ಉತ್ತರ ಪ್ರದೇಶದಲ್ಲಿ ಮೀನಿನ ಮಳೆ : ಭದೋಹಿ ಪ್ರದೇಶದಲ್ಲಿ ಆಗಸದಿಂದ ಉದುರಿದ ಸಾವಿರಾರು ಮೀನುಗಳು..!! ವೀಕ್ಷಿಸಿ

ಉತ್ತರ ಪ್ರದೇಶ : ಪ್ರಕೃತಿಯಲ್ಲಿ ಏನೆಲ್ಲ ವಿಚಿತ್ರ ಘಟನೆಗಳು ನಡೆಯುತ್ತವೆ. ಇದನ್ನು ನಂಬುವುದು ಕಷ್ಟವಾದರೂ ಪ್ರಕೃತಿಯಲ್ಲಿ ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಆಗಸದಿಂದ ಮೀನ ಮಳೆ ಬಿದ್ದಿದೆ ಎಂದರೆ ಯಾರಾದರೂ ನಂಬುತ್ತಾರೆಯೆ..? ಆದರೆ ನಂಬಲೇಬೇಕು.

ಯಾಕೆಂದರೆ ಇಂಥದ್ದೊಂದು ವಿದ್ಯಮಾನ ವಾಸ್ತವದಲ್ಲಿ ನಡೆದಿದೆ. ಇದು ಅಚ್ಚರಿಯೆನಿಸಬಹುದು, ಆದರೆ ಉತ್ತರ ಪ್ರದೇಶದ ಭದೋಹಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಆಗಸದಿಂದ ಮೀನುಗಳು ಸಾವಿರ ಸಾವಿರ ಸಂಖ್ಯೆಲ್ಲಿ ಬಿದ್ದಿರುವ ವಿದ್ಯಮಾನ ನಡೆದಿದೆ. ಉತ್ತರಾಖಂಡ ಹಾಗೂ ಉತ್ತರ ಪ್ರದೇಶದಲ್ಲಿ ಧೋ ಎಂದು ವಾರದಿಂದ ಮಳೆ ಸುರಿಯುತ್ತಿದೆ. ಭದೋಹಿ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದೆ. ಆದರೆ ಜೋರಾದ ಗಾಳಿಯ ಜೊತೆಗೆ ಆಕಾಶದಿಂದ ಮಳೆಯ ಜೊತೆ ಮೀನುಗಳು ಪಟಪಟಪನೆ ಉದುರಿವೆ. ಮೀನುಗಳು ಬೀಳುತ್ತಿರುವುದನ್ನು ಕಂಡ ಸ್ಥಳೀರು ಚಕಿತಗೊಂಡಿದ್ದಾರೆ. ಇಂಥದ್ದನ್ನು ಪುರಾಣಗಳಲ್ಲಿ ಮಾತ್ರ ಕೇಳುತ್ತಿದ್ದ ಜನರ ಕಣ್ಣೆದುರಿಗೆ ಈ ಘಟನೆ ನಡೆದಾಗ ಕೇಔಲ ಕಣ್ಣರಳಿಸಿ ನೋಡುವುದಷ್ಟೇ ಅವರ ಕೆಲಸವಾಗಿತ್ತು. ಇನ್ನು ಕೆಲವರು ಇದು ಪವಾಡ ಎಂದೆಲ್ಲ ಮಾತನಾಡಲಾರಂಭಸಿದರು.

 

ಮಳೆಯ ನಡುವಲ್ಲೇ ಸ್ಥಳೀಯರು ನೂರಾರು ಮೀನುಗಳನ್ನು ಸಂಗ್ರಹಿಸಿದ್ದಾರೆ. ಆರಂಭದಲ್ಲಿ ಆಲಿಕಲ್ಲು ಸುರಿಯುತ್ತಿದೆ. ಹೀಗಾಘಿ ದೊಪ್ಪೆಂದು ಬಿದ್ದ ಸಪ್ಪಳವಾಗುತ್ತಿದೆ ಎಂದು ಜನರು ಅಂದುಕೊಂಡರು. ಆದರೆ ಆಗಸದಿಂದ ನೆಲಕ್ಕೆ ಬಿದ್ದ ಮೀನುಗಳು ಉರುಳಾಡಲು ಆರಂಭಿಸದವು. ಒಂದೋ ಎರಡೋ ಮೀನುಗಳು ಬಿದ್ದಿದ್ದರೆ ಆರೂ ಅಷ್ಟು ಪಕ್ಷ್ಯ ವಹಿಸುತ್ತಿರಲಿಲ್ಲವೇಣೋ..? ಆದರೆ ನೂರಾರು ಮೀನುಗಳು ಪಟಪಟನೆ ಆಗಸದಿಂದ ಉದುರಲಾರಂಭಿಸಿದಾಗ ಜನರು ಚಕಿತರಾದರು. ಕೆಲವರು ಬಿದ್ದ ಮೀನುಗಳನ್ನು ಸಂಗ್ರಹಿಸಿ ಚೀಲಕ್ಕೆ ತುಂಬಿದರು. ಕೆಲವರು ಇದಕ್ಕೆ ಆತಂಖವನ್ನೂ ಪಟ್ಟುಕೊಂಡಿದ್ದಾರೆ. ಈಗ ಉತ್ತರ ಪ್ರದೇಶದಾದ್ಯಂತ ಮೀನಿನ ಮಳೆಯದ್ದೇ ಚರ್ಚೆ ಜೋರಾಗಿ ನಡೆದಿದೆ.
ಈ ಕುರಿತು ಸಂಶೋಧಕರು ಮೀನಿನ ಮಳೆಯ ರಹಸ್ಯವನ್ನು ಬೇಧಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಪ್ರಮುಖ ಸುದ್ದಿ :-   ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣ: ಕೇಜ್ರಿವಾಲ್ ನಿವಾಸದ ಸಿಸಿಟಿವಿ ಡಿವಿಆರ್ ವಶಕ್ಕೆ ಪಡೆದ ಪೊಲೀಸರು

ಭಾರತದಲ್ಲೇ ಈ ತರಹ ಮೀನಿನ ಮಳೆ ಅನೇಕ ಕಡೆ ಬಿದ್ದ ವರದಿಯಾಗಿದೆ.
ಅಕ್ಟೋಬರ್ 2016 ರಲ್ಲಿ, ಜೈಪುರದ ಖಾನ್ಸೂರಜ್‌ಪುರ ಗ್ರಾಮದ ನಿವಾಸಿಗಳು ಭಾರೀ ಮಳೆಯೊಂದಿಗೆ ಆಕಾಶದಿಂದ ಬೀಳುವ ಮೀನುಗಳನ್ನು ಕಂಡು ಅಚ್ಚರಿಗೊಂಡಿದ್ದರು.ಅದಕ್ಕೂ ಮುನ್ನ 2015ರ ಜೂನ್‌ನಲ್ಲಿ ಆಂಧ್ರಪ್ರದೇಶದ ಗೊಲ್ಲಮುಡಿ ಮತ್ತು ಪಲ್ಲಗಿರಿ ಗ್ರಾಮಸ್ಥರು ‘ಮೀನು ಮಳೆ’ಗೆ ಸಾಕ್ಷಿಯಾಗಿದ್ದರು ಎಂದು ವರದಿಯಾಗಿತ್ತು.
ಜುಲೈ 2010 ರಲ್ಲಿ, ವಾರಣಾಸಿಯ ಸಾರನಾಥದಲ್ಲಿ ಸ್ಥಳೀಯರು “ಪ್ರಬಲ ಮಾನ್ಸೂನ್ ಶವರ್ ನಂತರ ರಸ್ತೆಯ ಮಧ್ಯದಲ್ಲಿ ಜೀವಂತ ಮೀನುಗಳನ್ನು” ನೋಡಿದ್ದಾರೆ ಎಂದು ವರದಿಯಾಗಿತ್ತು.

ಹಾಗಾದರೆ, ನಿಜವಾಗಿಯೂ ‘ಮೀನು’ ಮಳೆಯಾಗುತ್ತದೆಯೇ?
ಉತ್ತರ ಹೌದು ಮತ್ತು ಇಲ್ಲ. ಯಾಕೆಂದರೆ ಮೀನುಗಳು ಮೋಡಗಳಿಂದ ನಿಖರವಾಗಿ ಬೀಳುವುದಿಲ್ಲ. ಬದಲಾಗಿ, ಜೀವಿಗಳು ಮೂಲಭೂತವಾಗಿ ಬಲವಾದ ಗಾಳಿಯಿಂದ ಹತ್ತಿರದ ಜಲಮೂಲಗಳಿಂದ ಆಕಾಶಕ್ಕೆ ನೆಗೆದು ಭೂಮಿಗೆ ಬೀಳುತ್ತವೆ.
ಈ ಅಪರೂಪದ ವಿದ್ಯಮಾನವು ಸಾಮಾನ್ಯವಾಗಿ ಸುಂಟರಗಾಳಿಗಳಿಂದ ಉಂಟಾಗುತ್ತದೆ ಎಂದು ವಿಜ್ಞಾನಿಗಳು ನಂಬುತ್ತಾರೆ. ಸುಂಟರಗಾಳಿಯು ನೀರಿನ ದೇಹದ ಮೇಲೆ ವಾಟರ್‌ಸ್ಪೌಟ್ (ನೀರಿನ ತಿರುಗುವ ಕಾಲಮ್ ) ಅನ್ನು ರಚಿಸಿದಾಗ, ಅದು ಸಾಮಾನ್ಯವಾಗಿ ಮೀನು ಮತ್ತು ಇತರ ಜೀವಿಗಳನ್ನು ಸುಳಿಯೊಳಗೆ ಹೀರಿಕೊಂಡು ಮೇಲಕ್ಕೆ ಒಯ್ಯುತ್ತದೆ.
ಈ ಪ್ರಯಾಣಿಸುವ ಸುಂಟರಗಾಳಿ ವೇಗವನ್ನು ಕಳೆದುಕೊಂಡಾಗ, ಅದರ ಸುಳಿಯೊಳಗೆ ಸಿಲುಕಿರುವ ಜೀವಿಗಳು ಬೀಳಲು ಪ್ರಾರಂಭಿಸುತ್ತವೆ. ಪ್ರಾರಂಭಿಸುತ್ತಾರೆ, ಕೆಲವೊಮ್ಮೆ ನೀರೊನಿಟ್ಟಿಗೆ ಆಕಾಶದಿಂದ ಬೀಳುವಾಗ ಮೀನುಗಳ ಮಳೆಯಂತೆ ಕಾಣುತ್ತದೆ ಎಂದು ವವಿಜ್ಞಾನಿಗಳು ಹೇಳುತ್ತಾರೆ.

ಪ್ರಮುಖ ಸುದ್ದಿ :-   'ಐಸ್‌ಕ್ರೀಂ ಮ್ಯಾನ್‌' ಖ್ಯಾತಿಯ ನ್ಯಾಚುರಲ್ಸ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ ಕಾಮತ್ ನಿಧನ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement