ಒಂದೇ ವರ್ಷದಲ್ಲಿ ಈ ದಂಪತಿಯಿಂದ ಬರೋಬ್ಬರಿ 300 ಜನರಿಗೆ ಹನಿಟ್ರ್ಯಾಪ್‌…! ಸುಲಿಗೆ ಮಾಡಿದ ಹಣದ ಮೊತ್ತ ಕೇಳಿ ಪೊಲೀಸರೇ ತಬ್ಬಿಬ್ಬು..!

ಗಾಜಿಯಾಬಾದ್ : ಇತ್ತೀಚಿನ ದಿನಗಳಲ್ಲಿ ಹನಿಟ್ರ್ಯಾಪ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಹುಡುಗಿಯರನ್ನು ಬಳಸಿಕೊಂಡು ಉದ್ಯಮಿಗಳು, ಶ್ರೀಮಂತರನ್ನು ಹನಿಟ್ರ್ಯಾಪ್‌ ಬಲೆಗೆ ಬೀಸಿಕೊಂಡು ಸುಲಿಗೆ ಮಾಡುವ ಪ್ರಕರಣಗಳು ದೇಶಾದ್ಯಂತ ಹೆಚ್ಚುತ್ತಿದೆ.
ಇಂಥದ್ದೇ ಪ್ರಕರಣಗಳಲ್ಲಿ ಹನಿಟ್ರ್ಯಾಪ್‌ ಮೂಲಕ ಕೋಟ್ಯಾಂತರ ರೂಪಾಯಿ ಸುಲಿಗೆ ಮಾಡಿರುವ ದಂಪತಿಯನ್ನು ಪೊಲೀಸರು ಗಾಜಿಯಾಬಾದ್ ನಲ್ಲಿ ಬಂಧಿಸಿದ್ದು ಅವರು ನೀಡಿದ ವಿವರಗಳನ್ನು ಕೇಳಿ ಪೊಲೀಸರೇ ಹೌಹಾರಿದ್ದಾರೆ.
ಯೋಗೇಶ್ ಮತ್ತು ಸಪ್ನಾ ಗೌತಮ್ ಎಂಬ ದಂಪತಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ ಗಾಜಿಯಾಬಾದ್‌ ಮೂಲದ ಯೋಗೀಶ್‌ ಹಾಗೂ ಸ್ವಪ್ನಾ ಗೌತಮ್‌ ಕೇವಲ ಒಂದೇ ಒಂದು ವರ್ಷದ ಅವಧಿಯಲ್ಲಿ ದೇಶದಾದ್ಯಂತ ಸುಮಾರು 300 ಮಂದಿಯನ್ನು ಹನಿಟ್ರ್ಯಾಪ್‌ ಬಲೆಗೆ ಕೆಡವಿದ್ದಾರಂತೆ…! ಇದನ್ನು ಕೇಳಿ ಪೊಲೀಸರೇ ದಂಗಾಗಿ ಹೋಗಿದ್ದಾರೆ. ಹನಿಟ್ರ್ಯಾಪ್‌ ಮೂಲಕ ಒಂದೇ ವರ್ಷದಲ್ಲಿ 20 ಕೋಟಿಗೂ ಅಧಿಕ ಹಣವನ್ನು ಟ್ರ್ಯಾಪ್‌ ಮಾಡಿ ವಸೂಲಿ ಮಾಡಿದ್ದಾರೆ.
ಇದಕ್ಕಾಗಿ ಅವರಿಗೆ ಒಂದು ವರ್ಷದಿಂದ ಸುಮಾರು 30 ಮಹಿಳೆಯರು ಈ ಅಪರಾಧದಲ್ಲಿ ಸಹಾಯ ಮಾಡುತ್ತಿದ್ದರು.
ಸಪ್ನಾ ಮತ್ತು ಅವರ ಪತಿ ಅವರ ಕೆಲಸಗಳನ್ನು ವಿಂಗಡಿಸಿಕೊಳ್ಳುತ್ತಿದ್ದರಂತೆ. ಅವಳು (ಸಪ್ನಾ) ಹೊಸ ಐಡಿಗಳನ್ನು ಬಳಸಿಕೊಂಡು ವೆಬ್‌ಸೈಟ್‌ಗೆ ಸೇರುತ್ತಿದ್ದಳು ಮತ್ತು ತಾವು ಜನರೊಂದಿಗೆ ಚಾಟ್ ಮಾಡುತ್ತಿದ್ದಳು. ಅವರು ಉದ್ಯೋಗಕ್ಕಾಗಿ ಇತರ ಮಹಿಳೆಯರಿಗೂ ತರಬೇತಿ ನೀಡಿದರು. ಯೋಗೀಶ್ ಸ್ಥಳಗಳು (ಸಂತ್ರಸ್ತರಿಗೆ ಕರೆ ಮಾಡಿದ ಸ್ಥಳಗಳು), ದೂರವಾಣಿ ಸಂಖ್ಯೆಗಳು ಮತ್ತು ಬ್ಯಾಂಕ್ ಖಾತೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದರು. ನಂತರದ ಅವರ ಮೊಬೈಲ್‌ ಸಂಖ್ಯೆಯನ್ನು ಕಲೆಕ್ಟ್‌ ಮಾಡಿ ಪತ್ನಿ ಸ್ವಪ್ನಾಗೆ ನೀಡುತ್ತಿದ್ದ ಎಂದು ಗಾಜಿಯಾಬಾದ್ ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉದ್ಯಮಿಗಳು, ಶ್ರೀಮಂತರ ಮೊಬೈಲ್‌ ಪಡೆದುಕೊಂಡ ನಂತರ ಸಾಮಾಜಿಕ ಜಾಲತಾಣದ ಮೂಲಕ ಅವರನ್ನು ಸಂಪರ್ಕಿಸುವ ಕಾರ್ಯವನ್ನು ಸ್ವಪ್ನಾ ಮಾಡುತ್ತಿದ್ದಳು. ನಕಲಿ ಖಾತೆಯ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಂಪರ್ಕಿಸಿ ಚಾಟ್‌ ಮಾಡಿ ತನ್ನ ಬಲೆಗೆ ಬೀಳಿಸಿಕೊಳ್ಳುತ್ತಿದ್ದಳು. ನಂತರ ಯುವತಿಯರ ಮೂಲಕ ಜಾಲದಲ್ಲಿ ಕೆಡವಿ ವಿಡಿಯೊ ಮಾಡಿಕೊಂಡು ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಸ್ವಪ್ನಾ ಹಾಗೂ ಯೊಗೀಶ್‌ ದಂಪತಿ ಕಳೆದ ಒಂದು ವರ್ಷದ ಅವಧಿಯಲ್ಲಿ ಬರೋಬ್ಬರಿ 20 ಕೋಟಿಗೂ ಅಧಿಕ ಹಣವನ್ನು ಸುಲಿಗೆ ಮಾಡಿದ್ದಾರೆ. ಇದಲ್ಲದೆ, ಈ ದಂಪತಿ ವೆಬ್‌ಸೈಟ್‌ ನಲ್ಲಿ ಸೆಕ್ಸ್‌ ಚಾಟ್‌ ಮಾಡಿಯೂ ಹಣ ಸಂಪಾದನೆ ಮಾಡುತ್ತಿದ್ದರು ಎಂಬುದು ಪೊಲೀಸ್‌ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ದಂಪತಿಯಿಂದ ವಿಡಿಯೋ, ಪೋಟೋಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

ಪ್ರಮುಖ ಸುದ್ದಿ :-   ರಾಜ್‌ ಕುಂದ್ರಾಗೆ ಸೇರಿದ ₹97 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement