18,000 ಕೋಟಿ ರೂ.ಗಳಿಗೆ ಏರ್ ಇಂಡಿಯಾ ಮಾರಾಟ : ಷೇರು ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ ಟಾಟಾ ಸನ್ಸ್‌- ಕೇಂದ್ರ ಸರ್ಕಾರ

ನವದೆಹಲಿ : ಕೇಂದ್ರ ಸರಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್‌ ಇಂಡಿಯಾ ವನ್ನು18,000 ಕೋಟಿ ರೂ.ಗಳಿಗೆ ಖರೀದಿ ಮಾಡಿದ್ದ ಟಾಟಾ ಸನ್ಸ್‌ ಹಾಗೂ ಕೇಂದ್ರ ಸರ್ಕಾರ ಷೇರು ಖರೀದಿ ಒಪ್ಪಂದಕ್ಕೆ ಸಹಿ ಹಾಕಿವೆ. ಹೀಗಾಗಿ ಏರ್‌ ಇಂಡಿಯಾ ಟಾಟಾ ಸಂಸ್ಥೆಯ ಪಾಲಾಗಿದೆ.
ಭಾರತದಲ್ಲಿ 2003 – 04ರ ನಂತರದಲ್ಲಿ ನಡೆಯುತ್ತಿರುವ ಮೊದಲ ಖಾಸಗೀಕರಣವಾಗಿದ್ದು, ತನ್ನದೇ ಸಂಸ್ಥೆಯನ್ನು ಸರ್ಕಾರದಿಂದ ಮರಳಿ ಖರೀದಿಸಿದೆ.
ಟಾಟಾ ಸಂಸ್ಥೆ ಸಿಂಗಾಪುರ್‌ ಏರ್‌ ಲೈನ್ಸ್‌ ನ ಜಂಟಿ ಉದ್ಯಮವಾಗಿರುವ ಏರ್‌ ಏಷ್ಯಾ ಇಂಡಿಯಾ ಮತ್ತು ವಿಸ್ತಾರಾ ವಿಮಾನಯಾನ ಸೇವೆಯನ್ನು ನಿರ್ವಹಿಸುತ್ತಿದೆ. ಇದೀಗ ನಷ್ಟದ ಸುಳಿಗೆ ಸಿಲುಕಿದ್ದ ಏರ್‌ ಇಂಡಿಯಾವನ್ನು ಟಾಟಾ ಸನ್ಸ್‌ ಖರೀದಿಸಿದೆ. ಹೀಗಾಗಿ ಏರ್ ಇಂಡಿಯಾ 27 ಬೋಯಿಂಗ್ 787 ಸೇರಿದಂತೆ 43 ವೈಡ್ ಬಾಡಿ ವಿಮಾನಗಳು ಇನ್ಮುಂದೆ ಟಾಟಾ ಸಸ್ಸ್‌ ಪಾಲಾಗಲಿದೆ.
ಟಾಟಾ ಸನ್ಸ್‌ ಪಾಲಾಗಿರುವ ಏರ್‌ ಇಂಡಿಯಾ ಮುಂಬರುವ ತಿಂಗಳುಗಳಲ್ಲಿ ಕಾರ್ಯಾಚರಣೆಯನ್ನು ಆರಂಭಿಸುವ ಸಾಧ್ಯತೆಯಿದೆ. ಏರ್ ಇಂಡಿಯಾದ ಕಾರ್ಯತಂತ್ರದ ಮರು ಹೂಡಿಕೆಗಾಗಿ ಟಾಟಾ ಸನ್ಸ್‌ನೊಂದಿಗೆ ಸರಕಾರವು ಖರೀದಿ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ( ಡಿಐಪಿಎಎಂ) ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಟ್ವಿಟರ್‌ನಲ್ಲಿ ಬರೆದಿದ್ದಾರೆ. ಈ ಒಪ್ಪಂದವು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಗ್ರೌಂಡ್ ಹ್ಯಾಂಡ್ಲಿಂಗ್ ಆರ್ಮ್ AISATS ಮಾರಾಟವನ್ನು ಒಳಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣ: ಕೇಜ್ರಿವಾಲ್ ನಿವಾಸದ ಸಿಸಿಟಿವಿ ಡಿವಿಆರ್ ವಶಕ್ಕೆ ಪಡೆದ ಪೊಲೀಸರು

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement