67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ: ರಜನಿಕಾಂತಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ

ನವದೆಹಲಿ: ಭಾರತೀಯ ಚಿತ್ರರಂಗದ ‘ಸೂಪರ್​ ಸ್ಟಾರ್​’ ರಜನಿಕಾಂತ್ (Rajinikanth)​ ಅವರು ಇಂದು (ಸೋಮವಾರ) ಪ್ರತಿಷ್ಠಿತ ‘ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿ’ (Dadasaheb Phalke Award) ಸ್ವೀಕರಿಸಿದ್ದಾರೆ.
ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸಮಾರಂಭದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಈ ಪ್ರಶಸ್ತಿಗಳನ್ನು ಪ್ರದಾನ ಮಾಡಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ನೀಡಿದ ಅಪರಿಮಿತ ಸಾಧನೆಗಾಗಿ ರಜನಿಕಾಂತ್​ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. 67ನೇ ರಾಷ್ಟ್ರ ಪ್ರಶಸ್ತಿ ಸಮಾರಂಭ (67th National Film Awards) ಇದಾಗಿದ್ದು, 2019ರಲ್ಲಿ ತೆರೆಕಂಡ ಸಿನಿಮಾಗಳಿಗೆ ಸಹ ಪ್ರಶಸ್ತಿ ನೀಡಲಾಗಿದೆ.
ಮಲಯಾಳಂ ಸಿನಿಮಾ ‘ಮರಕ್ಕರ್​: ಲಯನ್​ ಆಫ್​ ದಿ ಅರೇಬಿಯನ್​ ಸೀ’ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ. ‘ಭೋಂಸ್ಲೆ’ ಚಿತ್ರಕ್ಕಾಗಿ ಮನೋಜ್​ ಬಾಜಪೇಯಿ ಹಾಗೂ ‘ಅಸುರನ್​’ ಚಿತ್ರಕ್ಕಾಗಿ ಧನುಶ್​ ಅವರು ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದ್ದಾರೆ. ‘ಪಂಗಾ’ ಮತ್ತು ‘ಮಣಿಕರ್ಣಿಕಾ’ ಚಿತ್ರಗಳಿಗಾಗಿ ಕಂಗನಾ ರಣಾವತ್​ ಅವರಿಗೆ ‘ಅತ್ಯುತ್ತಮ ನಟಿ’ ಪ್ರಶಸ್ತಿ ಸಿಕ್ಕಿದೆ.
ಕನ್ನಡದ ಅತ್ಯುತ್ತಮ ಸಿನಿಮಾ ಎಂಬ ಖ್ಯಾತಿಗೆ ಈ ವರ್ಷ ‘ಅಕ್ಷಿ’ ಚಿತ್ರ ಪಾತ್ರವಾಗಿದೆ. ಇದಕ್ಕೆ ನಿರ್ದೇಶನ ಮಾಡಿರುವುದು ಹೊಸ ನಿರ್ದೇಶಕ ಮನೋಜ್​ ಕುಮಾರ್. ಹಲವಾರು ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿರುವ​ ಅವರಿಗೆ ನಿರ್ದೇಶಕನಾಗಿ ‘ಅಕ್ಷಿ’ ಮೊದಲ ಸಿನಿಮಾ. ಚೊಚ್ಚಲ ಪ್ರಯತ್ನದಲ್ಲೇ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ.

ಪ್ರಮುಖ ಸುದ್ದಿ :-   ಸೇನಾಧಿಕಾರಿ ಸೋಫಿಯಾ ಕುರೇಷಿ ಬಗ್ಗೆ ವಿವಾದಾತ್ಮಕ ಹೇಳಿಕೆ : ಮಧ್ಯಪ್ರದೇಶ ಸಚಿವನ ವಿರುದ್ಧ ಎಫ್ಐಆರ್ ದಾಖಲಿಸಲು ಹೈಕೋರ್ಟ್ ಆದೇಶ

ಅತ್ಯುತ್ತಮ ಚಲನಚಿತ್ರ: ಮರಕ್ಕಾರ್:
ಅತ್ಯುತ್ತಮ ನಟ: ಭೋಂಸ್ಲೆಗಾಗಿ ಮನೋಜ್ ಬಾಜಪೇಯಿ ಮತ್ತು ಅಸುರನ್‌ಗಾಗಿ ಧನುಷ್
ಅತ್ಯುತ್ತಮ ನಟಿ: ಕಂಗನಾ ರಣಾವತ್ ಪಂಗಾ ಮತ್ತು ಮಣಿಕರ್ಣಿಕಾ: ದಿ ಕ್ವೀನ್ ಆಫ್ ಜಾನ್ಸಿ
ಅತ್ಯುತ್ತಮ ಪೋಷಕ ನಟಿ: ತಾಷ್ಕೆಂಟ್ ಫೈಲ್ಸ್‌ಗಾಗಿ ಪಲ್ಲವಿ ಜೋಶಿ
ಅತ್ಯುತ್ತಮ ಪೋಷಕ ನಟ: ವಿಜಯ್ ಸೇತುಪತಿ ಸೂಪರ್ ಡಿಲಕ್ಸ್ ಗಾಗಿ‌
ತೆರಿ ಮಿಟ್ಟಿ-ಬಿ ಪ್ರಾಕ್ ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ

ಮನೋಜ್ ಅವರ ಸಿನಿಮಾಗಳಿಗೆ ಮಾತ್ರವಲ್ಲ, ದಿ ಫ್ಯಾಮಿಲಿ ಮ್ಯಾನ್ ನಲ್ಲಿನ ಅಭಿನಯಕ್ಕಾಗಿ ಪ್ರಶಂಸೆಗೆ ಪಾತ್ರರಾದರು. ಧನುಷ್ ವೇದಿಕೆಯತ್ತ ಸಾಗುತ್ತಿದ್ದಂತೆ ವಿಜಯ್ ಸೇತುಪತಿ ಅವರಿಂದ ಪ್ರಶಂಸೆ ಪಡೆದರು. ಮತ್ತೊಂದೆಡೆ ಧನುಷ್‌  ಹಾಗೂ ಕಂಗನಾ ರಣಾವತ್‌ ಪ್ರಶಸ್ತಿ  ಪಡೆದರು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement