್​ ತಂಡವನ್ನು ಖರೀದಿಸಿತು.
ಈ ಹಿಂದೆ ಹೊಸ ಎರಡು ತಂಡಗಳ ಮಾರಾಟದಿಂದ ಬಿಸಿಸಿಐ 10 ಸಾವಿರ ಕೋಟಿ ರೂ. ಆದಾಯಗಳಿಸುವ ಇರಾದೆಯಲ್ಲಿತ್ತು. ಆದರೆ ಈ ಹರಾಜಿನಲ್ಲಿನ ಪೈಪೋಟಿಯಿಂದಾಗಿ ನಿರೀಕ್ಷೆಗೂ ಮೀರಿ ಆದಾಯ ಬಂದಿದೆ. ಅದರಂತೆ ಎರಡು ಹೊಸ ತಂಡಗಳ ಮಾರಾಟದಿಂದ ಬಿಸಿಸಿಐ ಗಳಿಸಿದ್ದು ಬರೋಬ್ಬರಿ 12,715 ಕೋಟಿ. ರೂ.ಗಳಾಗಿದೆ.
ಸಂಜೀವ್ ಗೋಯೆಂಕಾ ಅವರ ತಂಡವು ಲಕ್ನೋನ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂ ಅನ್ನು ಕೇಂದ್ರೀಕರಿಸಿ ಐಪಿಎಲ್​ನಲ್ಲಿ ಕಣಕ್ಕಿಳಿಯಲಿದೆ. ಹಾಗೆಯೇ ಅಹದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ ಅನ್ನು ಕೇಂದ್ರೀಕರಿಸಿ ಸಿವಿಸಿ ಮಾಲಕತ್ವದ ತಂಡ ಐಪಿಎಲ್​ನಲ್ಲಿ ಕಾಣಿಸಿಕೊಳ್ಳಲಿದೆ.
ಐಪಿಎಲ್ ನ ಆಡಳಿತ ಮಂಡಳಿಯು 2 (ಎರಡು) ಹೊಸ ಫ್ರಾಂಚೈಸಿಗಳನ್ನು ಹೊಂದುವ ಮತ್ತು ನಿರ್ವಹಿಸುವ ಹಕ್ಕನ್ನು ಪಡೆಯಲು ಟೆಂಡರ್ (” ಐಟಿಟಿ “) ಗೆ ಆಹ್ವಾನವನ್ನು ನೀಡಿತ್ತು. ಟೆಂಡರ್ ಪ್ರಕ್ರಿಯೆಯ ಅನುಸಾರ, ವಿವಿಧ ಆಸಕ್ತರು ಹೊಸ ಫ್ರಾಂಚೈಸಿಗಳಿಗೆ ತಮ್ಮ ಬಿಡ್ಗಳನ್ನು ಸಲ್ಲಿಸಿದರು. ಇಂದು ದುಬೈನಲ್ಲಿ ಆಸಕ್ತ ಪಕ್ಷಗಳ ಅಧಿಕೃತ ಪ್ರತಿನಿಧಿಗಳು ಬಿಡ್‌ಗಳನ್ನು ಸಲ್ಲಿಸಿದ್ದರು.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   ಸೊಳ್ಳೆ ಬತ್ತಿಯಿಂದ ಹೊತ್ತಿಕೊಂಡ ಬೆಂಕಿ: ಒಂದೇ ಕುಟುಂಬದ ಆರು ಮಂದಿ ಸಾವು

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement