ಬಡ ರಿಕ್ಷಾ ಚಾಲಕನಿಗೆ 3.47 ಕೋಟಿ ರೂ. ಆದಾಯ ತೆರಿಗೆ ಪಾವತಿಸುವಂತೆ ಐಟಿ ಅಧಿಕಾರಿಗಳಿಂದ ಬಂತು ನೋಟಿಸ್‌…!

ಮಥುರಾ: ಉತ್ತರ ಪ್ರದೇಶದ ಜಿಲ್ಲೆಯ ಮಥುರಾದಲ್ಲಿ ಬಡ ರಿಕ್ಷಾ (ಟಾಂಗಾ) ಚಾಲಕನೊಬ್ಬನಿಗೆ 3 ಕೋಟಿ ರೂ.ಗಳಿಗೂ ಹೆಚ್ಚು ಆದಾಯ ತೆರಿಗೆ ಪಾವತಿಸಲು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸ್ ಕಳುಹಿಸಿದ್ದಾರೆ…! ಈ ನೋಟಿಸ್ ನೋಡಿ ಕಂಗಾಲಾದ ಟಾಂಗಾ ಚಾಲಕ ಈಗ ಪೊಲೀಸರಿಗೆ ವಂಚನೆ ದೂರು ನೀಡಿದ್ದಾರೆ.
ಮಥುರಾದ ಬಕಲ್ಪುರ್ ಪ್ರದೇಶದ ಅಮರ್ ಕಾಲೋನಿಯ ನಿವಾಸಿ ಪ್ರತಾಪ ಸಿಂಗ್ ಅವರಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 3 ಕೋಟಿ ರೂ.ಗಳಿಗೂ ಹೆಚ್ಚು ಆದಾಯ ತೆರಿಗೆ ಪಾವತಿಸಲು ನೋಟಿಸ್‌ ಕಳುಹಿಸಿದ್ದಾರೆ. ಹಲವು ವರ್ಷಗಳಿಂದ ಟಾಂಗಾ (ಎಳೆದುಕೊಂಡು ಹೋಗುವ ರಿಕ್ಷಾ) ಓಡೊಸುತ್ತಿರುವ ಅವರಿಗೆ ಐಟಿ ಇಲಾಖೆಯಿಂದ ನೋಟಿಸ್ ಬಂದ ಹಿನ್ನೆಲೆಯಲ್ಲಿ ಅವರು ಪೊಲೀಸರಿಗೆ ವಂಚನೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಯಾವುದೇ ಪ್ರಕರಣ ದಾಖಲಿಸಿಲ್ಲ ಆದರೆ ಪೊಲೀಸರು ಈ ಬಗ್ಗೆ ಪರಿಶೀಲಿಸುತ್ತಾರೆ ಎಂದು ಸ್ಟೇಷನ್ ಹೌಸ್ ಆಫೀಸ್ (SHO) ಅನುಜ್ ಕುಮಾರ್ ಸಿಂಗ್ ಹೇಳಿದ್ದಾರೆ.
ಈ ಬಗ್ಗೆ ಪ್ರತಾಪ್ ಸಿಂಗ್ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ಹಂಚಿಕೊಂಡಿದ್ದು, ನನಗೆ ಅಕ್ಟೋಬರ್ 19ರಂದು ಐಟಿ ಅಧಿಕಾರಿಗಳಿಂದ ಫೋನ್ ಬಂದಿತ್ತು. 3,47,54,896 ರೂ. ತೆರಿಗೆ ನೀಡುವಂತೆ ನನಗೆ ನೋಟಿಸ್ ನೀಡಲಾಗಿದೆ. ತಳ್ಳುವ ರಿಕ್ಷಾದಿಂದ ಬರುವ ಆದಾಯದಿಂದಲೇ ಬದುಕುತ್ತಿರುವ ನಮ್ಮ ಬಳಿ ಅಷ್ಟೊಂದು ಹಣ ಎಲ್ಲಿರುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ.
ಬ್ಯಾಂಕ್​ಗೆ ನೀಡಲು ಮಾರ್ಚ್ 15ರಂದು ತೇಜ್ ಪ್ರಕಾಶ್ ಉಪಾಧ್ಯಾಯ ಒಡೆತನದ ಬಕಲ್‌ಪುರದ ಜನ್ ಸುವಿಧಾ ಕೇಂದ್ರದಲ್ಲಿ ಪ್ಯಾನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ್ದೆ. ಸಂಜಯ್ ಸಿಂಗ್ ಎಂಬುವವರಿಂದ ಪಾನ್ ಕಾರ್ಡ್​ ಜೆರಾಕ್ಸ್​ ಪ್ರತಿಯನ್ನು ತೆಗೆದುಕೊಂಡಿದ್ದೆ. ಆ ವೇಳೆ ಯಾರೋ ನನಗೆ ಮೋಸ ಮಾಡಿದ್ದಾರೆ ಎನಿಸುತ್ತಿದೆ. ನಾನು ಅನಕ್ಷರಸ್ಥನಾಗಿರುವುದರಿಂದ ನನಗೆ ಒರಿಜಿನಲ್ ಪಾನ್ ಕಾರ್ಡ್ ಮತ್ತು ಕಲರ್ ಜೆರಾಕ್ಸ್​ನ ಪಾನ್ ಕಾರ್ಡ್​ ನಡುವಿನ ವ್ಯತ್ಯಾಸ ಗೊತ್ತಾಗಿಲ್ಲ. ನನ್ನ ಒರಿಜಿನಲ್ ಪಾನ್ ಕಾರ್ಡನ್ನು ಆತನೇ ಇಟ್ಟುಕೊಂಡು ಯಾಮಾರಿಸಿದ್ದಾನೆ ಎಂದು ಪ್ರತಾಪ್ ಸಿಂಗ್ ಆರೋಪಿಸಿದ್ದಾರೆ.
. 2018-19ನೇ ಸಾಲಿಗೆ ವ್ಯಾಪಾರಿಯ ವಹಿವಾಟು 43,44,36,201 ರೂ. ಆಗಿದ್ದು, ಯಾರೋ ಆತನನ್ನು ಯಾಮಾರಿಸಿ ಆತನ ಹೆಸರಿನ ಮೇಲೆ ಜಿಎಸ್‌ಟಿ ಸಂಖ್ಯೆ ಪಡೆದಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ,
ಯಾರೋ ತನ್ನನ್ನು ಅನುಕರಿಸಿ ವಂಚನೆ ಎಸಗಿರುವುದರಿಂದ ಎಫ್‌ಐಆರ್ ದಾಖಲಿಸುವಂತೆ ಐಟಿ ಅಧಿಕಾರಿಗಳು ನನಗೆ ಸಲಹೆ ನೀಡಿದ್ದಾರೆ. ಹೀಗಾಗಿ ವಂಚನೆ ದೂರು ದಾಖಲಿಸಿರುವುದಾಗಿ ಎಂದು ಸಿಂಗ್ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಪಹಲ್ಗಾಮ್ ದಾಳಿ : ಭಯೋತ್ಪಾದಕ ಗುಂಪು ಲಷ್ಕರ್ ಅಂಗಸಂಸ್ಥೆ ಟಿಆರ್‌ಎಫ್ ವಿರುದ್ಧ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಪುರಾವೆ ಸಲ್ಲಿಸಲಿರುವ ಭಾರತ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement